ಇಲ್ಲಿ ಬೇರೆ ರಾಜ್ಯದ ವಧುವಿಗೆ ಉದ್ಯೋಗದಲ್ಲಿ ಮೀಸಲಾತಿ ಸಿಗುವುದಿಲ್ಲ, ಕೋರ್ಟ್ ಹೇಳಿದ್ದೇನು ಗೊತ್ತಾ?

ರಾಜಸ್ಥಾನದಲ್ಲಿ ಮದುವೆಯಾದ ನಂತರ ಬೇರೆ ರಾಜ್ಯಗಳಿಂದ ಬರುವ ಮಹಿಳೆಯರಿಗೆ ಸಿಗುವ ಮೀಸಲಾತಿ ವ್ಯವಸ್ಥೆ ಬಗ್ಗೆ ನಿಮಗೆ ತಿಳಿದಿದೆಯೇ? ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ…

Written by - Zee Kannada News Desk | Last Updated : Feb 4, 2022, 08:30 AM IST
  • ಮೀಸಲಾತಿಗೆ ಸಂಬಂಧಿಸಿದಂತೆ ರಾಜಸ್ಥಾನ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ
  • ರಾಜಸ್ಥಾನದಲ್ಲಿ ಮದುವೆ ಬಳಿಕ ಬೇರೆ ರಾಜ್ಯಗಳಿಂದ ಬರುವ ಮಹಿಳೆಯರಿಗೆ ಉದ್ಯೋಗದಲ್ಲಿ ಮೀಸಲಾತಿ ಇಲ್ಲ
  • ಉದ್ಯೋಗಗಳಲ್ಲಿ ಮೀಸಲಾತಿ ಹೊರತುಪಡಿಸಿ ಇತರ ಸೌಲಭ್ಯಗಳಲ್ಲಿ ಸಿಗಲಿದೆ ಪ್ರಯೋಜನ
ಇಲ್ಲಿ ಬೇರೆ ರಾಜ್ಯದ ವಧುವಿಗೆ ಉದ್ಯೋಗದಲ್ಲಿ ಮೀಸಲಾತಿ ಸಿಗುವುದಿಲ್ಲ, ಕೋರ್ಟ್ ಹೇಳಿದ್ದೇನು ಗೊತ್ತಾ?  title=
ರಾಜಸ್ಥಾನ ಹೈಕೋರ್ಟ್ ಮಹತ್ವದ ತೀರ್ಪು

ಜೈಪುರ: ಮೀಸಲಾತಿಗೆ ಸಂಬಂಧಿಸಿದಂತೆ ರಾಜಸ್ಥಾನ ಹೈಕೋರ್ಟ್(Rajasthan High Court) ಮಹತ್ವದ ತೀರ್ಪು ನೀಡಿದೆ. ರಾಜಸ್ಥಾನದಲ್ಲಿ ಮದುವೆಯಾದ ನಂತರ ಬೇರೆ ರಾಜ್ಯಗಳಿಂದ ಬರುವ ಮಹಿಳೆಯರಿಗೆ ಉದ್ಯೋಗದಲ್ಲಿ ಮೀಸಲಾತಿ ಸಿಗುವುದಿಲ್ಲವೆಂದು ಹೈಕೋರ್ಟ್ ಹೇಳಿದೆ. ರಾಜಸ್ಥಾನದ ವ್ಯಕ್ತಿಯನ್ನು ವಿವಾಹವಾದ ನಂತರ ರಾಜಸ್ಥಾನಕ್ಕೆ ವಲಸೆ ಹೋಗುವ ಮಹಿಳೆಗೆ ಬೇರೆ ರಾಜ್ಯದ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಆಧಾರದ ಮೇಲೆ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ನೀಡಲಾಗುವುದಿಲ್ಲ ಎಂದು ಹೇಳಲಾಗಿದೆ.

ಉದ್ಯೋಗದ ಹೊರತಾಗಿ ಇತರ ಸೌಲಭ್ಯಗಳ ಲಾಭ 

ರಾಜಸ್ಥಾನದ ಪುರುಷರನ್ನು ಮದುವೆಯಾದ ನಂತರ ಇಲ್ಲಿ ನೆಲೆಸಲಿರುವ ಇತರ ರಾಜ್ಯಗಳ ಮಹಿಳೆಯರು ಜಾತಿ ಪ್ರಮಾಣಪತ್ರದ ಆಧಾರದ ಮೇಲೆ ಉದ್ಯೋಗಗಳಲ್ಲಿ ಮೀಸಲಾತಿ(Reservation in Job) ಹೊರತುಪಡಿಸಿ ಇತರ ಸೌಲಭ್ಯಗಳಲ್ಲಿ ಪ್ರಯೋಜನವನ್ನು ಪಡೆಯಲಿದ್ದಾರೆ ಎಂದು ಹೈಕೋರ್ಟ್ ಹೇಳಿದೆ.

ಇದನ್ನೂ ಓದಿ: Punjab polls: ಫೆಬ್ರವರಿ 6 ಕ್ಕೆ ಪಂಜಾಬ್ ಸಿಎಂ ಅಭ್ಯರ್ಥಿ ಘೋಷಿಸಲಿರುವ ಕಾಂಗ್ರೆಸ್

ಮಹಿಳೆಯಿಂದ ನ್ಯಾಯಾಲಯಕ್ಕೆಅರ್ಜಿ ಸಲ್ಲಿಕೆ

ರಾಜಸ್ಥಾನದ ಹನುಮಾನ್‌ಗಢದ ನೋಹರ್‌ನಲ್ಲಿ ವಾಸಿಸುತ್ತಿರುವ ಸುನೀತಾ ರಾಣಿ ಅವರು ಹೈಕೋರ್ಟ್‌ನಲ್ಲಿ ಮೀಸಲಾತಿ(Interstate Marriage)ಗೆ ಸಂಬಂಧಿಸಿದ ಅರ್ಜಿಯನ್ನು ಸಲ್ಲಿಸಿದ್ದರು. ತಾನು ಪಂಜಾಬ್ ಮೂಲದವಳು ಮತ್ತು ರಾಜಸ್ಥಾನದ ನೋಹರ್‌ನಲ್ಲಿ ವಾಸಿಸುವ ವ್ಯಕ್ತಿಯನ್ನು ಮದುವೆಯಾಗಿದ್ದೇನೆ ಎಂದು ಅರ್ಜಿಯಲ್ಲಿ ತಿಳಿಸಿದ್ದಳು.

ಮಹಿಳೆಯ ಅರ್ಜಿಯನ್ನು ತಹಸೀಲ್ದಾರ್ ತಿರಸ್ಕರಿಸಿದ್ದರು

ನೋಹರ್ ತಹಸಿಲ್‌ನಲ್ಲಿ ಎಸ್‌ಸಿ ಜಾತಿ ಪ್ರಮಾಣ(SC Reservation)ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದೇನೆ ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದರು. ಆದರೆ ಅವರ ಅರ್ಜಿಯನ್ನು ತಹಸೀಲ್ದಾರ್ ತಿರಸ್ಕರಿಸಿದ್ದಾರೆ. ಆಕೆ ರಾಜಸ್ಥಾನ ಮೂಲದವಳಲ್ಲ ಎಂಬುದು ಇದರ ಹಿಂದಿನ ಕಾರಣವಾಗಿತ್ತು.

ಇದನ್ನೂ ಓದಿ: ಫೆಬ್ರವರಿ 4 ರಂದು ಡಿಜಿಟಲ್ ರ್ಯಾಲಿಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ

ಹಳೆಯ ಪ್ರಕರಣಗಳ ಉದಾಹರಣೆ ನೀಡಿದ ನ್ಯಾಯಾಲಯ

ನ್ಯಾಯಾಧೀಶ ದಿನೇಶ್ ಮೆಹ್ತಾ(Dinesh Mehta) ಅವರು 2018 ಮತ್ತು 2020ರ ರಾಜಸ್ಥಾನ ಹೈಕೋರ್ಟ್‌ನ ಪ್ರಕರಣದ ಉದಾಹರಣೆಯನ್ನು ನೀಡಿದರು. ಈ ಪ್ರಕರಣದಲ್ಲಿ ರಾಜಸ್ಥಾನದಲ್ಲಿ ಮದುವೆಯ ನಂತರ ಮಹಿಳೆ ಉದ್ಯೋಗದಲ್ಲಿ ಮೀಸಲಾತಿಗೆ ಅರ್ಹರಾಗಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿತ್ತು. ಅಂತಹ ಮಹಿಳೆಯರು ಜಾತಿ ಪ್ರಮಾಣಪತ್ರಕ್ಕೆ ಅರ್ಹರಾಗಿರುತ್ತಾರೆ. ಇದರಿಂದ ಅವರು ಜಾತಿ ಪ್ರಮಾಣಪತ್ರದ ಆಧಾರದ ಮೇಲೆ ಉದ್ಯೋಗಗಳನ್ನು ಹೊರತುಪಡಿಸಿ ರಾಜ್ಯ ಸರ್ಕಾರದ ಇತರ ಯೋಜನೆಗಳ ಪ್ರಯೋಜನಗಳನ್ನು ಪಡೆಯಬಹುದು ಎಂದು ತಿಳಿಸಲಾಗಿದೆ.

ಎಸ್‌ಡಿಎಂಗೆ ಆದೇಶ ನೀಡಿದ ನ್ಯಾಯಾಧೀಶರು

ಅರ್ಜಿ ಸಲ್ಲಿಸಿದ್ದ ಮಹಿಳೆಗೆ ಜಾತಿ ಪ್ರಮಾಣ ಪತ್ರ ನೀಡುವಂತೆ ಹನುಮಂತನಗರ ಎಸ್‌ಡಿಎಂಗೆ ನ್ಯಾಯಾಧೀಶ ಮೆಹ್ತಾ ಆದೇಶಿಸಿದ್ದಾರೆ. ಸರ್ಕಾರಿ ಉದ್ಯೋಗಗಳಿಗೆ ಮಾನ್ಯತೆ ಇರುವುದಿಲ್ಲವೆಂದು ಜಾತಿ ಪ್ರಮಾಣದ ಪತ್ರದ ಮೇಲೆ ಬರೆಯಬೇಕು ಎಂದೂ ಅವರು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News