ನವದೆಹಲಿ: ದೇಶದ ಬಹುನಿರೀಕ್ಷಿತ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.
ಇದಕ್ಕೂ ಮುನ್ನ ರೈಲಿನೊಳಗೆ ಭೇಟಿ ನೀಡಿ ವೀಕ್ಷಿಸಿದ ಪ್ರಧಾನಿ ಮೋದಿ, ಬೆಳಿಗ್ಗೆ 11.45ಕ್ಕೆ ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿದರು. ಈ ರೈಲು ಫೆ.17 ರಿಂದ ದೆಹಲಿ-ವಾರಣಾಸಿ ಮಾರ್ಗವಾಗಿ ಚಲಿಸಲಿದೆ.
ಕಾರ್ಯಕ್ರಮ ಆರಂಭಕ್ಕೂ ಮುನ್ನ, ಪುಲ್ವಾಮಾದಲ್ಲಿ ಉಗ್ರರಿಂದ ಹತ್ಯೆಯಾದ ಯೋಧರಿಗೆ ಎರಡು ನಿಮಿಷಗಳ ಕಾಲ ಶ್ರದ್ಧಾಂಜಲಿ ಅರ್ಪಿಸಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಮೋದಿ, ಈ ದುರ್ಘಟನೆ ಕಾರಣರಾದವರಿಗೆ ತಕ್ಕ ಶಾಸ್ತಿ ಆಗಲಿದೆ ಎಂದು ಹೇಳಿದರು.
India gets the first Semi High Speed Train, 'Vande Bharat Express.' https://t.co/dSZLJaoWRY
— Narendra Modi (@narendramodi) February 15, 2019
ಬರೋಬ್ಬರಿ 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ರೈಲಿನಲ್ಲಿ ಒಟ್ಟು 16 ಬೋಗಿಗಳಿದ್ದು, 1100 ಪ್ರಯಾಣಿಕರನ್ನು ಒಮ್ಮೆಗೆ ಹೊತ್ತೊಯ್ಯಲಿದೆ. ದೆಹಲಿ ಹಾಗೂ ವಾರಣಾಸಿ ನಡುವಿನ ಎಸಿ ಚೇರ್ ಕಾರ್ ಟಿಕೆಟ್ ದರ 1,850 ರೂ. ಹಾಗೂ ಎಕ್ಸಿಕ್ಯುಟಿವ್ ಕ್ಲಾಸ್ ಟಿಕೆಟ್ ದರ 3,520 ರೂ. ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಶುಲ್ಕದಲ್ಲಿ ಕ್ಯಾಟರಿಂಗ್ ಸೇವಾ ಶುಲ್ಕ ಸಹ ಸೇರಿದೆ. ರಿಟರ್ನ್ ಟಿಕೆಟ್ ದರ ಎಸಿ ಚೇರ್ ಕಾರ್ ಗೆ 1,795 ರೂ. ಮತ್ತು ಎಕ್ಸಿಕ್ಯುಟಿವ್ ಕಾರ್ ದರ 3,470 ರೂ. ನಿಗದಿಪಡಿಸಲಾಗಿದೆ.