Punjab Government Announced Free Electricity : ಪಂಜಾಬ್ ಭಗವಂತ್ ಮಾನ್ ನೇತೃತ್ವದ ಎಎಪಿ ಸರ್ಕಾರವು ರಾಜ್ಯದ ಜನತೆಗೆ 300 ಯೂನಿಟ್ ವರೆಗೆ ಉಚಿತ ವಿದ್ಯುತ್ ಘೋಷಿಸಿದೆ. ಜುಲೈ 1 ರಿಂದ ಜನರಿಗೆ ಪ್ರತಿ ತಿಂಗಳು 300 ಯೂನಿಟ್ ಉಚಿತ ವಿದ್ಯುತ್ ಸಿಗಲಿದೆ.
ಸಾರ್ವಜನಿಕರಿಗೆ ಸಿಗಲಿದೆ ಪರಿಹಾರ
ಪಂಜಾಬ್‌ನಲ್ಲಿ ಭಗವಂತ್ ಮಾನ್ ಸರ್ಕಾರ ರಚನೆ ಆಗಿ ಒಂದು ತಿಂಗಳು ಪೂರ್ಣಗೊಂಡಿದೆ. ಹೀಗಾಗಿ, ಪಂಜಾಬ್ ಸರ್ಕಾರ ಸಾಮಾನ್ಯ ಜನರಿಗೆ ಈ ಸಿಹಿ ಸುದ್ದಿ ನೀಡಿದೆ. ಈಗ ಜುಲೈ 1 ರಿಂದ ರಾಜ್ಯದ ಪ್ರತಿ ಮನೆಗೂ 300 ಯೂನಿಟ್ ವರೆಗೆ ಉಚಿತ ವಿದ್ಯುತ್ ಸಿಗಲಿದೆ.
ಇದನ್ನೂ ಓದಿ : Alcohol Sales: 100 ರೂ. ಮದ್ಯ ವ್ಯಾಪಾರದಿಂದ ರಾಜ್ಯ ಸರ್ಕಾರಗಳು ಎಷ್ಟು ಹಣ ಸಂಪಾದಿಸುತ್ತವೆ ಗೊತ್ತಾ?
ದೆಹಲಿ ಸಿಎಂ ಕೇಜ್ರಿವಾಲ್ ಭೇಟಿ
ಇತ್ತೀಚೆಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಅವರು ಪಂಜಾಬ್‌ನಲ್ಲಿ 300 ಯುನಿಟ್ ಉಚಿತ ವಿದ್ಯುತ್ ಯೋಜನೆ ಕುರಿತು ಚರ್ಚಿಸಿದರು. ಅಂದಿನಿಂದ, ಘೋಷಣೆಯ ಬಗ್ಗೆ ಊಹಾಪೋಹಗಳು ಹರಿದಾಡುತ್ತಿದ್ದವು.
Government of Punjab announces 300 units of free electricity for households from July 1st, 2022: Information and Public Relations Department, Punjab
— ANI (@ANI) April 16, 2022
ಇದು ಚುನಾವಣೆ ಪ್ರಣಾಳಿಕೆ ಕೂಡ ಆಗಿತ್ತು
ಕಳೆದ ಹಲವು ವಾರಗಳಿಂದ ಪಂಜಾಬ್‌ನಲ್ಲಿ 300 ಯೂನಿಟ್ ವಿದ್ಯುತ್ ಉಚಿತ ಮಾಡಲು ಸಿದ್ಧತೆಗಳು ನಡೆಯುತ್ತಿವೆ. ಇದಕ್ಕೂ ಮುನ್ನ ಮಾನ್ ಪಂಜಾಬ್‌ನ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿದ್ದರು. ದೆಹಲಿಯ ಮಾದರಿಯಲ್ಲಿ, 2022 ರ ಪಂಜಾಬ್ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ, ಎಎಪಿ ಅಧಿಕಾರಕ್ಕೆ ಬಂದರೆ ರಾಜ್ಯದ ಜನರಿಗೆ ಪ್ರತಿ ತಿಂಗಳು 300 ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ನೀಡಿತ್ತು.
ಇದನ್ನೂ ಓದಿ : ಗುಜರಾತ್ ನ ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಗೆ ಆಹ್ವಾನವಿತ್ತ ಆಪ್
ವಿರೋಧ ಪಕ್ಷದ ಆರೋಪ
ಆದರೆ, ಪಂಜಾಬ್‌ನಲ್ಲಿ ಎಎಪಿ ಸರ್ಕಾರ ರಚನೆಯಾದಾಗಿನಿಂದ, ಮಾನ್ ಸರ್ಕಾರವನ್ನು ದೆಹಲಿಯಿಂದಲೇ ನಿಯಂತ್ರಿಸಲಾಗುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಕೇಜ್ರಿವಾಲ್ ಪಂಜಾಬ್ ಸರ್ಕಾರವನ್ನು ನಿಯಂತ್ರಿಸುತ್ತಿದ್ದಾರೆ ಮತ್ತು ಇದರಿಂದಾಗಿ ಸರ್ಕಾರವು ಸ್ವತಂತ್ರವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕಾಂಗ್ರೆಸ್ ನಿರಂತರವಾಗಿ ಹೇಳಿಕೆ ನೀಡುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.