ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿಯೇ ಮುಂದುವರೆದಿದೆ. ಏತನ್ಮಧ್ಯೆ, ಅವರ ಮಗಳು ಶರ್ಮಿಷ್ಠ ಮುಖರ್ಜಿ ತಮ್ಮ ತಂದೆಯ ಗಂಭೀರ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ನಿಖರವಾಗಿ ಒಂದು ವರ್ಷದ ಹಿಂದೆ ತನ್ನ ತಂದೆಗೆ ಭಾರರತ್ನ ನೀಡಲಾಗಿದೆ ಇದೀಗ ಒಂದು ವರ್ಷದ ಬಳಿಕ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಶರ್ಮಿಷ್ಠ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿರುವ ಶರ್ಮಿಷ್ಠ, 'ಕಳೆದ ವರ್ಷ ಆಗಸ್ಟ್ 8 ನನಗೆ ಅತ್ಯಂತ ಸಂತೋಷದಾಯಕ ದಿನವಾಗಿತ್ತು, ಏಕೆಂದರೆ ನನ್ನ ತಂದೆಗೆ ಭಾರತ್ ರತ್ನ ಪ್ರಶಸ್ತಿ ನೀಡಲಾಗಿತ್ತು. ನಿಖರವಾಗಿ ಒಂದು ವರ್ಷದ ನಂತರ ಆಗಸ್ಟ್ 10 ರಂದು ಅವರು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ದೇವರು ಅವರಿಗೆ ಒಳ್ಳೆಯದನ್ನು ಮಾಡಲಿ ಮತ್ತು ನನಗೆ ಜೀವನದ ಸಂತೋಷ ಮತ್ತು ದುಃಖಗಳನ್ನು ಒಂದೇ ರೀತಿಯಲ್ಲಿ ಸ್ವೀಕರಿಸುವ ಶಕ್ತಿಯನ್ನು ನೀಡಲಿ. ಪ್ರತಿಯೊಬ್ಬರ ಕಾಳಜಿಗೆ ನಾನು ಪ್ರಾಮಾಣಿಕವಾಗಿ ಧನ್ಯವಾದ ಹೇಳುತ್ತೇನೆ." ಎಂದಿದ್ದಾರೆ.
Last year 8August was 1 of d happiest day 4 me as my dad received Bharat Ratna.Exactly a year later on 10Aug he fell critically ill. May God do whatever is best 4 him & give me strength 2 accept both joys & sorrows of life with equanimity. I sincerely thank all 4 their concerns🙏
— Sharmistha Mukherjee (@Sharmistha_GK) August 12, 2020
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಮತ್ತು ಅವರನ್ನು ವೆಂಟಿಲೇಟರ್ ಮೇಲೆ ಇರಿಸಲಾಗಿದೆ. ಮಾಜಿ ರಾಷ್ಟ್ರಪತಿ ಈ ಹಿಂದೆ ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಪ್ರಣಬ್ ಮುಖರ್ಜಿ ಅವರನ್ನು ಸೋಮವಾರ ಮಧ್ಯಾಹ್ನ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶಸ್ತ್ರಚಿಕಿತ್ಸೆಗೆ ಮುನ್ನ ಅವರಿಗೆ ಕೋವಿಡ್ -19 ಇರುವುದು ಸಹ ದೃಢಪಟ್ಟಿದೆ.
ಆಸ್ಪತ್ರೆಯವ ವತಿಯಿಂದ ಜಾರಿಗೊಳಿಸಲಾಗಿರುವ ವೈದ್ಯಕೀಯ ಬುಲೆಟಿನ್ ಪ್ರಕಾರ ಮಾಜಿ ಅಧ್ಯಕ್ಷ ಪ್ರಣಬ್ ಮುಖರ್ಜಿ ಅವರ ಸ್ಥಿತಿ ಗಂಭೀರವಾಗಿದೆ ಮತ್ತು ಅವರನ್ನು ವೆಂಟಿಲೇಟರ್ ಮೇಲೆ ಇರಿಸಲಾಗಿದೆ ಎಂದು ಹೇಳಲಾಗಿದೆ. ಸೋಮವಾರ ಅವರಿಗೆ ಮೆದುಳಿನ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಆದರೆ, ಇದುವರೆಗೆ ಅವರ ಆರೋಗ್ಯ ಸ್ಥಿತಿಯಲ್ಲಿ ಯಾವುದೇ ಚೇತರಿಕೆ ಕಂಡುಬಂದಿಲ್ಲ ಮತ್ತು ಪರಿಸ್ಥಿತಿ ಇನ್ನೂ ದುರ್ಬಲವಾಗಿಯೇ ಮುಂದುವರೆದಿದೆ.
ಇದಕ್ಕೂ ಮೊದಲು ಹೇಳಿಕೆ ಬಿಡುಗಡೆ ಮಾಡಿದ್ದ ಆಸ್ಪತ್ರೆ, ಆಗಸ್ಟ್ 10 ರಂದು 12:15 ಕ್ಕೆ ಗಂಭೀರ ಸ್ಥಿತಿಯ ಹಿನ್ನೆಲೆ ಮಾಜಿ ರಾಷ್ಟ್ರಪತಿಗಳನ್ನು ದೆಹಲಿ ಕಂಟೋನ್ಮೆಂಟ್ನ ಸೇನೆಯ ಆರ್ & ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿತ್ತು. ಆಸ್ಪತ್ರೆಯಲ್ಲಿ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗತ್ತುವಿಕೆ ಕಂಡು ಬಂದಿದೆ ಎಂದು ಹೇಳಲಾಗಿತ್ತು. ಬಳಿಕ ಅವರ ಮೇಲೆ ತುರ್ತು ವೆಂಟಿಲೇಟರ್ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಆದರೆ ಈ ಶಸ್ತ್ರಚಿಕಿತ್ಸೆಯ ನಂತರವೂ ಪ್ರಣಬ್ ಮುಖರ್ಜಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿಯೇ ಮುಂದುವರೆದಿದೆ ಎನ್ನಲಾಗಿದೆ.