Russia-Ukraine war: ಪ್ರಧಾನಿ ಮೋದಿ ನೇತೃತ್ವದಲ್ಲಿ ಭದ್ರತೆ ವಿಚಾರವಾಗಿ ಮಹತ್ವದ ಸಭೆ

ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭಾರತದ ಭದ್ರತಾ ಸಿದ್ಧತೆ, ಸ್ಥಳಾಂತರಿಸುವ ಸ್ಥಿತಿ ಮತ್ತು ಚಾಲ್ತಿಯಲ್ಲಿರುವ ಜಾಗತಿಕ ಸನ್ನಿವೇಶಗಳ ವಿಚಾರವಾಗಿ ಪ್ರಧಾನಿ ಮೋದಿ (PM Narendra Modi) ಅವರು ಭಾನುವಾರದಂದು ಉನ್ನತ ಮಟ್ಟದ ಸಭೆಯನ್ನು ನಡೆಸಿದರು.

Written by - Zee Kannada News Desk | Last Updated : Mar 13, 2022, 04:26 PM IST
  • ಶುಕ್ರವಾರದಂದು ಕೊನೆಯ ಬ್ಯಾಚ್ ನ ಸುಮಾರು 600 ಭಾರತೀಯ ವಿದ್ಯಾರ್ಥಿಗಳನ್ನು ಹೊತ್ತ ವಿಶೇಷ ವಿಮಾನವು ಹಿಂಡನ್ ಇಂಡಿಯನ್ ಏರ್ ಫೋರ್ಸ್ ಬೇಸ್‌ಗೆ ಬಂದಿಳಿತು.
Russia-Ukraine war: ಪ್ರಧಾನಿ ಮೋದಿ ನೇತೃತ್ವದಲ್ಲಿ ಭದ್ರತೆ ವಿಚಾರವಾಗಿ ಮಹತ್ವದ ಸಭೆ   title=

ನವದೆಹಲಿ: ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭಾರತದ ಭದ್ರತಾ ಸಿದ್ಧತೆ, ಸ್ಥಳಾಂತರಿಸುವ ಸ್ಥಿತಿ ಮತ್ತು ಚಾಲ್ತಿಯಲ್ಲಿರುವ ಜಾಗತಿಕ ಸನ್ನಿವೇಶಗಳ ವಿಚಾರವಾಗಿ ಪ್ರಧಾನಿ ಮೋದಿ (PM Narendra Modi) ಅವರು ಭಾನುವಾರದಂದು ಉನ್ನತ ಮಟ್ಟದ ಸಭೆಯನ್ನು ನಡೆಸಿದರು.

ಭಾರೀ ಶೆಲ್ ದಾಳಿಯ ನಂತರ ಖಾರ್ಕಿವ್‌ನಲ್ಲಿ ಸಾವನ್ನಪ್ಪಿದ ನವೀನ್ ಶೇಖರಪ್ಪ ಅವರ ಪಾರ್ಥಿವ ಶರೀರವನ್ನು ಮರಳಿ ತರಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಬೇಕು ಎಂದು ಖಾತ್ರಿಪಡಿಸುವಂತೆ ಪ್ರಧಾನ ಮಂತ್ರಿಗಳು ಸಭೆಯ ಸಮಯದಲ್ಲಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಇತ್ತೀಚಿನ ಬೆಳವಣಿಗೆಗಳು ಮತ್ತು ಗಡಿ ಪ್ರದೇಶಗಳಲ್ಲಿ ಮತ್ತು ಕಡಲ ಮತ್ತು ವಾಯು ಪ್ರದೇಶದಲ್ಲಿ ಭಾರತದ ಭದ್ರತಾ ಸನ್ನದ್ಧತೆಯ ವಿವಿಧ ಅಂಶಗಳ ಬಗ್ಗೆ ಪ್ರಧಾನಿ ಮೋದಿ ಪರಿಶೀಲಿಸಿದರು ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಇದನ್ನೂ ಓದಿ-Ukraine Russia Crisis: ಉಕ್ರೇನ್‌ನಲ್ಲಿ ಹದಗೆಡುತ್ತಿರುವ ಪರಿಸ್ಥಿತಿ: ದೇಶಕ್ಕೆ ಮರಳುವಂತೆ ಭಾರತೀಯ ರಾಜತಾಂತ್ರಿಕರ ಕುಟುಂಬಗಳಿಗೆ ಸೂಚನೆ

ಉಕ್ರೇನ್‌ನಿಂದ ಭಾರತದ ಸ್ಥಳಾಂತರಿಸುವ ಕಾರ್ಯಾಚರಣೆ, ಆಪರೇಷನ್ ಗಂಗಾ ಜೊತೆಗೆ ಭಾರತದ ನೆರೆಯ ರಾಷ್ಟ್ರಗಳ ಕೆಲವು ನಾಗರಿಕರೊಂದಿಗೆ ಉಕ್ರೇನ್‌ (Russia-Ukraine Tension)ನಿಂದ ವಿವರಗಳನ್ನು ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರಿಗೆ ಅಧಿಕಾರಿಗಳು ವಿವರಿಸಿದರು ಎನ್ನಲಾಗಿದೆ.ಏತನ್ಮಧ್ಯೆ, ಆಪರೇಷನ್ ಗಂಗಾ ಅಡಿಯಲ್ಲಿ ಸುಮಾರು 20,000 ಭಾರತೀಯರನ್ನು ಉಕ್ರೇನ್ ಗಡಿಗಳಿಂದ ವಿವಿಧ ನೆರೆಯ ರಾಷ್ಟ್ರಗಳ ಮೂಲಕ 90 ವಿಶೇಷ ವಿಮಾನಗಳಲ್ಲಿ ಮರಳಿ ಕರೆ ತರಲಾಗಿದೆ.  

ಶುಕ್ರವಾರದಂದು ಕೊನೆಯ ಬ್ಯಾಚ್ ನ ಸುಮಾರು 600 ಭಾರತೀಯ ವಿದ್ಯಾರ್ಥಿಗಳನ್ನು ಹೊತ್ತ ವಿಶೇಷ ವಿಮಾನವು ಹಿಂಡನ್ ಇಂಡಿಯನ್ ಏರ್ ಫೋರ್ಸ್ ಬೇಸ್‌ಗೆ ಬಂದಿಳಿತು.

ಇದನ್ನೂ ಓದಿ-Russia-Ukraine Conflict: Nuclear Drill ನಡೆಸಿ ಶಕ್ತಿ ಪ್ರದರ್ಶಿಸಿದ Vladimir Putin, ಕಪ್ಪು ಸಮುದ್ರದಲ್ಲಿನ ಹಲ್-ಚಲ್ ನಿಂದ ಮತ್ತಷ್ಟು ಆಳವಾದ ಉಕ್ರೇನ್ ಬಿಕ್ಕಟ್ಟು

ಇದಕ್ಕೂ ಮುನ್ನ, ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅವರು ರಷ್ಯಾದ ಮಿಲಿಟರಿ ದಾಳಿಯ ನಡುವೆ ಉಕ್ರೇನ್‌ನಿಂದ ನಾಲ್ಕು ನೇಪಾಳದ ನಾಗರಿಕರನ್ನು, ಹೆಚ್ಚಾಗಿ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.ನೇಪಾಳ ಸರ್ಕಾರದ ಕೋರಿಕೆಯ ಮೇರೆಗೆ ಭಾರತದ 'ಆಪರೇಷನ್ ಗಂಗಾ' ಭಾಗವಾಗಿ ನೇಪಾಳದ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಯಿತು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

 

Trending News