PM Kisan: ಮುಂದಿನ ತಿಂಗಳು ಯಾವ ರೈತರಿಗೆ ಸಿಗಲಿದೆ 2000ರೂ., ನಿಮ್ಮ ಹೆಸರನ್ನು ಹೀಗೆ ಪರಿಶೀಲಿಸಿ

ನೀವು ಸಹ ಕೃಷಿಕರಾಗಿದ್ದರೆ ಮತ್ತು ನಿಮ್ಮ ಹೆಸರನ್ನು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ನೋಂದಾಯಿಸಿಕೊಂಡಿದ್ದರೆ ಹಣ ನಿಮ್ಮ ಖಾತೆಗೆ ಬರುತ್ತದೆಯೋ ಇಲ್ಲವೋ ಎಂಬುದನ್ನು ಸುಲಭವಾಗಿ ಪರಿಶೀಲಿಸಿ.

Written by - Yashaswini V | Last Updated : Nov 18, 2020, 01:23 PM IST
  • ಪ್ರಧಾನ್ ಮಂತ್ರಿ ಕಿಸಾನ್ ಸಮ್ಮನ್ ನಿಧಿ ಯೋಜನೆಯ 7ನೇ ಕಂತು ಮುಂದಿನ ತಿಂಗಳು ರೈತರ ಬ್ಯಾಂಕ್‌ ಖಾತೆಗಳಿಗೆ ಸೇರಲಿದೆ.
  • ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ ಲಕ್ಷಾಂತರ ರೈತರು ಲಾಭ ಪಡೆದಿದ್ದಾರೆ.
  • ನೀವು ಸಹ ಕೃಷಿಕರಾಗಿದ್ದರೆ ಮತ್ತು ನಿಮ್ಮ ಹೆಸರನ್ನು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ನೋಂದಾಯಿಸಿಕೊಂಡಿದ್ದರೆ ಹಣ ನಿಮ್ಮ ಖಾತೆಗೆ ಬರುತ್ತದೆಯೋ ಇಲ್ಲವೋ ಎಂಬುದನ್ನು ಸುಲಭವಾಗಿ ಪರಿಶೀಲಿಸಿ.
PM Kisan: ಮುಂದಿನ ತಿಂಗಳು ಯಾವ ರೈತರಿಗೆ ಸಿಗಲಿದೆ 2000ರೂ., ನಿಮ್ಮ ಹೆಸರನ್ನು ಹೀಗೆ ಪರಿಶೀಲಿಸಿ title=

ನವದೆಹಲಿ: ಪ್ರಧಾನ್ ಮಂತ್ರಿ ಕಿಸಾನ್ ಸಮ್ಮನ್ ನಿಧಿ ಯೋಜನೆ  (PM Kisan Samman Nidhi)ಯ  7ನೇ ಕಂತು ಮುಂದಿನ ತಿಂಗಳು ರೈತರ ಬ್ಯಾಂಕ್‌ ಖಾತೆಗಳಿಗೆ ಸೇರಲಿದೆ. ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ ಲಕ್ಷಾಂತರ ರೈತರು ಲಾಭ ಪಡೆದಿದ್ದಾರೆ. ಈವರೆಗೆ ಈ ಯೋಜನೆಯ 6 ಕಂತುಗಳನ್ನು ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ. 2020ರ ಡಿಸೆಂಬರ್ ಮೊದಲ ವಾರದಲ್ಲಿ ಏಳನೇ ಕಂತಿನ 2000 ರೂಪಾಯಿಗಳನ್ನು ರೈತರ ಖಾತೆಗೆ ವರ್ಗಾಯಿಸಬಹುದು ಎಂದು ನಿರೀಕ್ಷಿಸಲಾಗಿದೆ.

ಯಾವ ರೈತರಿಗೆ ಸಿಗಲಿದೆ ಕಂತು ಎಂದು ಪರಿಶೀಲಿಸಿ:-
ನೀವು ಸಹ ಕೃಷಿಕರಾಗಿದ್ದರೆ ಮತ್ತು ನಿಮ್ಮ ಹೆಸರನ್ನು ಪಿಎಂ ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi) ಯೋಜನೆಗೆ ನೋಂದಾಯಿಸಿಕೊಂಡಿದ್ದರೆ ಹಣ ನಿಮ್ಮ ಖಾತೆಗೆ ಬರುತ್ತದೆಯೋ ಇಲ್ಲವೋ ಎಂಬುದನ್ನು ಸುಲಭವಾಗಿ ಪರಿಶೀಲಿಸಿ. ನಿಮ್ಮ ಹೆಸರು ಪಟ್ಟಿಯಲ್ಲಿದ್ದರೆ ನಿಮಗೆ ಕಂತು ಸಿಗುತ್ತದೆ. ನಿಮ್ಮ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿಲ್ಲದಿದ್ದರೆ, ಅದಕ್ಕಾಗಿ ನೀವು ದೂರು ಸಲ್ಲಿಸಬಹುದು. 

1. ಮೊದಲು ಪಿಎಂ ಕಿಸಾನ್ (PM Kisan) ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ https://pmkisan.gov.in
2. 'ಫಾರ್ಮರ್ಸ್ ಕಾರ್ನರ್' ನಲ್ಲಿ ಸಾಕಷ್ಟು ಆಯ್ಕೆಗಳಿವೆ, ಅದರಲ್ಲಿ ಒಂದು ಆಯ್ಕೆಯು 'ಫಲಾನುಭವಿಗಳ ಪಟ್ಟಿ'ಯೂ ಆಗಿರುತ್ತದೆ. ಇದನ್ನು ಕ್ಲಿಕ್ ಮಾಡಿ
3. 'ಫಲಾನುಭವಿಗಳ ಪಟ್ಟಿ' ಕ್ಲಿಕ್ ಮಾಡಿದಾಗ ಹೊಸ ಪುಟ ತೆರೆಯುತ್ತದೆ. ಈ ಪುಟದಲ್ಲಿ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಮತ್ತು ಗ್ರಾಮದ ಮಾಹಿತಿಯನ್ನು ಆಯ್ಕೆಮಾಡಿ ಮತ್ತು ಗೆಟ್ ರಿಪೋರ್ಟ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
4. ಪಟ್ಟಿಯಲ್ಲಿ ಹಲವು ಪುಟಗಳು ಇರುತ್ತವೆ ಆದ್ದರಿಂದ ನೀವು ಅದರಲ್ಲಿ ನಿಮ್ಮ ಹೆಸರನ್ನು ಕಂಡುಹಿಡಿಯಬೇಕು
5. ನೀವು ಕೆಲವು ದಿನಗಳ ಹಿಂದೆ ಅರ್ಜಿ ಸಲ್ಲಿಸಿದ್ದರೆ, ನಂತರ ಸ್ವಯಂ ನೋಂದಾಯಿತ / ಸಿಎಸ್ಸಿ ಫಾರ್ಮರ್ ಆಯ್ಕೆಯನ್ನು ಕ್ಲಿಕ್ ಮಾಡಿ

PM Kisan Samman Nidhi: ನಿಮ್ಮ ಖಾತೆಗೆ 6000 ರೂ. ಬರದಿದ್ದರೆ ಇಲ್ಲಿ ದೂರು ನೀಡಿ

ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ದೂರು ನೀಡಿ:
ಹಿಂದಿನ ಪಟ್ಟಿಯಲ್ಲಿ ಅನೇಕ ಜನರು ತಮ್ಮ ಹೆಸರನ್ನು ಹೊಂದಿದ್ದರು, ಆದರೆ ಹೊಸ ಪಟ್ಟಿಯಲ್ಲಿ ಕೆಲವರ ಹೆಸರು ಇಲ್ಲದಿರುವ ಬಗ್ಗೆ ಇತ್ತೀಚಿಗೆ ವರದಿಯಾಗಿದೆ. ಈ ಪಟ್ಟಿಯಲ್ಲಿ ನಿಮ್ಮ ಹೆಸರೂ ಕೂಡ ಇಲ್ಲದಿದ್ದರೆ ನಂತರ ನೀವು ಪಿಎಂ ಕಿಸಾನ್ ಸಮ್ಮನ್ ಸಹಾಯವಾಣಿ ಸಂಖ್ಯೆಯಲ್ಲಿ ದೂರು ಸಲ್ಲಿಸಬಹುದು. ಇದಕ್ಕಾಗಿ ನೀವು ಸಹಾಯವಾಣಿ ಸಂಖ್ಯೆ 011-24300606 ಗೆ ಕರೆ ಮಾಡಬಹುದು. ಕಳೆದ ಬಾರಿ ಬಹುತೇಕ ಜನರಿಗೆ ಈ ಯೋಜನೆಯ ಲಾಭ ಸಿಗಲಿಲ್ಲ. ಆಗ ತಮ್ಮ ಮಾಹಿತಿಯನ್ನು ಭರ್ತಿ ಮಾಡುವಲ್ಲಿ ಕೆಲವು ತಪ್ಪುಗಳನ್ನು ಮಾಡಿರುವ ರೈತರಿಗೆ (Farmers) ಈ ತೊಂದರೆ ಎದುರಾಗಿದೆ ಎಂದು ಕೃಷಿ ಸಚಿವಾಲಯ ಹೇಳಿದೆ. ಇದಕ್ಕಾಗಿ ನೀವು ಅರ್ಜಿ ಸಲ್ಲಿಸಿದ್ದರೆ ಒಮ್ಮೆ ಭರ್ತಿ ಮಾಡಿದ ಮಾಹಿತಿಯನ್ನು ನೀವು ನವೀಕರಿಸುವುದು ಬಹಳ ಮುಖ್ಯ.

ಈ ಕುಟುಂಬಗಳಿಗೆ ಸಿಗುವುದಿಲ್ಲ PM-KISAN ಯೋಜನೆಯ ಲಾಭ

ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆ ಎಂದರೇನು?
ಕಿಸಾನ್ ಸಮ್ಮನ್ ನಿಧಿ ಯೋಜನೆಯಡಿ ಮೋದಿ ಸರ್ಕಾರ (Modi Government) ಬಡ ರೈತರಿಗೆ ಪ್ರತಿವರ್ಷ 6000 ರೂ.  ನೀಡುತ್ತದೆ. ಈ ಯೋಜನೆಯಲ್ಲಿ ಕಂತುಗಳಲ್ಲಿ ರೈತರಿಗೆ ಹಣ ತಲುಪುತ್ತದೆ. ಮೊದಲ ಕಂತು ಡಿಸೆಂಬರ್ 1 ರಿಂದ ಮಾರ್ಚ್ 31 ರವರೆಗೆ ಬರುತ್ತದೆ, ಎರಡನೇ ಕಂತು ಏಪ್ರಿಲ್ 1 ರಿಂದ ಜುಲೈ 31 ರವರೆಗೆ ಮತ್ತು ಮೂರನೇ ಕಂತು ಆಗಸ್ಟ್ 1 ಮತ್ತು ನವೆಂಬರ್ 30 ರ ನಡುವೆ ರೈತರ ಖಾತೆಗೆ ವರ್ಗಾಯಿಸಲ್ಪಡುತ್ತದೆ.   
 

Trending News