ಜನರು ಮೂರ್ಖರು ಎಂದು ತಿಳಿದಿರುವುದನ್ನು ಪ್ರಧಾನಿ ಮೋದಿ ಮೊದಲು ಬಿಡಬೇಕು-ಪ್ರಿಯಾಂಕಾ ಗಾಂಧಿ

ಪ್ರಧಾನಿ ಮೋದಿಯವರು ಕಾಂಗ್ರೆಸ್ ವಿರುದ್ಧ ವಂಶ ರಾಜಕಾರಣದ ವಿರುದ್ದ ಟೀಕಿಸಿ ಬುಧುವಾರದಂದು ಬ್ಲಾಗ್ ವೊಂದನ್ನು ಬರೆದಿದ್ದರು. ಈಗ ಅದಕ್ಕೆ ಉತ್ತರಿಸಿ ಜನರು ಮೂರ್ಖರು ಎಂದು ತಿಳಿಯುವುದನ್ನು  ಪ್ರಧಾನಿ ಮೋದಿ ಮೊದಲು ನಿಲ್ಲಿಸಲಿ ಎಂದು ಪ್ರಿಯಾಂಕಾ ಗಾಂಧಿ ತಿರುಗೇಟು ನೀಡಿದ್ದಾರೆ. 

Last Updated : Mar 20, 2019, 01:13 PM IST
ಜನರು ಮೂರ್ಖರು ಎಂದು ತಿಳಿದಿರುವುದನ್ನು ಪ್ರಧಾನಿ ಮೋದಿ ಮೊದಲು ಬಿಡಬೇಕು-ಪ್ರಿಯಾಂಕಾ ಗಾಂಧಿ title=
file photo

ನವದೆಹಲಿ: ಪ್ರಧಾನಿ ಮೋದಿಯವರು ಕಾಂಗ್ರೆಸ್ ವಿರುದ್ಧ ವಂಶ ರಾಜಕಾರಣದ ವಿರುದ್ದ ಟೀಕಿಸಿ ಬುಧುವಾರದಂದು ಬ್ಲಾಗ್ ವೊಂದನ್ನು ಬರೆದಿದ್ದರು.ಈಗ ಅದಕ್ಕೆ ಉತ್ತರಿಸಿ ಜನರು ಮೂರ್ಖರು ಎಂದು ತಿಳಿಯುವುದನ್ನು ಪ್ರಧಾನಿ ಮೋದಿ ಮೊದಲು ನಿಲ್ಲಿಸಲಿ ಎಂದು ಪ್ರಿಯಾಂಕಾ ಗಾಂಧಿ ತಿರುಗೇಟು ನೀಡಿದ್ದಾರೆ 

ಪ್ರಧಾನಿ ಮೋದಿ ತಮ್ಮ ಬ್ಲಾಗ್ ನಲ್ಲಿ ದೇಶದ ಜನರು 2014ರಲ್ಲಿ ವಂಶ ರಾಜಕಾರಣದ ಬದಲು ಪ್ರಾಮಾಣಿಕತೆಗೆ ಮತವನ್ನು ಹಾಕಿದ್ದಾರೆ ಎಂದು ಬರೆದುಕೊಂಡಿದ್ದರು. ಇನ್ನು ಮುಂದುವರೆದು ವಂಶ ಪಾರಂಪರಿಕ ರಾಜಕಾರಣ ಯಾವಾಗ ಪ್ರಭಾವಿಶಾಲಿಯಾಗಿತ್ತೂ ಆಗೆಲ್ಲ ಸರ್ಕಾರಿ ಸಂಸ್ಥೆಗಳು ಇಕ್ಕಟ್ಟಿಗೆ ಸಿಲುಕಿವೆ ಎಂದು ಪ್ರಧಾನಿ ಮೋದಿ ಹೇಳಿದ್ದರು.

ಉತ್ತರ ಪ್ರದೇಶದಲ್ಲಿ ಮೂರು ದಿನಗಳ ಪ್ರಚಾರದಲ್ಲಿರುವ ಪ್ರಿಯಾಂಕಾ ಗಾಂಧಿ, ಪ್ರಧಾನಿ ಮೋದಿ ಟೀಕೆಗೆ ಉತ್ತರಿಸುತ್ತಾ "ಬಿಜೆಪಿ ಕಳೆದ 5 ವರ್ಷಗಳಲ್ಲಿ ಎಲ್ಲ ಸಂಸ್ಥೆಗಳನ್ನು ಅದರಲ್ಲಿ ಮೀಡಿಯಾವನ್ನು ಸೇರಿ ದಾಳಿ ಮಾಡಿದೆ. ಆದ್ದರಿಂದ ಪ್ರಧಾನಿ ಮೊದಲು ಜನರು ಮೂರ್ಖರು ಎಂದು ತಿಳಿದಿರುವುದನ್ನು ಬಿಡಬೇಕು ಅದೆಲ್ಲವನ್ನು ಜನರು ನೋಡುತ್ತಿರುತ್ತಾರೆ ಎನ್ನುವುದನ್ನು ತಿಳಿಯಬೇಕು ಎಂದು ಪ್ರಿಯಾಂಕಾ ಗಾಂಧಿ ಪ್ರತ್ಯುತ್ತರ ನೀಡಿದರು.
 

Trending News