Indian Railways : ರೈಲ್ವೇ ಪ್ರಯಾಣಿಕರಿಗೊಂದು ಸಂತಸದ ಸುದ್ದಿ. ದೇಶದಲ್ಲಿ ಮೂರನೇ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ಸಿಕ್ಕಿದೆ. ಗುಜರಾತ್ ಜನತೆಗೆ ವಂದೇ ಭಾರತ್ ಎಕ್ಸ್ ಪ್ರೆಸ್ ಉಡುಗೊರೆ ಸಿಕ್ಕಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಈ ರೈಲಿಗೆ ಚಾಲನೆ ನೀಡಿದ್ದಾರೆ. ಈಗ ಮುಂಬೈ ಮತ್ತು ಗುಜರಾತ್ ನಡುವಿನ ಪ್ರಯಾಣಿಕರು ಅತಿ ಕಡಿಮೆ ಸಮಯದಲ್ಲಿ ಪ್ರಯಾಣ ಬೆಳೆಸಬಹುದು.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಇಲ್ಲಿಯವರೆಗೆ ಕೇವಲ ಎರಡು ಮಾರ್ಗಗಳಲ್ಲಿ ಸಂಚರಿಸುತ್ತಿತ್ತು. ದೆಹಲಿಯಿಂದ ವಾರಣಾಸಿ ಮತ್ತು ದೆಹಲಿಯಿಂದ ಕತ್ರಾ ನಡುವೆ ಎರಡು ವಂದೇ ಭಾರತ್ ರೈಲುಗಳು ಪ್ರಯಾಣ ಬೆಳಸಿತ್ತು. ಈ ಮಾರ್ಗದಲ್ಲಿ ಸಾಕಷ್ಟು ಪ್ರಯಾಣಿಕರು ಸಂಚರಿಸುತ್ತಾರೆ. ವಂದೇ ಭಾರತ್ ಎಕ್ಸ್‌ಪ್ರೆಸ್ ನ ಮೂರನೇ ರೈಲು ಗುಜರಾತ್ ಮತ್ತು ಮುಂಬೈ ನಡುವೆ ಸಂಚಾರ ನಡೆಸುತ್ತಿದೆ. ಇದರೊಂದಿಗೆ ವಂದೇ ಭಾರತ್‌ನ ಪ್ರಯಾಣ ದರವನ್ನೂ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ : ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕಣಕ್ಕಿಳಿದ ಖರ್ಗೆ..! ಏನಿದೆ ರಾಜಕೀಯ ಲೆಕ್ಕಾಚಾರ ?
20901 MMCT - GNC ವಂದೇ ಭಾರತ್ ಎಕ್ಸ್ ಪ್ರೆಸ್
ಚೇರ್ ಕಾರ್
ಬೇಸ್ ಫೇರ್ : 1135 ರೂ.
ರಿಸರ್ವೇಶನ್ ಶುಲ್ಕ : 40 ರೂ.
ಸೂಪರ್ ಫಾಸ್ಟ್ ಶುಲ್ಕ : 45 ರೂ.
ಜಿಎಸ್ ಟಿ :53 ರೂ.
ಒಟ್ಟು ಮೊತ್ತ :1275 ರೂ.
ಎಕ್ಸಿಕ್ಯೂಟಿವ್ ಚೇರ್ ಕಾರ್
ಬೇಸ್ ಫೇರ್ : 2209 ರೂ.
ರಿಸರ್ವೇಶನ್ ಶುಲ್ಕ : 60 ರೂ.
ಸೂಪರ್ ಫಾಸ್ಟ್ ಶುಲ್ಕ : 75 ರೂ.
ಜಿಎಸ್ ಟಿ : 108 ರೂ.
ಒಟ್ಟು ಮೊತ್ತ : 25 ರೂ.
20902 GNC- MMCT ವಂದೇ ಭಾರತ್ ಎಕ್ಸ್‌ಪ್ರೆಸ್
ಚೇರ್ ಕಾರ್
ಬೇಸ್ ಫೇರ್ : 1301 ರೂ.
ರಿಸರ್ವೇಶನ್ ಶುಲ್ಕ : 40 ರೂ.
ಸೂಪರ್‌ಫಾಸ್ಟ್ ಶುಲ್ಕ : 45 ರೂ.
ಜಿಎಸ್ ಟ : 53 ರೂ
ಒಟ್ಟು ಮೊತ್ತ : 1440 ರೂ
ಎಕ್ಸಿಕ್ಯೂಟಿವ್ ಚೇರ್ ಕಾರ್
ಬೇಸ್ ಫೇರ್ : 2403 ರೂ
ಇದನ್ನೂ ಓದಿ : Video : ಬೆಂಗಾವಲು ಪಡೆ ತಡೆದು ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಪ್ರಧಾನಿ ಮೋದಿ
ರೈಲಿನಲ್ಲಿರುವ ಸೌಲಭ್ಯಗಳು :
ವಂದೇ ಭಾರತ್‌ನ ಗರಿಷ್ಠ ವೇಗವನ್ನು ಗಂಟೆಗೆ 180 ಕಿಮೀ ವೇಗದಲ್ಲಿ ಟೆಸ್ಟ್ ಮಾಡಲಾಗಿದೆ. ಡ್ರೈವರ್ ಕ್ಯಾಬಿನ್ ಹೈಟೆಕ್ ವೈಶಿಷ್ಟ್ಯಗಳನ್ನು ಹೊಂದಿದೆ. ಇಲ್ಲಿ ಡ್ರೈವರ್ ಎಲ್ಲಾ ಮಾಹಿತಿಯನ್ನು ಡಿಜಿಟಲ್ ಮೋಡ್‌ನಲ್ಲಿ ಪಡೆಯುತ್ತಾನೆ. ಡ್ರೈವರ್‌ಗೆ ಟಾಕ್ ಬ್ಯಾಕ್ ಮೂಲಕ ಪ್ರಯಾಣಿಕರೊಂದಿಗೆ ಪ್ರಯಾಣಿಕ ಡ್ರೈವರ್‌ನೊಂದಿಗೆ ಮಾತನಾಡುವುದು ಕೂಡಾ ಸಾಧ್ಯವಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.