ನವದೆಹಲಿ: ಚುನಾವಣಾ ತಂತ್ರಗಾರ ಹಾಗೂ ಜೆಡಿಯು ನಾಯಕ ಪ್ರಶಾಂತ್ ಕಿಶೋರ್ ರನ್ನು ಶಿವಸೇನಾ ನಾಯಕ ಉದ್ದವ್ ಠಾಕ್ರೆ ತಮ್ಮ ಮುಂಬೈ ನಿವಾಸದಲ್ಲಿ ಭೇಟಿ ಮಾಡಿದ್ದಾರೆ.
ಸುಮಾರು ಒಂದೂವರೆ ಘಂಟೆಗಳ ಕಾಲ ನಡೆದ ಸಭೆಯಲ್ಲಿ ಹಲವಾರು ದೇಶ ಹಾಗೂ ರಾಜ್ಯಗಳ ರಾಜಕೀಯ ಬೆಳವಣಿಗೆ ವಿಚಾರವಾಗಿ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ತಂತ್ರ ರೂಪಿಸುವ ನಿಟ್ಟಿನಲ್ಲಿ ಶಿವಸೇನಾಗೆ ತಮ್ಮ ಜ್ಞಾನ ಹಾಗೂ ಕೌಶಲ್ಯದ ನೆರವನ್ನು ನೀಡಲಿದ್ದಾರೆ ಎನ್ನಲಾಗಿದೆ.ಆದರೆ ಇದನ್ನು ಸಾರಾಸಗಟಾಗಿ ಶಿವಸೇನಾ ತಳ್ಳಿಹಾಕಿದೆ.
Maharashtra: JD(U) Vice President and election strategist Prashant Kishor met Shiv Sena chief Uddhav Thackeray at the latter's residence in Mumbai earlier today. pic.twitter.com/oE7xXXKkjl
— ANI (@ANI) February 5, 2019
ಈ ಕುರಿತಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಸೇನಾ ನಾಯಕ ಸಂಜಯ್ ರಾವತ್ "ಪ್ರಶಾಂತ್ ಜೆಡಿಯುನ ನಾಯಕ ಅದು ಎನ್ಡಿಎನ ಪ್ರಮುಖ ಭಾಗವಾಗಿದೆ,ಈ ಹಿನ್ನಲೆಯಲ್ಲಿ ಉದ್ದವ್ ಠಾಕ್ರೆ ಮತ್ತು ಪ್ರಶಾಂತ್ ಕಿಶೋರ್ ನಡುವೆ ಮೀಟಿಂಗ್ ನಡೆದಿದೆ. ಇದೊಂದು ಸೌಜನ್ಯ ಭೇಟಿಯಾಗಿ ನೋಡಬೇಕೇ ಹೊರತು ರಾಜಕೀಯ ಭೇಟಿಯಾಗಿ ಅಲ್ಲ" ಎಂದು ತಿಳಿಸಿದರು.