PM Modi: ಬಿಜೆಪಿಯ ವಿಶೇಷಚೇತನ ಕಾರ್ಯಕರ್ತನ ಜೊತೆ ಪಿಎಂ ಮೋದಿ ಸೆಲ್ಫಿ! ಹೃದಯವಂತ ಅಂದ್ರು ನೆಟ್ಟಿಗರು

PM Modi Selfie: ಈರೋಡ್‌ನ ಹೆಮ್ಮೆಯ ತಮಿಳುನಾಡು ಬಿಜೆಪಿ ಕಾರ್ಯಕರ್ತನ ಜೊತೆ ಚೆನ್ನೈ ಪ್ರವಾಸದ ವೇಳೆ ಪ್ರಧಾನಿ ಮೋದಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋಗಳು ವೈರಲ್‌ ಆಗುತ್ತಿವೆ.   

Written by - Chetana Devarmani | Last Updated : Apr 9, 2023, 01:26 PM IST
  • ಬಿಜೆಪಿಯ ವಿಶೇಷಚೇತನ ಕಾರ್ಯಕರ್ತ
  • ವಿಶೇಷಚೇತನ ಕಾರ್ಯಕರ್ತನ ಜೊತೆ ಪಿಎಂ ಮೋದಿ ಸೆಲ್ಫಿ
  • ಎಲ್ಲೆಡೆ ವೈರಲ್‌ ಆಗ್ತಿವೆ ಫೋಟೋಗಳು
PM Modi: ಬಿಜೆಪಿಯ ವಿಶೇಷಚೇತನ ಕಾರ್ಯಕರ್ತನ ಜೊತೆ ಪಿಎಂ ಮೋದಿ ಸೆಲ್ಫಿ! ಹೃದಯವಂತ ಅಂದ್ರು ನೆಟ್ಟಿಗರು  title=

ಚೆನ್ನೈ (ತಮಿಳುನಾಡು) : ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೈದರಾಬಾದ್ ಮತ್ತು ಚೆನ್ನೈ ಪ್ರವಾಸ ಕೈಗೊಂಡಿದ್ದರು. ಒಂದು ದಿನದ ಭೇಟಿಯ ಕೊನೆಯಲ್ಲಿ ಭಾರತೀಯ ಜನತಾ ಪಕ್ಷದ ವಿಶೇಷಚೇತನ ಕಾರ್ಯಕರ್ತನೊಂದಿಗೆ ಸೆಲ್ಫಿ ತೆಗೆದುಕೊಂಡರು. ಶ್ರೀ ಎಸ್ ಮಣಿಕಂದನ್ ಅವರು ಪಕ್ಷದ ಹೆಮ್ಮೆಯ ಸದಸ್ಯ ಎಂದು ಮೋದಿ ಶ್ಲಾಘಿಸಿದರು.  "ಒಂದು ವಿಶೇಷ ಸೆಲ್ಫಿ... ನಾನು ಶ್ರೀ ಎಸ್. ಮಣಿಕಂದನ್ ಅವರನ್ನು ಚೆನ್ನೈನಲ್ಲಿ ಭೇಟಿ ಮಾಡಿದ್ದೇನೆ. ಅವರು ಈರೋಡ್‌ನ ಹೆಮ್ಮೆಯ ತಮಿಳುನಾಡು ಬಿಜೆಪಿ ಕಾರ್ಯಕರ್ತ. ವಿಶೇಷಚೇತನರಾಗಿದ್ದರೂ ಅವರು ಸ್ವಂತ ಅಂಗಡಿ ನಡೆಸುತ್ತಿದ್ದಾರೆ ಮತ್ತು ತಮ್ಮ ದೈನಂದಿನ ಲಾಭದ ಗಣನೀಯ ಭಾಗವನ್ನು ಬಿಜೆಪಿಗೆ ದಾನ ಮಾಡುತ್ತಿದ್ದಾರೆ" ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Dhanashree Verma : ಚಹಾಲ್ ಪತ್ನಿ ಜೊತೆ ಪಾರ್ಟಿ! ಟೀಂ ಇಂಡಿಯಾ ಕ್ರಿಕೆಟರ್‌ ಫೋಟೋಸ್‌ ವೈರಲ್‌

ಮೊನ್ನೆ ಶನಿವಾರ ಹೈದರಾಬಾದ್‌ಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರು ಚೆನ್ನೈಗೆ ಆಗಮಿಸಿ ಎರಡೂ ನಗರಗಳಲ್ಲಿ ₹13,700 ಕೋಟಿ ಮೊತ್ತದ ಯೋಜನೆಗಳನ್ನು ಉದ್ಘಾಟಿಸಿದರು. ಚೆನ್ನೈನಲ್ಲಿ, ಅವರು ಚೆನ್ನೈ ವಿಮಾನ ನಿಲ್ದಾಣದ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಿದರು ಮತ್ತು ಚೆನ್ನೈ-ಕೊಯಂಬತ್ತೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಗ್ರೀನ್‌ ಸಿಗ್ನಲ್‌ ನೀಡಿದರು.

 

 

ಸಂಜೆ ಚೆನ್ನೈನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ತಮಿಳುನಾಡಿನ ಶ್ರೀಮಂತ ಇತಿಹಾಸವನ್ನು ಶ್ಲಾಘಿಸಿದರು. "ಇದು ಭಾಷೆ ಮತ್ತು ಸಾಹಿತ್ಯದ ನಾಡು ಮತ್ತು ದೇಶಭಕ್ತಿ ಮತ್ತು ರಾಷ್ಟ್ರೀಯ ಮನೋಭಾವದ ಕೇಂದ್ರವಾಗಿದೆ. ದೇಶದ ಅನೇಕ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು ತಮಿಳುನಾಡಿನವರು ಎಂದರು. ಚೆನ್ನೈನಲ್ಲಿ ₹ 5,200 ಕೋಟಿ ಮೌಲ್ಯದ ಯೋಜನೆಗಳನ್ನು ಪ್ರಾರಂಭಿಸಿದರು ಮತ್ತು 2014 ರ ನಂತರದ ಎನ್‌ಡಿಎ ಅವರು ಭಾರತದ ಮೂಲಸೌಕರ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಸರ್ಕಾರದ ಪ್ರಯತ್ನಗಳನ್ನು ಶ್ಲಾಘಿಸಿದರು.

ಇದನ್ನೂ ಓದಿ: PM Modi Bandipur Visit: ಓಪನ್ ಜೀಪಿನಲ್ಲಿ ʻನಮೋʼ ಸಫಾರಿ.. ಪ್ರಧಾನಿಗೆ ಹುಲಿ ದರ್ಶನ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News