'ಉತ್ತರ' ದ ರಾಜಕೀಯ ಚರ್ಯೆ ಬದಲಿಸಲು ಪ್ರಿಯಾಂಕಾ ಗಾಂಧಿ ಬಹಿರಂಗ ಪತ್ರ

 ಭಾನುವಾರ ಲಖನೌಕ್ಕೆ ಆಗಮಿಸಿದ ಬಳಿಕ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಉತ್ತರಪ್ರದೇಶದಲ್ಲಿನ ರಾಜಕೀಯ ಬದಲಾವಣೆಗೆ ಜನರ ಬೆಂಬಲವನ್ನು ಕೋರಿ ಬಹಿರಂಗ ಪತ್ರ ಬರೆದರು.

Last Updated : Mar 17, 2019, 01:48 PM IST
'ಉತ್ತರ' ದ ರಾಜಕೀಯ ಚರ್ಯೆ ಬದಲಿಸಲು ಪ್ರಿಯಾಂಕಾ ಗಾಂಧಿ ಬಹಿರಂಗ ಪತ್ರ  title=

ನವದೆಹಲಿ:  ಭಾನುವಾರ ಲಖನೌಕ್ಕೆ ಆಗಮಿಸಿದ ಬಳಿಕ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಉತ್ತರಪ್ರದೇಶದಲ್ಲಿನ ರಾಜಕೀಯ ಬದಲಾವಣೆಗೆ ಜನರ ಬೆಂಬಲವನ್ನು ಕೋರಿ ಬಹಿರಂಗ ಪತ್ರ ಬರೆದರು.

ಈ ಬಹಿರಂಗ ಪತ್ರದಲ್ಲಿ ಪ್ರಿಯಾಂಕಾ ಗಾಂಧಿ ಜನರು ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಲು ಬಯಸುತ್ತಾರೆ. ಆದರೆ ಅವರನ್ನು ಗೊಂದಲಕ್ಕಿಡುಮಾಡಲಾಗಿದೆ ಎಂದು ಹೇಳಿದ್ದಾರೆ.

"ರಾಜ್ಯದ ಮಹಿಳೆಯರು, ರೈತರು ಮತ್ತು ಕಾರ್ಮಿಕರ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.ಅವರು ತಮ್ಮ ಕಷ್ಟಗಳನ್ನು ರಾಜಕಾರಣಿಗಳೊಂದಿಗೆ ಹಂಚಿಕೊಳ್ಳಲು ಬಯಸುತ್ತಾರೆ ಆದರೆ ಪ್ರಸಕ್ತ ರಾಜಕೀಯದಲ್ಲಿ ಅವರನ್ನು ಗೊಂದಲಕ್ಕೀಡುಮಾಡಲಾಗಿದೆ" ಎಂದು ಹಿಂದಿಯಲ್ಲಿ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.ಇದೇ ವೇಳೆ ಜನರ ಸಮಸ್ಯೆಗಳನ್ನು ಆಲಿಸಲು ಅವರ ಬಳಿ ಹೋಗುವುದಾಗಿ ಹೇಳಿದ್ದಲ್ಲದೆ ಅವರ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಭರವಸೆ ನೀಡಿದರು.

"ನಿಮ್ಮ ಸಮಸ್ಯೆಗಳನ್ನು ಆಲಿಸಿದ ನಂತರ ಅಗತ್ಯವಿರುವ ಬದಲಾವಣೆಯನ್ನು ರಾಜ್ಯದಲ್ಲಿ ಮಾಡುತ್ತೇವೆ ಎನ್ನುವ ಭರವಸೆಯನ್ನು ನಾನು ನೀಡುತ್ತೇನೆ, ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ನಾವು ಒಟ್ಟಾಗಿ ಕಾರ್ಯನಿರ್ವಹಿಸುವೆವು "ಎಂದು ಅವರು ಪತ್ರದಲ್ಲಿ ಬರೆದುಕೊಂಡಿದ್ದಾರೆ.

"ರಾಜ್ಯದ ರಾಜಕೀಯ ಭೂ ಪ್ರದೇಶದ ಬದಲಾವಣೆ ಜನರನ್ನು ತಲುಪದೆಯೇ ಅಥವಾ ಅವರ ಕಷ್ಟಗಳನ್ನು ಆಲಿಸದೆ ಸಾಧ್ಯವಿಲ್ಲ ಎನ್ನುವುದನ್ನು ನಾನು ಮನಗಂಡಿದ್ದೇನೆ.ಆದ್ದರಿಂದ ಪ್ರಾಮಾಣಿಕವಾಗಿ ನಾನು ನಿಮ್ಮ ಜೊತೆ ಈ ವಿಚಾರವಾಗಿ ಸಂವಾದ ನಡೆಸಲಿದ್ದೇನೆ" ಎಂದು ಪ್ರಸ್ತಾಪಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಪಕ್ಷದ ಲೋಕಸಭಾ ಚುನಾವಣೆಯ ಸಿದ್ಧತೆಗಳನ್ನು ಪರಿಶೀಲಿಸಲು ಪ್ರಿಯಾಂಕಾ ಭಾನುವಾರ ಲಖನೌಕ್ಕೆ ಆಗಮಿಸಿದರು. ಉತ್ತರ ಪ್ರದೇಶದ 2017 ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪಕ್ಷದ ಅಭ್ಯರ್ಥಿಗಳನ್ನು ಅವರು ಭೇಟಿಯಾಗಲಿದ್ದಾರೆ. 

Trending News