Population: ಈ ರಾಜ್ಯದಲ್ಲಿ ಹೆಚ್ಚು ಮಕ್ಕಳನ್ನು ಹೊಂದಿರುವ ಪೋಷಕರಿಗೆ ಸಿಗಲಿದೆ ಒಂದು ಲಕ್ಷ ರೂ.

ಮಿಜೋರಾಂ ಕ್ರೀಡಾ ಸಚಿವ ರಾಬರ್ಟ್ ರೊಮಾವಿಯಾ ರಾಯ್ಟೆ ಮಾತನಾಡಿ, ಹೆಚ್ಚಿನ ಮಕ್ಕಳನ್ನು ಹೊಂದಿರುವ ಪೋಷಕರಿಗೆ ಪ್ರಮಾಣಪತ್ರ ಮತ್ತು ಟ್ರೋಫಿಯ ಜೊತೆಗೆ 1 ಲಕ್ಷ ರೂ. ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

Written by - Yashaswini V | Last Updated : Jun 22, 2021, 09:50 AM IST
  • ಹೆಚ್ಚು ಮಕ್ಕಳನ್ನು ಹೊಂದಿರುವ ಪೋಷಕರಿಗೆ 1 ಲಕ್ಷ ಬಹುಮಾನ
  • ಬಹುಮಾನ ಘೋಷಿಸಿದ ಮಿಜೋರಾಂ ಕ್ರೀಡಾ ಸಚಿವ ರಾಬರ್ಟ್ ರೊಮಾವಿಯಾ ರಾಯ್ಟೆ
  • ಮಿಜೋ ಸಮುದಾಯದ ಜನಸಂಖ್ಯೆಯು ಗಂಭೀರ ಕಾಳಜಿಯ ವಿಷಯವಾಗಿದೆ ಎಂದ ಸಚಿವರು
Population: ಈ ರಾಜ್ಯದಲ್ಲಿ ಹೆಚ್ಚು ಮಕ್ಕಳನ್ನು ಹೊಂದಿರುವ ಪೋಷಕರಿಗೆ ಸಿಗಲಿದೆ ಒಂದು ಲಕ್ಷ ರೂ. title=
ಈ ರಾಜ್ಯದಲ್ಲಿ ಹೆಚ್ಚು ಮಕ್ಕಳನ್ನು ಹೊಂದಿರುವ ಪೋಷಕರಿಗೆ ನಗದು ಬಹುಮಾನ ಘೋಷಣೆ (Image courtesy: PTI)

ಐಜಾವ್ಲ್: ಮಿಜೋರಾಂ ಸಚಿವರೊಬ್ಬರು ಅನನ್ಯ ಘೋಷಣೆ ಮಾಡಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಹೆಚ್ಚು ಮಕ್ಕಳನ್ನು ಹೊಂದಿರುವ ಪೋಷಕರಿಗೆ ಪ್ರಮಾಣಪತ್ರ ಮತ್ತು ಟ್ರೋಫಿಯ ಜೊತೆಗೆ 1 ಲಕ್ಷ ರೂ. ನಗದು ಬಹುಮಾನ ನೀಡಲಾಗುವುದು ಎಂದು ಕ್ರೀಡಾ ಸಚಿವ ರಾಬರ್ಟ್ ರೊಮಾವಿಯಾ ರಾಯ್ಟೆ (Robert Romawia Royte)  ಹೇಳಿದರು.

ಈ ಘೋಷಣೆ ಹಿಂದಿನ ತಾರ್ಕಿಕತೆಯನ್ನು ವಿವರಿಸಿದ ಸಚಿವರು:
ಸಚಿವ ರಾಬರ್ಟ್ ರೊಮಾವಿಯಾ ರಾಯ್ಟ್‌ನ (Robert Romawia Royte) ಈ ಹಂತದ ಉದ್ದೇಶವು ಕಡಿಮೆ ಜನಸಂಖ್ಯೆ ಹೊಂದಿರುವ ಮಿಜೊ ಸಮುದಾಯಗಳನ್ನು ಪ್ರೋತ್ಸಾಹಿಸುವುದಾಗಿದೆ. ಮಿಜೊ ಸಮುದಾಯದಲ್ಲಿ (Mizo Communities) ಕಡಿಮೆ ಜನಸಂಖ್ಯೆಯ ಬೆಳವಣಿಗೆಯು ಗಂಭೀರ ಚಿಂತನೆಯ ವಿಷಯವಾಗಿದೆ ಎಂದು ಸಚಿವರು ಹೇಳಿದರು.

ಇದನ್ನೂ ಓದಿ- 2024ರ ಮಹಾಚನಾವಣೆಯಲ್ಲಿ ಬಿಜೆಪಿಗೆ ಸೆಡ್ಡು ಹೊಡೆಯಲಿದೆಯಾ ತೃತೀಯ ರಂಗ.? ಪ್ರಶಾಂತ್ ಕಿಶೋರ್ ಹೇಳಿದ್ದೇನು..?

ಜನಸಂಖ್ಯಾ ನಿಯಂತ್ರಣದ ನಡುವೆ ಸಚಿವರು ಘೋಷಣೆ:
ದೇಶದ ಅನೇಕ ರಾಜ್ಯಗಳು ಜನಸಂಖ್ಯಾ (Population) ನಿಯಂತ್ರಣ ನೀತಿಯನ್ನು ಬೆಂಬಲಿಸುತ್ತಿರುವ ಸಮಯದಲ್ಲಿ ರೊಮಾವಿಯಾ ರಾಯ್ಟೆ ಅವರ ಈ ಘೋಷಣೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಭಾನುವಾರ ಜರುಗಿದ ಫಾದರ್ಸ್ ಡೇ ಸಂದರ್ಭದಲ್ಲಿ, ಸಚಿವರು ತಮ್ಮ ಐಜಾಲ್ ಈಸ್ಟ್ -2 ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚು ಮಕ್ಕಳನ್ನು ಹೊಂದಿರುವ ಪೋಷಕರಿಗೆ ಒಂದು ಲಕ್ಷ ರೂಪಾಯಿಗಳ ನಗದು ಪ್ರೋತ್ಸಾಹ ಧನ ನೀಡುವುದಾಗಿ ಘೋಷಿಸಿದರು. 

ಮಿಜೋರಾಂ ಕಡಿಮೆ ಜನಸಂಖ್ಯಾ ಸಾಂದ್ರತೆಯನ್ನು ಹೊಂದಿದೆ:
ಮಿಜೋರಾಂನಲ್ಲಿ ಅನೇಕ ಮಿಜೋ ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದಾರೆ. ಅರುಣಾಚಲ ಪ್ರದೇಶದ ನಂತರ ಮಿಜೋರಾಂ ಅತಿ ಕಡಿಮೆ ಜನಸಂಖ್ಯಾ ಸಾಂದ್ರತೆಯನ್ನು ಹೊಂದಿದೆ. ಅದೇ ಸಮಯದಲ್ಲಿ, ಅಸ್ಸಾಂನ ನೆರೆಯ ರಾಜ್ಯ ಮಿಜೋರಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಇತ್ತೀಚೆಗೆ ತಮ್ಮ ಸರ್ಕಾರವು ಎರಡು ಮಕ್ಕಳ ನೀತಿಯನ್ನು ಕ್ರಮೇಣ ಜಾರಿಗೆ ತರುವುದಾಗಿ ಘೋಷಿಸಿತು.

ಇದನ್ನೂ ಓದಿ- Gold Hallmarking ನಿಯಮದ ಬಳಿಕ ಮನೆಯಲ್ಲಿಟ್ಟ ಚಿನ್ನ ಏನಾಗಲಿದೆ, ಹಾಲ್ಮಾರ್ಕಿಂಗ್ ಮಾಡಿಸಬೇಕೆ? ಬೇಡವೇ?

ಉತ್ತರ ಪ್ರದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ:
ಏತನ್ಮಧ್ಯೆ, ರಾಜ್ಯದಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತಿರುವುದರಿಂದ ಜನಸಂಖ್ಯೆಯ ಬೆಳವಣಿಗೆಯನ್ನು (Population Growth) ನಿಲ್ಲಿಸಬೇಕು ಎಂದು ಉತ್ತರ ಪ್ರದೇಶದ ಕಾನೂನು ಆಯೋಗದ ಅಧ್ಯಕ್ಷ ಆದಿತ್ಯ ನಾಥ್ ಮಿತ್ತಲ್ ಭಾನುವಾರ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News