ಆರ್ಬಿಐ ಅನುಮೋದನೆಗೂ ಮೊದಲೇ ನೋಟು ನಿಷೇಧಿಕರಣ ಘೋಷಿಸಿದ್ದ ಪ್ರಧಾನಿ ಮೋದಿ

ನವಂಬರ್ 8, 2016 ರಂದು 500 ಹಾಗೂ 1000 ನೋಟಗಳನ್ನು ನೋಟು ನಿಷೇಧಿಕರಣದ ಅಡಿ ಸ್ಥಗಿತಗೊಳಿಸುವ ಮೊದಲು ಪ್ರಧಾನಿ ಮೋದಿ ಭಾರತೀಯ ರಿಸರ್ವ್ ಬ್ಯಾಂಕ್ ಕೇಂದ್ರೀಯ ಬೋರ್ಡ್ ನಿಂದ ಯಾವುದೇ ಅಧಿಕೃತ ಅನುಮೋದನೆ ಪಡೆಯದೆ ಘೋಷಿಸಿದ್ದರು ಎನ್ನುವ ಮಾಹಿತಿ ಈಗ ಮಾಹಿತಿ ಹಕ್ಕು ಕಾಯ್ದೆ ಅಡಿ ಬಹಿರಂಗವಾಗಿದೆ.

Last Updated : Mar 11, 2019, 07:06 PM IST
ಆರ್ಬಿಐ ಅನುಮೋದನೆಗೂ ಮೊದಲೇ ನೋಟು ನಿಷೇಧಿಕರಣ ಘೋಷಿಸಿದ್ದ ಪ್ರಧಾನಿ ಮೋದಿ title=
file photo

ನವದೆಹಲಿ: ನವಂಬರ್ 8,2016 ರಂದು 500 ಹಾಗೂ 1000 ನೋಟಗಳನ್ನು ನೋಟು ನಿಷೇಧಿಕರಣದ ಅಡಿ ಸ್ಥಗಿತಗೊಳಿಸುವ ಮೊದಲು ಪ್ರಧಾನಿ ಮೋದಿ ಭಾರತೀಯ ರಿಸರ್ವ್ ಬ್ಯಾಂಕ್ ಕೇಂದ್ರೀಯ ಬೋರ್ಡ್ ನಿಂದ ಯಾವುದೇ ಅಧಿಕೃತ ಅನುಮೋದನೆ ಪಡೆಯದೆ ಘೋಷಿಸಿದ್ದರು ಎನ್ನುವ ಮಾಹಿತಿ ಈಗ ಮಾಹಿತಿ ಹಕ್ಕು ಕಾಯ್ದೆ ಅಡಿ ಬಹಿರಂಗವಾಗಿದೆ.

ನೋಟು ನಿಷೇಧಿಕರಣದ ಘೋಷಣೆಗೂ ಮೊದಲು ಪ್ರಧಾನಿ ಮೋದಿ ಕೇವಲ ಎರಡೂವರೆ ಗಳ ಕಾಲ ಮಾತುಕತೆ ನಡೆಸಿದ್ದರು.ಆದರೆ ಇದಾದ ಐದು ವಾರಗಳ ನಂತರ ಆರ್ ಬಿ ಐ ಗವರ್ನರ್ ಡಿಸೆಂಬರ್ 15, 2016 ರಂದು ಸಹಿ ಹಾಕಿದ್ದರು ಎನ್ನುವ ಸಂಗತಿ ಆರ್ಟಿಐ ಮಾಹಿತಿ ಮೂಲಕ ತಿಳಿದುಬಂದಿದೆ.ಇದೇ ಮಾಹಿತಿಯಡಿಯಲ್ಲಿ ಆರ್ಬಿಐ ನೀಡಿರುವ ಉತ್ತರದಲ್ಲಿ  ಪೆಟ್ರೋಲ್ ಪಂಪ್ ಗಳಲ್ಲಿ  ಬಿಲ್ ಪಾವತಿಗಾಗಿ ಬಳಸಿದ 1000 ಹಾಗೂ 500 ರೂ ನೋಟಗಳ ಕುರಿತಾಗಿ ಯಾವುದೇ ಅಂಕಿ ಅಂಶ ತನ್ನ ಬಳಿ ಇಲ್ಲವೆಂದು ಆರ್ಬಿಐ ಹೇಳಿದೆ.

ಈ ಹಿಂದೆ ಆರ್ಬಿಐ ತನ್ನ 2017-18 ರ ವಾರ್ಷಿಕ ವರದಿ ಪ್ರಕಾರ ಹಿಂಪಡೆದ ಎಲ್ಲ ಹಣ ಈಗ ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿದೆ ಎಂದು ಹೇಳಿಕೆ ನೀಡಿತ್ತು. ಇದರಲ್ಲಿ 15.31 ಲಕ್ಷ ಕೋಟಿ ಮೌಲ್ಯದ 500 ಹಾಗೂ 1000ರೂ ನೋಟುಗಳನ್ನು ಸ್ವೀಕರಿಸಿತ್ತು ಎಂದು ಆರ್ಬಿಐ ಹೇಳಿದೆ.

Trending News