PM Kisan ಯೋಜನೆಯ 9ನೇ ಕಂತಿನ ಪಟ್ಟಿ ಬಿಡುಗಡೆ : ಲಿಸ್ಟ್ ಅಲ್ಲಿ ನಿಮ್ಮ ಹೆಸರು ಇದೆಯಾ ಬೇಗ ಪರಿಶೀಲಿಸಿ

ಪ್ರಧಾನ ಮಂತ್ರಿ ಕಿಸಾನ್ ಯೋಜನೆ 9 ನೇ ಕಂತಿನ ರೈತರ ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿದೆ. ಈ ಯೋಜನೆಯ ಮೂಲಕ ರೈತರ ಖಾತೆಗೆ 2000 ರೂ. ಜಮಾ ಮಾಡಲಾಗುತ್ತದೆ. ಈ ಯೋಜನೆಯಡಿ ಈವರೆಗೆ 8 ಕಂತುಗಳ ಹಣ ರೈತರ ಖಾತೆಗೆ ಜಮಾ ಮಾಡಲಾಗಿದೆ.

Written by - Channabasava A Kashinakunti | Last Updated : Aug 1, 2021, 04:35 PM IST
  • ಆಗಸ್ಟ್ ತಿಂಗಳು ರೈತರಿಗೆ ಸಿಹಿ ಸುದ್ದಿ ಸಿಗಲಿದೆ
  • ಈ ಯೋಜನೆಯ ಮೂಲಕ ರೈತರ ಖಾತೆಗೆ 2000 ರೂ. ಜಮಾ
  • ಪಿಎಂ ಕಿಸಾನ್ ಯೋಜನೆ 9 ನೇ ಕಂತಿನ ರೈತರ ಪಟ್ಟಿ ಬಿಡುಗಡೆ
PM Kisan ಯೋಜನೆಯ 9ನೇ ಕಂತಿನ ಪಟ್ಟಿ ಬಿಡುಗಡೆ : ಲಿಸ್ಟ್ ಅಲ್ಲಿ ನಿಮ್ಮ ಹೆಸರು ಇದೆಯಾ ಬೇಗ ಪರಿಶೀಲಿಸಿ title=

ನವದೆಹಲಿ : ಆಗಸ್ಟ್ ತಿಂಗಳಲ್ಲಿ ರೈತರಿಗೆ ಸಿಹಿ ಸುದ್ದಿ ಸಿಗಲಿದೆ. ಪ್ರಧಾನ ಮಂತ್ರಿ ಕಿಸಾನ್ ಯೋಜನೆ 9 ನೇ ಕಂತಿನ ರೈತರ ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿದೆ. ಈ ಯೋಜನೆಯ ಮೂಲಕ ರೈತರ ಖಾತೆಗೆ 2000 ರೂ. ಜಮಾ ಮಾಡಲಾಗುತ್ತದೆ. ಈ ಯೋಜನೆಯಡಿ ಈವರೆಗೆ 8 ಕಂತುಗಳ ಹಣ ರೈತರ ಖಾತೆಗೆ ಜಮಾ ಮಾಡಲಾಗಿದೆ. ನೀವು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ, ಬೇಗ ದರ ಸ್ಟೇಟಸ್ ಚೆಕ್ ಮಾಡಿ.

ಆಗಸ್ಟ್ ನಲ್ಲಿ ರೈತರಿಗೆ ಉಡುಗೊರೆ :

ಕೇಂದ್ರ ಸರ್ಕಾರವು ರೈತರ(Farmers) ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಮತ್ತು ಅವರ ಆದಾಯವನ್ನು ಹೆಚ್ಚಿಸುವ ಸಲುವಾಗಿ 2000 (PM ಕಿಸಾನ್ ಯೋಜನೆ ಪ್ರಯೋಜನಗಳು) ಅಂದರೆ 6000 ರೂಪಾಯಿಗಳ ಮೂರು ಕಂತುಗಳನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡುತ್ತದೆ. ಇಲ್ಲಿಯವರೆಗೆ, ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 8 ಕಂತುಗಳ ಹಣ ರೈತರ ಖಾತೆಗೆ ಬಂದಿದೆ. ಈಗ ಮುಂದಿನ ಅಂದರೆ 9 ನೇ ಕಂತಿನ ಹಣ ರೈತರ ಖಾತೆಗೆ ಬರಲಿದೆ.

ಇದನ್ನೂ ಓದಿ : ಮೊದಲ ರಾತ್ರಿಯಂದೇ ಟೆರೇಸ್‌ನಿಂದ ಜಿಗಿದು ಓಡಿಹೋದ ನವವಧು..!: ಕಾರಣ ಏನು ಗೊತ್ತಾ?

ಯೋಜನೆಯ ಉದ್ದೇಶವೇನು?

ಈ ಯೋಜನೆ(PM Kisan Samman Yojana)ಯ ಉದ್ದೇಶ ದೇಶದ ರೈತರ ಆದಾಯವನ್ನು ಹೆಚ್ಚಿಸುವುದು ಮತ್ತು ಅವರಿಗೆ ನೇರವಾಗಿ ಆರ್ಥಿಕ ಸಹಾಯ ಮಾಡುವುದು. 9ನೇ ಕಂತಿಗೆ ಕಾಯುತ್ತಿರುವ ರೈತರಿಗೆ ಆಗಸ್ಟ್ ನಲ್ಲಿ ಮತ್ತೆ ಒಳ್ಳೆಯ ಸುದ್ದಿ ಸಿಗಲಿದೆ. ನೀವು ಕೂಡ ಇದಕ್ಕೆ ಅರ್ಜಿ ಸಲ್ಲಿಸಿದ್ದರೆ, ನಂತರ ನೀವು ನಿಮ್ಮ ಹೆಸರನ್ನು ಈ ಪಟ್ಟಿಯಲ್ಲಿ ಪರಿಶೀಲಿಸಬಹುದು.

ಇದನ್ನೂ ಓದಿ : Bank Holidays In August 2021: ಈ ತಿಂಗಳಿನಲ್ಲಿ ಒಟ್ಟು ಅರ್ಧ ತಿಂಗಳು ಕಾಲ ಬ್ಯಾಂಕ್ ಬಂದ್ ಇರಲಿವೆ

ನಿಮ್ಮ ಕಂತಿನ ಸ್ಟೇಟಸ್ ಪರಿಶೀಲಿಸಿ

1. ನಿಮ್ಮ ಕಂತಿನ ಸ್ಟೇಟಸ್ ನೋಡಲು, ನೀವು ಮೊದಲು ವೆಬ್‌ಸೈಟ್‌ https://pmkisan.gov.in/ ಗೆ ಹೋಗಿ.
2. ಇದರ ನಂತರ ಬಲಭಾಗದಲ್ಲಿರುವ ಫಾರ್ಮರ್ಸ್ ಕಾರ್ನರ್ ಮೇಲೆ ಕ್ಲಿಕ್ ಮಾಡಿ.
3. ಈಗ ಫಲಾನುಭವಿ ಸ್ಟೇಟಸ್ ಆಯ್ಕೆಯನ್ನು ಕ್ಲಿಕ್ ಮಾಡಿ.
4. ಈಗ ನಿಮ್ಮ ಮುಂದೆ ಹೊಸ ಪುಟ ತೆರೆಯುತ್ತದೆ.
5. ಇಲ್ಲಿ ನೀವು ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
6. ಇದರ ನಂತರ ನೀವು ನಿಮ್ಮ ಸ್ಟೇಟಸ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯುತ್ತೀರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News