Modi Government 3.0:ಮೂರನೇ ಅವಧಿಗೂ ಬಿಜೆಪಿ : ಇದೇ ನಮ್ಮ ಗ್ಯಾರಂಟಿ ಎಂದ ಪ್ರಧಾನಿ ಮೋದಿ

PM Narendra Modi Guarantee For Third Term:ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿದ ಪ್ರಧಾನಿ, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆಲುವಿನೊಂದಿಗೆ ಮೂರನೇ ಬಾರಿಗೆ ಅಧಿಕಾರ ಹಿಡಿಯುವ ವಿಶ್ವಾಸ ವ್ಯಕ್ತಪಡಿಸಿದರು.   

Written by - Ranjitha R K | Last Updated : Feb 8, 2024, 11:51 AM IST
  • ಮೂರನೇ ಅವಧಿಗೂ ಬಿಜೆಪಿ ಸರ್ಕಾರ ರಚನೆಯಾಗುವ ವಿಶ್ವಾಸ
  • ಜನ ಈಗಾಗಲೇ 'ಮೋದಿ 3.0' ಎಂದು ಕರೆಯುತ್ತಿದ್ದಾರೆ
  • ಬುಲೆಟ್ ರೈಲು ಮತ್ತು ವಂದೇ ಭಾರತ್ ರೈಲುಗಳ ವಿಸ್ತರಣೆ
Modi Government 3.0:ಮೂರನೇ ಅವಧಿಗೂ ಬಿಜೆಪಿ : ಇದೇ ನಮ್ಮ ಗ್ಯಾರಂಟಿ ಎಂದ ಪ್ರಧಾನಿ ಮೋದಿ  title=

PM Narendra Modi Guarantee For Third Term : ಲೋಕಸಭೆ ಚುನಾವಣೆಗೂ ಮುನ್ನವೇ  ಪ್ರಧಾನಿ ನರೇಂದ್ರ ಮೋದಿ ಮೂರನೇ ಅವಧಿಗೂ ಬಿಜೆಪಿ ಸರ್ಕಾರ ರಚನೆಯಾಗುವ  ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ 40 ಸ್ಥಾನಗಳನ್ನು ಉಳಿಸಿಕೊಳ್ಳಲಿ ಎಂದು ವ್ಯಂಗ್ಯವಾಡಿದ್ದಾರೆ. ವಿರೋಧ ಪಕ್ಷವು ಹಳತಾಗಿದ್ದು, ಅದರ 'ವಾರೆಂಟಿ'ಯೂ ಉಳಿದುಕೊಂಡಿಲ್ಲ ಎಂದು ಹೇಳಿದ್ದಾರೆ. ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿದ ಪ್ರಧಾನಿ, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆಲುವಿನೊಂದಿಗೆ ಮೂರನೇ ಬಾರಿಗೆ ಅಧಿಕಾರ ಹಿಡಿಯುವ ವಿಶ್ವಾಸ ವ್ಯಕ್ತಪಡಿಸಿದರು.

ಮೋದಿ 3.0 : 
ಬಿಜೆಪಿ ಮೂರನೇ ಬಾರಿಗೆ ಅಧಿಕಾರ ವಹಿಸಿಕೊಳ್ಳುವ ದಿನ ದೂರವಿಲ್ಲ. ಜನರು ಈಗಾಗಲೇ 'ಮೋದಿ 3.0'ಎಂದು ಕರೆಯುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.  ಮುಂದಿನ ಐದು ವರ್ಷಗಳಲ್ಲಿ ಭಾರತದ ಅಡಿಪಾಯವನ್ನು ಬಲಪಡಿಸಲು ಶಕ್ತಿ ಮೀರಿ ಶ್ರಮಿಸುವುದಾಗಿ ಹೇಳಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ ಬುಲೆಟ್ ರೈಲು ಮತ್ತು ವಂದೇ ಭಾರತ್ ರೈಲುಗಳ ವಿಸ್ತರಣೆಯಾಗಲಿದೆ ಎಂದು ಹೇಳಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಸ್ವಾವಲಂಬಿ ಭಾರತ ಅಭಿಯಾನ ಹೊಸ ಎತ್ತರಕ್ಕೆ ಏರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ : Repo Rate update : ಬ್ಯಾಂಕ್ ಲೋನ್ ಮೇಲಿನ EMI ಮೇಲೆ ಬಿಗ್ ಅಪ್ಡೇಟ್ ! ಹೊರಬಿತ್ತು RBI ನಿರ್ಧಾರ

ಮುಂಬರುವ ಐದು ವರ್ಷಗಳಲ್ಲಿ ‘ಮೇಡ್ ಇನ್ ಇಂಡಿಯಾ’ ಸೆಮಿಕಂಡಕ್ಟರ್ ಗಳ ವಿಷಯದಲ್ಲಿ ಭಾರತದ ಹೆಸರು ವಿಶ್ ಮಟ್ಟದಲ್ಲಿ ಕೇಳಿಬರಲಿದೆ ಎಂದರು. ಮುಂದಿನ ಐದು ವರ್ಷಗಳಲ್ಲಿ ಚಿಕಿತ್ಸೆಯು ಅತ್ಯಂತ ಅಗ್ಗವಾಗಲಿದೆ ಎನ್ನುವ ಭರವಸೆಯನ್ನು ಪ್ರಧಾನಿ ಮೋದಿ ನೀಡಿದ್ದಾರೆ. ಪ್ರತಿಯೊಬ್ಬ ಬಡವನ ಮನೆಯಲ್ಲೂ ನಲ್ಲಿ ಸಂಪರ್ಕ ಇರುತ್ತದೆ ಎಂದ ಪ್ರಧಾನಿ,  ಗ್ರೀಮ್ ಹೈಡ್ರೋಜನ್ ನಿಂದ  ನೈಸರ್ಗಿಕ ಕೃಷಿವರೆಗಿನ ಗ್ಯಾರಂಟಿ ನೀಡಿದ್ದಾರೆ.  ಈ ರೀತಿ ಮುಂದಿನ ಐದು ವರ್ಷಗಳ ಕಾರ್ಯಸೂಚಿಯನ್ನು ಸದನದ ಮುಂದಿಟಿದ್ದಾರೆ. 

'ಕಾಂಗ್ರೆಸ್‌ನ ವಾರಂಟಿ ಮುಗಿದಿದೆ' :
ಭಾರತ 3.0 ಅನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಸರ್ಕಾರ ತನ್ನ ಎಲ್ಲಾ ಪ್ರಯತ್ನಗಳನ್ನು ಮಾಡಲಿದೆ ಎಂದು ಪ್ರಧಾನಿ ಹೇಳಿದರು. ತಮ್ಮ ಸರ್ಕಾರದ 10 ವರ್ಷಗಳ ಅವಧಿಯು ದೊಡ್ಡ ಮತ್ತು ನಿರ್ಣಾಯಕ ನಿರ್ಧಾರಗಳಿಂದ ತುಂಬಿದೆ ಎಂದು ಪ್ರಧಾನಿ ಬಣ್ಣಿಸಿದರು. ಮುಂಬರುವ ಚುನಾವಣೆಯಲ್ಲಿ ದೇಶವು ' ವಾರಂಟಿ ಮುಗಿದವರನ್ನು ನಂಬುವುದಿಲ್ಲ, ಗ್ಯಾರಂಟಿ ನೀಡುವವರನ್ನು ನಂಬುತ್ತದೆ ಎಂದಿದ್ದಾರೆ. ಒಂದೂವರೆ ಗಂಟೆಯ ಭಾಷಣದಲ್ಲಿ ರಾಹುಲ್ ಗಾಂಧಿ ಲಿಫ್ಟ್ ಮಾಡುವುದಕ್ಕೂ ಆಗದ, ಲಾಂಚ್ ಮಾಡುವುದಕ್ಕೂ ಆಗದ  ‘ನಾನ್ ಸ್ಟಾರ್ಟರ್’ ಎಂದು ವ್ಯಂಗ್ಯವಾಡಿದ್ದಾರೆ.  

ಇದನ್ನೂ ಓದಿ : 29 ರೂ. ಅಕ್ಕಿ, 27 ರೂ.ಗೆ ಗೋಧಿಹಿಟ್ಟು, 60 ರೂ.ಗೆ ಬೇಳೆ ಭಾರತ್ ಬ್ರಾಂಡ್ ನಿಂದ ಜನಸಾಮಾನ್ಯರಿಗೆ ರಿಲೀಫ್ ! ಖರೀದಿ ಕೂಡಾ ಬಲು ಸುಲಭ

'ಅಭಿವೃದ್ಧಿ ಹೊಂದಿದ ಭಾರತ ಎನ್ನುವುದು ಬರೀ ಮಾತಲ್ಲ : 
ಕಳೆದ 10 ವರ್ಷಗಳಲ್ಲಿ, ಭಾರತವು ವಿಶ್ವದ ಅಗ್ರ ಐದು ಆರ್ಥಿಕತೆಗಳಲ್ಲಿ ಒಂದಾಗಿದೆ. 2047ರ ವೇಳೆಗೆ ದೇಶವನ್ನು ಮರಳಿ ಭಾರತದ ಸುವರ್ಣ ಯುಗಕ್ಕೆ ತರಲು ತಮ್ಮ ಕೈಲಾದ ಪ್ರಯತ್ನ ಮಾಡುವುದಾಗಿ ಹೇಳಿದರು. 'ಅಭಿವೃದ್ಧಿ ಹೊಂದಿದ ಭಾರತ ಕೇವಲ ಮಾತಲ್ಲ,  ಇದು ನಮ್ಮ ಬದ್ಧತೆ ಎದ್ನು ಹೇಳಿದ್ದಾರೆ. ನಮ್ಮ ಪ್ರತಿ ಉಸಿರು, ಪ್ರತಿ ಆಲೋಚನೆಯೂ ಇದಕ್ಕಾಗಿ ಸಮರ್ಪಿತವಾಗಿದೆ ಎಂದು ಹೇಳಿದ್ದಾರೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News