ರಸ್ತೆ ಅಪಘಾತದಲ್ಲಿ ಹಿನ್ನಲೆ ಗಾಯಕಿ ಗೀತಾ ಮಾಲಿ ಸಾವು

ಮರಾಠಿ ಚಿತ್ರಗಳಿಗಾಗಿ ಹಾಡಿದ್ದ ಹಿನ್ನೆಲೆ ಗಾಯಕ ಗೀತಾ ಮಾಲಿ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

Updated: Nov 15, 2019 , 11:22 AM IST
ರಸ್ತೆ ಅಪಘಾತದಲ್ಲಿ ಹಿನ್ನಲೆ ಗಾಯಕಿ ಗೀತಾ ಮಾಲಿ ಸಾವು

ನವದೆಹಲಿ: ಮರಾಠಿ ಚಿತ್ರಗಳಿಗಾಗಿ ಹಾಡಿದ್ದ ಹಿನ್ನೆಲೆ ಗಾಯಕ ಗೀತಾ ಮಾಲಿ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಗೀತಾ ಮಾಲಿ ಮತ್ತು ಅವರ ಪತಿ ವಿಜಯ್ ಅಮೇರಿಕಾದಿಂದ ಹಿಂದಿರುಗಿದ ನಂತರ ತಮ್ಮ ಊರಾದ ನಾಸಿಕ್ ಗೆ ತೆರಳಲು ಅವರು ಮುಂಬೈ-ಆಗ್ರಾ ಹೆದ್ದಾರಿಯಲ್ಲಿದ್ದರು, ಮಧ್ಯಾಹ್ನ 3 ಗಂಟೆ ಸುಮಾರಿಗೆ ಅವರ ಕಾರು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಕಂಟೇನರ್ ಗೆ ಡಿಕ್ಕಿ ಹೊಡೆದಿದೆ.

ಗೀತಾ ಮಾಲಿ ಮತ್ತು ಅವರ ಪತಿ ಇಬ್ಬರೂ ಗಂಭೀರವಾಗಿ ಗಾಯಗೊಂಡು ಶಹಪುರ್ ಗ್ರಾಮೀಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಈ ಸಂದರ್ಭದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಗೀತಾ ಮಾಲಿ ಕೊನೆಯುಸಿರೆಳೆದರು ಎನ್ನಲಾಗಿದೆ. ಅಪಘಾತಕ್ಕೆ ಸ್ವಲ್ಪ ಮುಂಚೆ, ಗಾಯಕಿ ತಮ್ಮ ಎರಡು ತಿಂಗಳ ಯುಎಸ್ ಪ್ರವಾಸದ ಪೋಸ್ಟ್ ನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದರು.