ನವದೆಹಲಿ: ದೇಶದ ಕೊರೋನಾ ಪೀಡಿತರ ಸಂಖ್ಯೆಯ ಮೂರನೇ ಒಂದು ಭಾಗದಷ್ಟಿರುವ ಮಹಾರಾಷ್ಟ್ರ (Maharashtra)ದಲ್ಲಿ ಒಂದು ವಾರದಿಂದ ಕೊರೊನಾ ಸೋಂಕಿತರ ಸಂಖ್ಯೆ ಪ್ರತಿದಿನ ಎರಡು ಸಾವಿರಕ್ಕೂ ಹೆಚ್ಷಾಗಿದೆ. ಮಹಾರಾಷ್ಟ್ರದಿಂದ ಬರುತ್ತಿರುವವರಿಂದ ಕರ್ನಾಟಕದಲ್ಲೂ ಕೊರೊನಾವೈರಸ್ (Coronavirus) ಸೋಂಕು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗಣನೀಯವಾಗಿ ಏರಿಕೆ ಆಗುತ್ತಿರುವ ಕೊರೋನಾ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಏನು ಮಾಡುತ್ತಿದೆ ಎನ್ನುವುದನ್ನು ನೋಡೋಣ.
ಕರ್ನಾಟಕದಲ್ಲಿ ಲಾಕ್ಡೌನ್ (Lockdown) ವಿನಾಯತಿ ಬೆನ್ನಲ್ಲೇ ಕೊರೊನಾ ಸೋಂಕಿತರ ಸಂಖ್ಯೆ ಪ್ರತಿದಿನವೂ ಶತಕ ಬಾರಿಸಲು ಆರಂಭಿಸಿದೆ. ರಾಜ್ಯದಲ್ಲಿ ಹೀಗೆ ಕೊರೊನಾ ಆರ್ಭಟಿಸಲು ಕಾರಣ ಮಹಾರಾಷ್ಟ್ರ ಎನ್ನಬಹುದು. ಮಹಾರಾಷ್ಟ್ರದ ಮುಂಬೈನಿಂದ ರಾಜ್ಯಕ್ಕೆ ಬರುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗೆ ಬಂದವರ ಪೈಕಿ ಬಹುತೇಕ ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಇದರಿಂದಾಗಿ ಈಗ ರಾಜ್ಯ ಬೆಚ್ಚಿ ಬೀಳುವಂತಾಗಿದೆ.
ರಾಜ್ಯಾವಾರು COVID-19 ಪೀಡಿತರ ಸಂಖ್ಯೆ
ಮಹಾರಾಷ್ಟ್ರದಲ್ಲಿದ್ದ ಕರ್ನಾಟಕ(Karnataka)ದವರಿಗೆ ಈಗ ದಿಢೀರನೇ ತವರೂರು ನೆನಪಾಗಲು, ದಿಕ್ಕಪಾಲಾಗಿ ರಾಜ್ಯಕ್ಕೆ ಓಡಿ ಬರಲು ಕಾರಣ ಮಹಾರಾಷ್ಟ್ರದಲ್ಲಿ ಕೊರೊನಾ ಅಟ್ಟಹಾಸ. ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಸಾವಿರ ಲೆಕ್ಕದಲ್ಲಿ ದುಪ್ಪಟ್ಟಾಗುತ್ತಿದೆ. ನಿನ್ನೆ ಒಂದೇ ದಿನ ಮಹಾರಾಷ್ಟ್ರದಲ್ಲಿ 2,940 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಮುಂಬೈನಲ್ಲೇ ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.
ಹೀಗೆ ಮಹರಾಷ್ಟ್ರದಲ್ಲಿ ಕೊರೊನಾ ಕೋವಿಡ್ -19 (Covid-19) ಸೋಂಕು ಹರಡುವಿಕೆ ತೀವ್ರವಾಗಿರುವುದರಿಂದ ಸರ್ಕಾರ ಸುಸ್ತು ಹೊಡೆದು ಹೋಗಿದೆ. ಅಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ ಸೃಷ್ಟಿಯಾಗಿದೆ. ಇದಕ್ಕಾಗಿ ಮಹಾರಾಷ್ಟ್ರದಲ್ಲಿರುವ ಎಲ್ಲಾ ಖಾಸಗಿ ಆಸ್ಪತ್ರೆಗಳ ಶೇಕಡಾ 80ರಷ್ಟು ಕೊರೊನಾ ರೋಗಿಗಳಿಗೆ ಮೀಸಲಿಡುವಂತೆ ಆದೇಶ ಮಾಡಲಾಗಿದೆ. ಮುಂಬೈವೊಂದರಲ್ಲೇ 4,400 ಖಾಸಗಿ ಆಸ್ಪತ್ರೆಗಳನ್ನು ಸರ್ಕಾರ ಕೊರೊನಾಗೆ ಮಿಸಲಿಟ್ಟು ದರ ಪಟ್ಟಿ ನಿಗಧಿಸಿ ಅಧಿಸೂಚನೆ ಹೊರಡಿಸಲಾಗಿದೆ.
ಖಾಸಗಿ ಕ್ಲಿನಿಕ್ ನಡೆಸುತ್ತಿರುವ ವೈದ್ಯರು ಮತ್ತು ಅರೇ ವೈದ್ಯಕೀಯ ಸಿಬ್ಬಂದಿಗಳು ಕೂಡ ಸರ್ಕಾರ ನಿಯೋಜಿಸಿದ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸಬೇಕು. ಒಂದು ವೇಳೆ ಕೆಲಸ ಮಾಡದಿದ್ದರೇ ಕ್ಲಿನಿಕ್ ಗಳಿಗೆ ಕೊಟ್ಟಿರುವ ಪರವಾನಿಗೆ ರದ್ದು ಮಾಡುವುದಾಗಿ ಎಚ್ಚರಿಕೆ ನೀಡಲಾಗಿದೆ.