ನವದೆಹಲಿ: ಭೂವಿವಾದ ವಿಚಾರವಾಗಿ ಉಂಟಾದ ಸೋನಭದ್ರ ಹತ್ಯಾಕಾಂಡದಲ್ಲಿನ ಸಂತ್ರಸ್ತ್ರರನ್ನು ಭೇಟಿ ಮಾಡಲು ಬಂದಿದ್ದ ಪ್ರಿಯಾಂಕಾ ಗಾಂಧಿ ಅವರನ್ನು ಶುಕ್ರವಾರದಂದು ಪೋಲೀಸರ ಬಂಧಿಸಿದ್ದರು. 50 ಸಾವಿರ ರೂ ಮೌಲ್ಯದ ಜಾಮೀನು ಬಾಂಡ್ ಭರ್ತಿ ಮಾಡಲು ಪ್ರಿಯಾಂಕಾ ಗಾಂಧಿ ನಿರಾಕರಿಸಿದ ಹಿನ್ನಲೆಯಲ್ಲಿ ಅವರು ರಾತ್ರಿ ವಿಡಿ ಪೋಲೀಸರ ವಶದಲ್ಲಿಯೇ ದಿನವನ್ನು ಕಳೆಯಬೇಕಾಯಿತು.
Mirzapur: Early morning visuals from Chunar Guest House where Congress General Secretary Priyanka Gandhi Vadra & party workers have been sitting on dharna. She was detained in Narayanpur by police yesterday while she was on her way to meet victims of Sonbhadra's firing case. pic.twitter.com/8Dl4UaXj4T
— ANI UP (@ANINewsUP) July 20, 2019
ಪ್ರಿಯಾಂಕಾ ಗಾಂಧಿ ಶುಕ್ರವಾರ ಬೆಳಿಗ್ಗೆ ವಾರಣಾಸಿಗೆ ಆಗಮಿಸಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಆಘಾತ ಕೇಂದ್ರಕ್ಕೆ ದಾಖಲಾದ ಗಾಯಾಳುಗಳನ್ನು ಭೇಟಿಯಾದರು. ನಂತರ ಅವರು ಸೋನೆಭದ್ರ ಕಡೆಗೆ ಸಾಗಿದಾಗ, ಮಿರ್ಜಾಪುರ ಗಡಿಯಲ್ಲಿ ಅವರಿಗೆ ತಡೆಯೊಡ್ಡಲಾಯಿತು.ಇದಾದ ಬೆನ್ನಲ್ಲೇ ಅವರು ಅಲ್ಲಿಯೇ ಧರಣಿಗೆ ಕುಳಿತ ಹಿನ್ನಲೆಯಲ್ಲಿ ಅವರನ್ನು ಬಂಧಿಸಿ ಮಿರ್ಜಾಪುರದ ಚುನಾರ್ ಅತಿಥಿ ಗೃಹದಲ್ಲಿ ಇರಿಸಲಾಯಿತು.
ಈಗ ಉತ್ತರ ಪ್ರದೇಶದ ಪೋಲೀಸರ ಕ್ರಮವನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಅತಿಥಿ ಗೃಹದ ಹೊರಗೆ ಧರಣಿ ಸತ್ಯಾಗ್ರಹಕ್ಕೆ ಕುಳಿತುಕೊಂಡಿದ್ದಾರೆ. ಶುಕ್ರವಾರದನ್ನು ರಾತ್ರಿಯಿಡಿ ಪ್ರಿಯಾಂಕಾ ಅಲ್ಲಿಯೇ ಕಳೆದರು ಎನ್ನಲಾಗಿದೆ. ಇನ್ನೊಂದೆಡೆ ಪೋಲಿಸರು ತಾವು ಪ್ರಿಯಾಂಕಾ ಗಾಂಧಿಯವರನ್ನು ಬಂಧಿಸಿಲ್ಲ ಎಂದು ಹೇಳಿದರು.
ಇನ್ನೊಂದೆಡೆ ಟ್ವೀಟ್ ಮಾಡಿರುವ ಪ್ರಿಯಾಂಕಾ ಗಾಂಧಿ' ಉತ್ತರ ಪ್ರದೇಶ ಸರ್ಕಾರದ ಎಡಿಜಿ ವಾರಣಾಸಿ ಬ್ರಿಜ್ ಭೂಷಣ್, ವಾರಣಾಸಿ ಆಯುಕ್ತ ದೀಪಕ್ ಅಗರ್ವಾಲ್, ಆಯುಕ್ತ ಮಿರ್ಜಾಪುರ ಮತ್ತು ಡಿಐಜಿ ಮಿರ್ಜಾಪುರರನ್ನು ಸಂತ್ರಸ್ತರ ಕುಟುಂಬಗಳನ್ನು ಭೇಟಿಯಾಗದೆ ನಾನು ಹಿಂತಿರುಗಲು ಹೇಳಿದ್ದಾರೆ .ಆದರೆ ಅವರು ನನ್ನನ್ನು ಬಂಧಿಸಲು ಯಾವುದೇ ಕಾರಣ ಅಥವಾ ದಾಖಲೆಗಳನ್ನು ನೀಡಿಲ್ಲ" ಎಂದು ಪ್ರಿಯಾಂಕಾ ಗಾಂಧಿ ಶನಿವಾರ ಮುಂಜಾನೆ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಪ್ರಿಯಾಂಕಾ ಗಾಂಧಿ ಸಂತ್ರಸ್ತರನ್ನು ಭೇಟಿಯಾಗದೆ ಹಿಂತಿರುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. "ನಾನು ಯಾವುದೇ ಕಾನೂನನ್ನು ಉಲ್ಲಂಘಿಸಲು ಬಂದಿಲ್ಲ. ಆದರೆ ಕುಟುಂಬಗಳನ್ನು ಭೇಟಿಯಾಗಲು ಇಲ್ಲಿಗೆ ಬಂದಿದ್ದೇನೆ ಎಂದು ನಾನು ಅವರಿಗೆ ಸ್ಪಷ್ಟಪಡಿಸಿದ್ದೇನೆ. ಆದ್ದರಿಂದ ಅವರನ್ನು ಭೇಟಿ ಮಾಡದೇ ನಾನು ಹಿಂದಿರುಗುವುದಿಲ್ಲ" ಎಂದು ಅವರು ಹೇಳಿದರು.