ಪ್ರಧಾನಿ ಕಚೇರಿ ಮೋದಿ ಭಾಷಣದ ಪ್ರಸಾರಕ್ಕಾಗಿ ಅನುಮತಿ ಪಡೆದಿಲ್ಲ-ಚುನಾವಣಾ ಆಯೋಗ

ಪ್ರಧಾನಿ ಮಿಷನ್ ಶಕ್ತಿ ಘೋಷಣೆ ವಿಚಾರವಾಗಿ ಚುನಾವಣಾ ಆಯೋಗವು ಪರಿಶೀಲನೆ ನಡೆಸುತ್ತಿದೆ. ಈಗಾಗಲೇ ದೂರದರ್ಶನ ಹಾಗೂ ಆಲ್ ಇಂಡಿಯಾ ರೇಡಿಯೋದಿಂದ ಪ್ರತಿಕ್ರಿಯೆ ಪಡೆದಿದೆ.

Last Updated : Mar 29, 2019, 02:09 PM IST
ಪ್ರಧಾನಿ ಕಚೇರಿ ಮೋದಿ ಭಾಷಣದ ಪ್ರಸಾರಕ್ಕಾಗಿ ಅನುಮತಿ ಪಡೆದಿಲ್ಲ-ಚುನಾವಣಾ ಆಯೋಗ  title=

ನವದೆಹಲಿ: ಪ್ರಧಾನಿ ಮಿಷನ್ ಶಕ್ತಿ ಘೋಷಣೆ ವಿಚಾರವಾಗಿ ಚುನಾವಣಾ ಆಯೋಗವು ಪರಿಶೀಲನೆ ನಡೆಸುತ್ತಿದೆ. ಈಗಾಗಲೇ ದೂರದರ್ಶನ ಹಾಗೂ ಆಲ್ ಇಂಡಿಯಾ ರೇಡಿಯೋದಿಂದ ಪ್ರತಿಕ್ರಿಯೆ ಪಡೆದಿದೆ.

ಇದುವರೆಗೆ ಚುನಾವಣಾ ಸಮಿತಿಯು ಎರಡು ಮೀಟಿಂಗ್ ಗಳನ್ನು ನಡೆಸಿದ್ದು, ಶುಕ್ರವಾರ ಸಾಯಂಕಾಲ ವರದಿ ಸಿದ್ದಗೊಳ್ಳಲಿದೆ ಎನ್ನಲಾಗಿದೆ.ಪ್ರಧಾನಿ ಮೋದಿ ಅವರು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆಯೇ ಇಲ್ಲವೆ ಎನ್ನುವ ವಿಚಾರವಾಗಿ ಚುನಾವಣಾ ಆಯೋಗವು ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ ಎನ್ನಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಉಪ ಚುನಾವಣಾಧಿಕಾರಿ ಸಂದೀಪ್ ಸಕ್ಸೇನಾ ಅವರು ಪ್ರಧಾನಿ ಕಚೇರಿ ಮೋದಿ ಭಾಷಣದ ಕುರಿತಾಗಿ ಮಾಹಿತಿಯನ್ನು ನೀಡಿಲ್ಲ ಮತ್ತು ಅನುಮತಿಯನ್ನು ಪಡೆದಿಲ್ಲ ಎಂದು ಹೇಳಿದ್ದರು. ಈ ವಿಚಾರವಾಗಿ ಪ್ರತಿಪಕ್ಷಗಳು ಸಹಿತ ಪ್ರಶ್ನೆ ಎತ್ತಿದ ಹಿನ್ನಲೆಯಲ್ಲಿ ಚುನಾವಣಾ ಸಮಿತಿಯನ್ನು ನೇಮಕ ಮಾಡಿ ಈ ವಿಚಾರವಾಗಿ ತನಿಖೆ ನಡೆಸುತ್ತಿದೆ.

ಪ್ರಧಾನಿ ಮೋದಿ ಮಿಷನ್ ಶಕ್ತಿ ಘೋಷಣೆ ಭಾಷಣಕ್ಕೆ ಕಾಂಗ್ರೆಸ್ ನ ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಹಾಗೂ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರು ಚುನಾವಣೆಯ ಹಿನ್ನಲೆಯಲ್ಲಿ ವೈಜ್ಞಾನಿಕ ಸಂಗತಿಯೊಂದನ್ನು ರಾಜಕೀಯವಾಗಿ ಬಳಸಿಕೊಂಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು.

Trending News