ಬೆಂಗಳೂರು: ಇಂದು ದೇಶದೆಲ್ಲೆಡೆ ಸಂಭ್ರಮದಿಂದ ಹನುಮ ಜಯಂತಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಜೆಪಿ ನಾಯಕ ಬಿ.ಎಸ್ ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿ ಅನೇಕ ಗಣ್ಯರು ಜನರಿಗೆ ಶುಭಾಶಯ ಸಲ್ಲಿಸಿದ್ದಾರೆ.
ಇದನ್ನು ಓದಿ: KKR : ಮ್ಯಾಚ್ ವಿನ್ನರ್ಗಳಿಂದ ತುಂಬಿದೆ ಕೋಲ್ಕತ್ತಾ ಟೀಂ, ಪ್ಲೇಯಿಂಗ್ 11 ನಲ್ಲಿ ಈ ದಿಗ್ಗಜರು
ಮೋದಿ ಟ್ವೀಟ್: ‘ಶಕ್ತಿ, ಧೈರ್ಯ ಮತ್ತು ಸಂಯಮದ ಸಂಕೇತವಾದ ಭಗವಾನ್ ಹನುಮಾನ್ ಜನ್ಮವಾರ್ಷಿಕೋತ್ಸವದಂದು ಎಲ್ಲಾ ದೇಶವಾಸಿಗಳಿಗೆ ಶುಭಾಶಯಗಳು. ಪವನಪುತ್ರನ ಅನುಗ್ರಹದಿಂದ ಪ್ರತಿಯೊಬ್ಬರ ಜೀವನವು ಶಕ್ತಿ, ಬುದ್ಧಿವಂತಿಕೆ ಮತ್ತು ಜ್ಞಾನದಿಂದ ತುಂಬಿರಲಿ’ ಎಂದು ನರೇಂದ್ರ ಮೋದಿ ಟ್ವೀಟ್ ಮೂಲಕ ಶುಭಕೋರಿದ್ದಾರೆ.
Today, we mark the special occasion of Hanuman Jayanti. In Morbi, at 11 AM, a 108 feet statue of Hanuman ji will be inaugurated. I am honoured to be getting the opportunity to be a part of this programme via video conferencing. https://t.co/qjvLIHWWiO pic.twitter.com/kbHcIxd90Z
— Narendra Modi (@narendramodi) April 16, 2022
ಬಿಎಸ್ವೈ ಶುಭಾಶಯ: ‘ನಾಡಿನ ಸಮಸ್ತ ಭಕ್ತ ಜನತೆಗೆ ರಾಮಭಕ್ತ ಹನುಮಂತನ ಜಯಂತಿಯ ಶುಭಕಾಮನೆಗಳು. ನಾಡಿನಲ್ಲಿ ಧರ್ಮ, ಆರೋಗ್ಯ, ಸಂತೃಪ್ತಿ, ಸಮೃದ್ಧಿ ಸದಾ ನೆಲೆಸಲಿ, ಎಲ್ಲಾ ದುರಿತಗಳು ದೂರಾಗುವಂತೆ ಆಂಜನೇಯ ಸ್ವಾಮಿಯ ಕೃಪೆ ಸದಾ ಇರಲಿ ಎಂದು ಪ್ರಾರ್ಥಿಸೋಣ’ ಎಂದು ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
ನಾಡಿನ ಸಮಸ್ತ ಭಕ್ತ ಜನತೆಗೆ ರಾಮಭಕ್ತ ಹನುಮಂತನ ಜಯಂತಿಯ ಶುಭಕಾಮನೆಗಳು. ನಾಡಿನಲ್ಲಿ ಧರ್ಮ, ಆರೋಗ್ಯ, ಸಂತೃಪ್ತಿ, ಸಮೃದ್ಧಿ ಸದಾ ನೆಲೆಸಲಿ, ಎಲ್ಲಾ ದುರಿತಗಳು ದೂರಾಗುವಂತೆ ಆಂಜನೇಯ ಸ್ವಾಮಿಯ ಕೃಪೆ ಸದಾ ಇರಲಿ ಎಂದು ಪ್ರಾರ್ಥಿಸೋಣ. pic.twitter.com/kO8nD42y6F
— B.S.Yediyurappa (@BSYBJP) April 16, 2022
ಡಿಕೆಶಿ ಟ್ವೀಟ್: ‘ಜಾತಿ, ಮತ, ಬೇಧಗಳಿಂದ ಮುಕ್ತನಾದ ಪವನಪುತ್ರ ಹನುಮ ಜಯಂತಿಯ ಶುಭಾಶಯಗಳು. ಈ ಶುಭ ಸಂದರ್ಭದಲ್ಲಿ ಭಜರಂಗಬಲಿಯ ಆಶೀರ್ವಾದಕ್ಕೆ ಎಲ್ಲರೂ ಪಾತ್ರರಾಗಲಿ ಎಂದು ಹಾರೈಸುತ್ತೇನೆ’ ಎಂದು ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.
ಜಾತಿ, ಮತ, ಬೇಧಗಳಿಂದ ಮುಕ್ತನಾದ ಪವನಪುತ್ರ ಹನುಮ ಜಯಂತಿಯ ಶುಭಾಶಯಗಳು. ಈ ಶುಭ ಸಂದರ್ಭದಲ್ಲಿ ಭಜರಂಗಬಲಿಯ ಆಶೀರ್ವಾದಕ್ಕೆ ಎಲ್ಲರೂ ಪಾತ್ರರಾಗಲಿ ಎಂದು ಹಾರೈಸುತ್ತೇನೆ.#HanumanJayanti pic.twitter.com/MigzlOxXeh
— DK Shivakumar (@DKShivakumar) April 16, 2022
ಹೆಚ್ಡಿಕೆ ಟ್ವೀಟ್: ‘ನಾಡಿನ ಸಮಸ್ತ ಜನತೆಗೆ ಹನುಮ ಜಯಂತಿಯ ಶುಭಾಶಯಗಳು. ಶ್ರದ್ಧೆ, ಭಕ್ತಿ, ನಿಷ್ಠೆಯ ಪ್ರತೀಕವಾದ ಶ್ರೀರಾಮಭಕ್ತ ಶ್ರೀ ಆಂಜನೇಯಸ್ವಾಮಿ ಸ್ಮರಣೆಯಿಂದ ಸಕಲ ಕಷ್ಟಗಳೆಲ್ಲ ಹರಣವಾಗಲಿ ಎಂದು ಪ್ರಾರ್ಥಿಸುವುದಾಗಿ’ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
"
ಪವನ ತನಯ ಸಂಕಟಹರಣ
ಮಂಗಳಮೂರುತಿ ರೂಪ
ರಾಮ ಸೌಮಿತ್ರಿ ಸೀತಾ ಸಹಿತ
ನೆಲೆಸು ಹೃದಯದಿ ಸುರಭೂಪ
"
ನಾಡಿನ ಸಮಸ್ತ ಜನತೆಗೆ ಶ್ರೀ ಹನುಮ ಜಯಂತಿಯ ಶುಭಾಶಯಗಳು. ಶ್ರದ್ಧೆ, ಭಕ್ತಿ, ನಿಷ್ಠೆಯ ಪ್ರತೀಕವಾದ
ಶ್ರೀರಾಮಭಕ್ತ ಶ್ರೀ ಆಂಜನೇಯಸ್ವಾಮಿ ಸ್ಮರಣೆಯಿಂದ ಸಕಲ ಕಷ್ಟಗಳೆಲ್ಲ ಹರಣವಾಗಲಿ ಎಂದು ಪ್ರಾರ್ಥಿಸುತ್ತೇನೆ.#ಶ್ರೀಹನುಮಜಯಂತಿ pic.twitter.com/1yPYWF9mOQ— H D Kumaraswamy (@hd_kumaraswamy) April 16, 2022
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.