ಕೊರೋನಾದಿಂದ ಪಾರಾಗಲು ಮೋದಿ ಸಪ್ತ ಸೂತ್ರ

ನಮ್ಮಲ್ಲಿ ಕೇವಲ 550 ಕರೋನಾ ಪ್ರಕರಣಗಳು ಇದ್ದಾಗಲೇ 21 ದಿನಗಳ ಸಂಪೂರ್ಣ ಲಾಕ್‌ಡೌನ್‌ಗಾಗಿ ಭಾರತ ದೊಡ್ಡ ಹೆಜ್ಜೆ ಇಟ್ಟಿದೆ. ಭಾರತವು ಸಮಸ್ಯೆ ಬೆಳೆಯಲು ಕಾಯಲಿಲ್ಲ ಬದಲಿಗೆ ಸಮಸ್ಯೆ ಕಾಣಿಸಿಕೊಂಡ ಕೂಡಲೇ ಅದನ್ನು ತಡೆಯಲು ಪ್ರಯತ್ನಿಸಿತು. 

Written by - Yashaswini V | Last Updated : Apr 14, 2020, 10:56 AM IST
ಕೊರೋನಾದಿಂದ ಪಾರಾಗಲು ಮೋದಿ ಸಪ್ತ ಸೂತ್ರ title=
Image courtesy: ANI

ನವದೆಹಲಿ: ಮಾರಕ‌ ಕೊರೋನಾ ವಿರುದ್ಧದ ಹೋರಾಟದಲ್ಲಿ ಜಯಗಳಿಸಲು ಮೂರು ತಿಂಗಳು   ಲಾಕ್‍ಡೌನ್ (Lockdown) ನಿಯಮಗಳನ್ನು ಪಾಲಿಸಿ ಎಂದು ಮನವಿ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಈ ವೇಳೆ ಸಪ್ತ ಸೂತ್ರವನ್ನು ಪಾಲಿಸಿ ಎಂದು ದೇಶವಾಸಿಗಳಿಗೆ ಕರೆ ನೀಡಿದರು‌.

ಮೋದಿ ಹೇಳಿದ ಸಪ್ತ ಸೂತ್ರಗಳು:

1)  ನಿಮ್ಮ ನಿಮ್ಮ ಮನೆಗಳಲ್ಲಿರುವ ಹಿರಿಯ ನಾಗರಿಕರು ಮತ್ತು ಮಕ್ಕಳ ಬಗ್ಗೆ ಹೆಚ್ಚು ಜಾಗೃತೆ ವಹಿಸಿ.

2) ಈ ಸಂದರ್ಭದಲ್ಲಿ ನಮ್ಮ ದೇಹದಲ್ಲಿನ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವು ಅತ್ಯಗತ್ಯ. ಆದುದರಿಂದ ಆಯುಷ್ಯ ಇಲಾಖೆ ಸೂಚಿಸಿರುವ ಕ್ರಮಗಳನ್ನು ಕೈಗೊಳ್ಳಿ.

3) ಕೊರೋನಾ  ಕೋವಿಡ್ 19 (Covid-19) ಸೋಂಕು ಹರಡುತ್ತಿರುವ ಬಗ್ಗೆ ಆರೋಗ್ಯ ಸೇತು ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ. ಬೇರೆಯವರಿಗೂ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಲು ತಿಳಿಸಿ.

4) ಕೊರೋನಾ ಕಾರಣಕ್ಕೆ ಸಂಕಷ್ಟಕ್ಕೆ ಸಿಲುಕಿರುವ ಬಡವರು ಮತ್ತು ನಿರ್ಗತಿಕರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ.

5) ಕೊರೋನಾ ಸೋಂಕು ನಮಗೆ ತಲುಪುವುದನ್ನು ತಡೆಯಲು ಬಿಸಿ ನೀರು‌ ಕುಡಿಯಿರಿ.

6) ದೇಶದ ಯಾವುದೇ ಕಂಪನಿಗಳು ತಮ್ಮ ನೌಕರರನ್ನು ಈ ಕಷ್ಟಕಾಲದಲ್ಲಿ ಕೆಲಸದಿಂದ ತೆಗೆಯಬಾರದು. ಎಲ್ಲರಿಗೂ ಈ ಕೆಲಸ ಬಹಳ ಅನಿವಾರ್ಯ.

7) ಕೊರೋನಾ ಮಹಾಮಾರಿ ವಿರುದ್ಧ ಹೋರಾಡುತ್ತಿರುವ ವೈದ್ಯರು, ಪೌರ ಕಾರ್ಮಿಕರು ಮತ್ತು ಪೊಲೀಸರಿಗೆ ಗೌರವಕೊಡಿ.

ದೇಶವಾಸಿಗಳಿಗೆ ಮೋದಿ ಮಹಾ ಸಂದೇಶ: ಮೇ 3ರವರೆಗೆ ಲಾಕ್‌ಡೌನ್ ವಿಸ್ತರಣೆ

ಇದೇ ವೇಳೆ ನಮ್ಮಲ್ಲಿ ಕೇವಲ 550 ಕೊರೊನಾವೈರಸ್  (Coronavirus) ಪ್ರಕರಣಗಳು ಇದ್ದಾಗಲೇ 21 ದಿನಗಳ ಸಂಪೂರ್ಣ ಲಾಕ್‌ಡೌನ್‌ಗಾಗಿ ಭಾರತ ದೊಡ್ಡ ಹೆಜ್ಜೆ ಇಟ್ಟಿದೆ. ಭಾರತವು ಸಮಸ್ಯೆ ಬೆಳೆಯಲು ಕಾಯಲಿಲ್ಲ ಬದಲಿಗೆ ಸಮಸ್ಯೆ ಕಾಣಿಸಿಕೊಂಡ ಕೂಡಲೇ ಅದನ್ನು ತಡೆಯಲು ಪ್ರಯತ್ನಿಸಿತು. ಆರ್ಥಿಕ ದೃಷ್ಟಿಕೋನದಿಂದ ನೋಡಿದರೆ, ಅದು ಈಗ ದುಬಾರಿಯಾಗಿದೆ ಆದರೆ ಭಾರತೀಯರ ಜೀವನದ ಮುಂದೆ, ಯಾವುದೇ ಹೋಲಿಕೆ ಸಾಧ್ಯವಿಲ್ಲ ಎಂದು ಪ್ರಧಾನಿ ಹೇಳಿದರು.

ಕಳೆದ ಕೆಲವು ದಿನಗಳಿಂದ ಕರೋನಾ ವೈರಸ್ ವಿರುದ್ಧ ಉತ್ತಮ ಹೋರಾಟ ನಡೆಯುತ್ತಿದೆ ಎಂದು ತಿಳಿಸಿದ ಪ್ರಧಾನಿ ನರೇಂದ್ರ ಮೋದಿ ನಿಮ್ಮೆಲ್ಲರಿಗೂ ಸಾಕಷ್ಟು ತೊಂದರೆ ಉಂಟಾಗಿದೆ. ಎಷ್ಟು ಸಮಸ್ಯೆಗಳು ಸಂಭವಿಸಿವೆ ಎಂಬುದು ನನಗೆ ತಿಳಿದಿದೆ.  ಕೆಲವರಿಗೆ ಓಡಾಡಲು ತೊಂದರೆಯಾಗಿದೆ. ಕೆಲವರಿಗೆ ಊಟಕ್ಕೂ ಸಮಸ್ಯೆ ಇದೆ. ಕೆಲವರು ಕುಟುಂಬದಿಂದ ದೂರವಾಗಿದ್ದಾರೆ. ಆದರೆ ದೇಶದ ಹಿತದೃಷ್ಟಿಯಿಂದ ನೀವು ಶಿಸ್ತುಬದ್ಧ ಸೈನಿಕನಂತೆ ನಿಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದೀರಿ. ನಿಮ್ಮ ತ್ಯಾಗ, ಸಂಯಮದಿಂದಾಗಿ ಭಾರತವು ಇಲ್ಲಿಯವರೆಗೆ ಕರೋನಾದಿಂದ ಉಂಟಾದ ಹಾನಿಯನ್ನು ದೊಡ್ಡ ಮಟ್ಟದಲ್ಲಿ ತಪ್ಪಿಸಲು ಸಮರ್ಥವಾಗಿದೆ ಎಂದವರು ತಿಳಿಸಿದರು. 
 

Trending News