ತಿರುವನಂತಪುರಂ : ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಮಾರಣಾಂತಿಕ ಹಾನಿ ಮಾಡಿದ ಓಖಿ ಚಂಡಮಾರುತದಿಂದಾದ ಹಾನಿ ಕುರಿತಾಗಿ ಲಕ್ಷದ್ವೀಪದಲ್ಲಿ ಸಭೆ ನಡೆಸಿ ಮಾಹಿತಿ ಪಡೆದರು.
ನಿನ್ನೆ ರಾತ್ರಿ ಮಂಗಳೂರಿನಲ್ಲಿ ತಂಗಿದ್ದ ಪ್ರಧಾನಿ ಮೋದಿ, ಇಂದು ಬೆಳಗ್ಗೆ ಲಕ್ಷದ್ವೀಪಕ್ಕೆ ಭೇಟಿ ನೀಡಿದರು. ಬಳಿಕ, ಪ್ರಧಾನಿ ಚಂಡಮಾರುತದಿಂದ ಆಗಿರುವ ಹಾನಿಯ ಕುರಿತು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಮತ್ತು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಸೇರಿದಂತೆ ಇತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
Lakshadweep: Prime Minister Narendra Modi chairs a review meeting on the aftermath of #CycloneOckhi pic.twitter.com/gIVfqrJ2bg
— ANI (@ANI) December 19, 2017
ಇದೇ ಸಂದರ್ಭದಲ್ಲಿ ಓಖಿ ಚಂಡಮಾರುತದಿಂದ ಹಾನಿಗೊಳಗಾದ ಲಕ್ಷದ್ವೀಪದ ಕವರಟ್ಟಿಗೆ ಭೇಟಿ ನೀಡಿ, ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿದರು.
Prime Minister Narendra Modi met families of victims affected by #CycloneOckhi in #Lakshadweep's Kavaratti pic.twitter.com/Nbgb1Cne1N
— ANI (@ANI) December 19, 2017
ಇದಕ್ಕೂ ಮುನ್ನ ಲಕ್ಷದ್ವೀಪದಲ್ಲಿ ಪ್ರಧಾನಿ ಅವರನ್ನು ಶಾಲೆ, ಕಾಲೇಜು ವಿದ್ಯಾರ್ಥಿಗಳು ಸ್ವಾಗತಿಸಿದರು. ಸ್ವಾಗತ ಕೋರಿದ ಮಕ್ಕಳ ಜತೆ ಮೋದಿ ಕೆಲ ಕಾಲ ಮಾತನಾಡಿದರು.
School students greeted Prime Minister Narendra Modi on his arrival in #Lakshadweep's Kavaratti (Earlier visuals) pic.twitter.com/HiAhREjTKu
— ANI (@ANI) December 19, 2017
ಲಕ್ಷದ್ವೀಪದಿಂದ ಈಗ ಕೇರಳಕ್ಕೆ ಪ್ರಧಾನಿ ಮೋದಿ ತೆರಳಿದ್ದು, ಅವರನ್ನು ತಿರುವನಂತಪುರದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸ್ವಾಗತಿದರು.
ಕಳೆದ ನವೆಂಬರ್ 30ರಂದು ಕೇರಳ ಮತ್ತು ತಮಿಳುನಾಡಿನ ಕರಾವಳಿ ಪ್ರದೇಶಗಳಿಗೆ ಓಖಿ ಚಂಡಮಾರುತ ಅಪ್ಪಳಿಸಿದ್ದರಿಂದ ಕರಾವಳಿ ಭಾಗದಲ್ಲಿ ನೂರಾರು ಮನೆಗಳು ನೆಲಕ್ಕಪ್ಪಳಿಸಿ ಲಕ್ಷಾಂತರ ಮೌಲ್ಯದ ಆಸ್ತಿ-ಪಾಸ್ತಿ ನಷ್ಟವಾಯಿತು. ಅಲ್ಲದೆ ಓಖಿ ಚಂಡಮಾರುತ ಪರಿಣಾಮ ನಡೆದ ವಿವಿಧ ದುರಂತಗಳಲ್ಲಿ ನೂರು ಮಂದಿ ಅಸು ನೀಗಿ ಸುಮಾರು 600ಕ್ಕೂ ಹೆಚ್ಚು ಮೀನುಗಾರರು ನಾಪತ್ತೆಯಾಗಿದ್ದರು.