ದೇಶ ನಾಶವಾಗಬೇಕಾದರೆ ಬಾಂಬ್ ಮಿಸೈಲ್ ಗಳೆ ಆಗಬೇಕಿಲ್ಲ ! ಈ ಸಣ್ಣ ತಪ್ಪು ದೇಶವನ್ನು ಪಾತಾಳಕ್ಕೆ ತಳ್ಳಿ ಬಿಡುವುದು ಗ್ಯಾರಂಟಿ

ದಿನಬೆಳಗಾದರೆ ದೇಶ ದೇಶಗಳ ನಡುವೆ ಯುದ್ದ, ದಾಳಿ ಇಂಥಹ ಸುದ್ದಿಗಳು ಎಲ್ಲೆಡೆ ಹರಿದಾಡುತ್ತಿರುತ್ತದೆ. ಇಲ್ಲಿ ಯೋಚಿಸಬೇಕಾದ ಅಂಶ ಎಂದರೆ ದೇಶ ನಾಶವಾಗಲು ಹೀಗೆ ಹೊರಗಿನ ಶತ್ರುಗಳು ನಿಜಕ್ಕೂ ಅಗತ್ಯವಿದೆಯೇ?.   

Written by - Ranjitha R K | Last Updated : Jun 26, 2024, 12:46 PM IST
  • ವಿದ್ಯಾಭ್ಯಾಸ ಎನ್ನುವುದು ಪ್ರತಿಯೊಬ್ಬನ ಜೀವನದಲ್ಲಿಯೂ ಬಹಳ ಮುಖ್ಯ.
  • ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ವಿದ್ಯೆ ಬಹಳ ಮುಖ್ಯ.
  • ಇತ್ತೀಚಿನ ದಿನಗಳಲ್ಲಿ ಎಲ್ಲಾ ದಿಕ್ಕುಗಳಲಿಯೂ ಸ್ಪರ್ಧೆ
ದೇಶ ನಾಶವಾಗಬೇಕಾದರೆ ಬಾಂಬ್ ಮಿಸೈಲ್ ಗಳೆ ಆಗಬೇಕಿಲ್ಲ ! ಈ ಸಣ್ಣ ತಪ್ಪು ದೇಶವನ್ನು ಪಾತಾಳಕ್ಕೆ ತಳ್ಳಿ ಬಿಡುವುದು ಗ್ಯಾರಂಟಿ  title=

ಬೆಂಗಳೂರು : ವಿದ್ಯಾಭ್ಯಾಸ ಎನ್ನುವುದು ಪ್ರತಿಯೊಬ್ಬನ ಜೀವನದಲ್ಲಿಯೂ ಬಹಳ ಮುಖ್ಯ. ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ವಿದ್ಯೆ ಬಹಳ ಮುಖ್ಯ. ಇತ್ತೀಚಿನ ದಿನಗಳಲ್ಲಿ ಎಲ್ಲಾ ದಿಕ್ಕುಗಳಲಿಯೂ ಸ್ಪರ್ಧೆ. ಮಗು ಹುಟ್ಟುವಾಗಲೇ ತಂದೆ ತಾಯಿ ತಮ್ಮ ಮಗುವಿನ ಶಿಕ್ಷಣ, ಭವಿಷ್ಯದ ಬಗ್ಗೆ ಯೋಚಿಸುತ್ತಾರೆ. ಹೀಗಾಗಿ ಮಗು ಹುಟ್ಟುವುದಕ್ಕೂ ಮುನ್ನವೇ ಇಂಥದ್ದೇ ಶಾಲೆಯಲ್ಲಿ ದಾಖಲಾತಿ ಸಿಗಬೇಕು ಎನ್ನುವ ತೀರ್ಮಾನವೂ ಆಗಿರುತ್ತದೆ. ಈ ನಿಟ್ಟಿನಲ್ಲಿ ಸೀಟ್ ಬ್ಲಾಕ್ ಮಾಡುವ ಕೆಲಸವೂ ಆಗುತ್ತದೆ. ಇದಕ್ಕಾಗಿ ಹರಿಸುವುದು ಲಕ್ಷ ಲಕ್ಷ ಡೊನೇಶನ್. 

ಇನ್ನು ಎಷ್ಟು ಹೆಚ್ಚು ಫೀಸ್ ಪಾವತಿಸುತ್ತೇವೆ ಅಷ್ಟು ಒಳ್ಳೆಯ ಶಿಕ್ಷಣ ಎನ್ನುವ ಭಾವನೆ ನಮ್ಮಲ್ಲಿ ಅಡಗಿದೆ. ಆದ್ರೆ ಇದು ಎಲ್ಲಯವರೆಗೆ ಸತ್ಯ ಎನ್ನುವುದನ್ನು ಹೇಳುವುದು  ಕಷ್ಟ ಸಾಧ್ಯ.ಇನ್ನು ಇತ್ತೀಚಿನ ದಿನಗಳಲ್ಲಿ ಕಾಪಿ ಮಾಡುವುದು, ಕಾಪಿ ಮಾಡುವುದಕ್ಕೆ ಅನುವು ಮಾಡಿಕೊಡುವುದು, ಪೇಪರ್ ಲೀಕ್ ಆಗುವುದು ಇಂಥಹ ಪ್ರಕರಣಗಳು ಕೇಳಿ ಬರುತ್ತಿರುತ್ತವೆ. ಲೀಕ್ ಆದ ಪೇಪರ್ ಅನ್ನು ಬಳಸಿಕೊಂಡು ದೊಡ್ಡ ದೊಡ್ಡ ಅಂಕಗಳನ್ನು ಗಿಟ್ಟಿಸಿಕೊಂಡು ಸೀಟು ಪಡೆಯುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇದಕ್ಕೆ ಉತ್ತೇಜನ ನೀಡುವವರೂ ಇದ್ದಾರೆ. ಇಲ್ಲಿ ಹಾಳಾಗುವುದು ಆ ಮಗುವಿಯ ಭವಿಷ್ಯ ಮಾತ್ರವಲ್ಲ ಇಡೀ ದೇಶದ ಭವಿಷ್ಯ. 

ಇದನ್ನೂ ಓದಿ : Arecanut Price in Karnataka: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಕುಸಿತ!

ಹೌದು, ದಿನಬೆಳಗಾದರೆ ದೇಶ ದೇಶಗಳ ನಡುವೆ ಯುದ್ದ, ದಾಳಿ ಇಂಥಹ ಸುದ್ದಿಗಳು ಎಲ್ಲೆಡೆ ಹರಿದಾಡುತ್ತಿರುತ್ತದೆ.ಒಂದು ದೇಶವನ್ನು ಸಂಪೂರ್ಣ ನಾಶ ಮಾಡುವುದೇ ಎದುರಾಳಿ ದೇಶದ ಗುರಿಯಾಗಿರುತ್ತದೆ. ಆಗ ನಡೆಯುವುದೇ ಬಾಂಬ್ ದಾಳಿ, ಮಿಸೈಲ್ ದಾಳಿ. ಹೀಗೆ ದಾಳಿ ನಡೆದಾಗ ಅಲ್ಲಿ ಹರಿಯುವ ನೆತ್ತರಿಗೆ ಬೆಲೆಯೇ ಇರುವುದಿಲ್ಲ.ಆದರೆ ಇಲ್ಲಿ ಯೋಚಿಸಬೇಕಾದ ಅಂಶ ಎಂದರೆ ದೇಶ ನಾಶವಾಗಲು ಹೀಗೆ ಹೊರಗಿನ ಶತ್ರುಗಳು ನಿಜಕ್ಕೂ ಅಗತ್ಯವಿದೆಯೇ?. 

ನಿಜಕ್ಕೂ ಒಂದು ದೇಶ ಹಾಳಾಗಲು, ನಾಶವಾಗಲು ಹೊರಗಿನ ಶತ್ರುಗಳ ಅಗತ್ಯ ಇಲ್ಲ. ಶಿಕ್ಷಣದಲ್ಲಿ ಆಗುವ  ಸಣ್ಣ ಎಡವಟ್ಟು ದೇಶವನ್ನು ಪಾತಾಳಕ್ಕೆ ತಳ್ಳಿ ಬಿಡುತ್ತದೆ. ಹೌದು, ಶಿಕ್ಷಣ ಒಂದು ದೇಶದ ಭದ್ರ ಬುನಾದಿಗೆ ಎಷ್ಟು ಮುಖ್ಯ ಎನ್ನುವುದನ್ನು ಸಾರುವ ಕೆಲವು ಸಾಲುಗಳಿವೆ.ದಕ್ಷಿಣ ಆಫ್ರಿಕಾದ ವಿವಿಯ ಮುಖ್ಯ ದ್ವಾರದಲ್ಲಿ ಈ ಸಾಲುಗಳನ್ನು ಅಂಟಿಸಲಾಗಿತ್ತಂತೆ. 

ಇದನ್ನೂ ಓದಿ : 300 ರೂಪಾಯಿಯಿಂದ ಆರಂಭವಾದ ಬಿಸಿನೆಸ್ ! ಇಂದು ೭ ಸಾವಿರ ಕೋಟಿ ಮೌಲ್ಯದ ಸಂಪತ್ತಿನ ಒಡತಿ !ಇದೇ ಈ ಮಹಿಳೆಯ ಬಿಸ್ ನೆಸ್ ಸಿಕ್ರೆಟ್

ಒಂದು ದೇಶವನ್ನು ನಾಶ ಮಾಡಬೇಕಾದರೆ ಶಿಕ್ಷಣ ಗುಣಮಟ್ಟವನ್ನು ಕೆಳಗಿಳಿಸಿದರೆ ಸಾಕಂತೆ. ಕಳಪೆ ಗುಣಮಟ್ಟದ ಶಿಕ್ಷಣ ನೀಡಿ, ಪರೀಕ್ಷಾ ಸಂದರ್ಭದಲ್ಲಿ ಮೋಸಕ್ಕೆ ಅಂದರೆ ನಕಲು ಮಾಡಲು ಅವಕಾಶ ಕಲ್ಪಿಸಿದರೆ ಸಾಕಂತೆ. ಯಾಕೆಂದರೆ ಈ ರೀತಿ ಪಾಸಾಗಿ ವೈದ್ಯ ಪದವಿ ಪಡೆದ ವ್ಯಕ್ತಿಯ ಕೈಯಿಂದ ಚಿಕತ್ಸೆ ಪಡೆದ ರೋಗಿ ಬದುಕುವುದುಂಟೆ ? ಈ ರೀತಿ ಎಂಜಿನಿಯರ್ ಆದ ವ್ಯಕ್ತಿ ನಿರ್ಮಿಸಿದ ಕಟ್ಟಡ ಕುಸಿದು  ಬೀಳದೆ ಇರಲು ಸಾಧ್ಯವೇ? ಇಂಥಹ ಅರ್ಥ ಶಾಸ್ತ್ರಜ್ಞನಿಂದ ಉತ್ತಮ ಹಣಕಾಸು ನೀತಿ ನಿರೀಕ್ಷಿಸಲು ಸಾಧ್ಯವೇ? ನ್ಯಾಯಾಧೀಶನಿಂದ ನ್ಯಾಯ ನೀರೀಕ್ಷಿಸುವುದು ಸಾಧ್ಯವಿಲ್ಲ.ಹಾಗಾಗಿ ಶಿಕ್ಷಣ ನೀತಿ ಕುಸಿದರೆ ಇಡೀ ದೇಶವೇ ಕುಸಿದು ಬೀಳುವುದು ಗ್ಯಾರಂಟಿ. 

ಹೀಗಾಗಿ  ಶಿಕ್ಷಣ ಮಟ್ಟದಲ್ಲಿ ಮೋಸಕ್ಕೆ ಬೆಂಬಲ ನೀಡುವ ಮುನ್ನ ನಾವು ಯಾರಿಗೆ ಹೇಗೆ ಮೋಸ ಮಾಡುತ್ತಿದ್ದೇವೆ ಎನ್ನುವುದನ್ನು ಅರೆ ಕ್ಷಣ ಯೋಚಿಸಿದರೆ ಒಳಿತು. ಇಲ್ಲಿ ನಮ್ಮ ಸ್ವ ಪ್ರತಿಷ್ಠೆಗೋಸ್ಕರ ದೇಶದ ಭವಿಷ್ಯವನ್ನೇ ನಾವು ಪಣಕ್ಕಿಡುತ್ತಿದ್ದೇವೆ ಎನ್ನುವ ಒಂದು ಸಣ್ಣ ಯೋಚನೆ ನಮಗಿದ್ದರೆ ಒಳ್ಳೆಯದು.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News