ವಾರಣಾಸಿಯಿಂದ ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸಲಿರುವ ಪ್ರಿಯಾಂಕಾ ಗಾಂಧಿ -ಮೂಲಗಳು

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಈ ಬಾರಿ  ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾರಣಾಸಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಝೀ ನ್ಯೂಸ್ ಗೆ ಮೂಲಗಳು ತಿಳಿಸಿವೆ. 

Last Updated : Apr 13, 2019, 04:38 PM IST
ವಾರಣಾಸಿಯಿಂದ ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸಲಿರುವ ಪ್ರಿಯಾಂಕಾ ಗಾಂಧಿ -ಮೂಲಗಳು  title=

ನವದೆಹಲಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಈ ಬಾರಿ  ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾರಣಾಸಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಝೀ ನ್ಯೂಸ್ ಗೆ ಮೂಲಗಳು ತಿಳಿಸಿವೆ. 

ಈಗಾಗಲೇ ವಾರಣಾಸಿಯಿಂದ ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸಲು ಪ್ರಿಯಾಂಕಾ ಗಾಂಧಿ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.ಆದರೆ ಅಂತಿಮ ತೀರ್ಮಾನವನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ  ಬಿಡಲಾಗಿದೆ ಎನ್ನಲಾಗಿದೆ.ಅಚ್ಚರಿಯೆಂದರೆ ಈ ಹಿಂದೆ ಪ್ರಿಯಾಂಕಾ ಗಾಂಧಿಯವರಿಗೆ ಅಮೇಥಿ ಅಥವಾ ರಾಯ್ ಬರೆಲಿಯಿಂದ ಚುನಾವಣೆಗೆ ಸ್ಪರ್ಧಿಸಲು ಕೇಳಿಕೊಂಡಿದ್ದಾಗ ವಾರಾಣಸಿ ಯಾಕಾಗಬಾರದು ಎನ್ನುವಂತೆ ಉತ್ತರಿಸಿದ್ದರು. ಅಲ್ಲದೆ ಪಕ್ಷ ಇಚ್ಚಿಸಿದ್ದಲ್ಲಿ ತಾವು ಚುನಾವಣೆ ಸ್ಪರ್ಧಿಸುವುದಾಗಿ ಕೂಡ ಸ್ಪಷ್ಟನೆ ನೀಡಿದ್ದರು. 

ಕಳೆದ ಮಾರ್ಚ್ ತಿಂಗಳಲ್ಲಿ ಪ್ರಯಾಗ್ ರಾಜ್ ನಿಂದ ವಾರಣಾಸಿವರೆಗೆ ಮೂರು ದಿನಗಳ ಕಾಲ ಗಂಗಾ ಯಾತ್ರೆಯನ್ನು ಹಮ್ಮಿಕೊಂಡಿದ್ದ ಪ್ರಿಯಾಂಕಾ ಗಾಂಧಿ ಪ್ರಧಾನಿ ವಿರುದ್ಧ ಕಿಡಿ ಕಾರುತ್ತಾ ಇಡೀ ಜಗತ್ತನ್ನೇ ಸುತ್ತುವ ಮೋದಿಗೆ ವಾರಣಾಸಿ ಹಳ್ಳಿಗಳಿಗೆ ಭೇಟಿ ನೀಡಲು ಸಮಯವಿಲ್ಲ ಎಂದು ವ್ಯಂಗ್ಯವಾಡಿದ್ದರು.

ಪ್ರಧಾನಿ ಮೋದಿ 2014 ರಲ್ಲಿ ವಾರಣಾಸಿಯಿಂದ ಲೋಕಸಭೆಗೆ ಮೊದಲ ಬಾರಿಗೆ ಆಯ್ಕೆಯಾಗಿದ್ದರು.ಕಳೆದ ಚುನಾವಣೆಯಲ್ಲಿ ವಾರಣಾಸಿಯಲ್ಲಿ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ವಿರುದ್ದ ಪ್ರಧಾನಿ ಮೋದಿ ಅವರು 5,081,043 ಮತಗಳನ್ನು ಪಡೆದು 3,71,784 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಏಪ್ರಿಲ್ 11 ರಿಂದ ಮೇ 19 ವರೆಗೆ ಉತ್ತರ ಪ್ರದೇಶವು ಏಳು ಹಂತಗಳಲ್ಲೂ ಚುನಾವಣೆ ನಡೆಯುತ್ತಿದೆ.ಮೇ 23 ರಂದು ಮತಗಳ ಎಣಿಕೆಯು ನಡೆಯಲಿದೆ.

Trending News