'ತೇಜಸ್ವಿ ಸೂರ್ಯ ಅವರು ಕರೌಲಿಗೆ ಪರಿಸ್ಥಿತಿಯನ್ನು ಮತ್ತಷ್ಟು ಕೆರಳಿಸಲು ಬಂದಿದ್ದಾರೆ'

ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರು ಕರೌಲಿಗೆ ಬಂದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಕೆರಳಿಸಲು ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಟೀಕಿಸಿದ್ದಾರೆ.

Written by - Zee Kannada News Desk | Last Updated : Apr 15, 2022, 12:29 AM IST
  • ಹೆಸರು ತೇಜಸ್ವಿ ಸೂರ್ಯ ಆದರೆ ಅವರು ಇಲ್ಲಿಗೆ ಬಂದಿದ್ದನ್ನು ನೋಡಿ
  • ಕರೌಲಿಯಲ್ಲಿ ನಡೆದ ಘಟನೆ ದುರದೃಷ್ಟಕರ,
  • ಈ ಜನರು ಪರಿಸ್ಥಿತಿಯನ್ನು ಮತ್ತಷ್ಟು ಕೆರಳಿಸಲು ಬಂದಿದ್ದಾರೆ
'ತೇಜಸ್ವಿ ಸೂರ್ಯ ಅವರು ಕರೌಲಿಗೆ ಪರಿಸ್ಥಿತಿಯನ್ನು ಮತ್ತಷ್ಟು ಕೆರಳಿಸಲು ಬಂದಿದ್ದಾರೆ' title=

ನವದೆಹಲಿ: ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರು ಕರೌಲಿಗೆ ಬಂದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಕೆರಳಿಸಲು ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಟೀಕಿಸಿದ್ದಾರೆ.

"ಹೆಸರು ತೇಜಸ್ವಿ ಸೂರ್ಯ ಆದರೆ ಅವರು ಇಲ್ಲಿಗೆ ಬಂದಿದ್ದನ್ನು ನೋಡಿ...ಕರೌಲಿಯಲ್ಲಿ ನಡೆದ ಘಟನೆ ದುರದೃಷ್ಟಕರ, ಈ ಜನರು ಪರಿಸ್ಥಿತಿಯನ್ನು ಮತ್ತಷ್ಟು ಕೆರಳಿಸಲು ಬಂದಿದ್ದಾರೆ ಎಂದು ನಾನು ಈಗಾಗಲೇ ಹೇಳಿದ್ದೇನೆ...ಕರೌಳಿಯಂತಹ ಘಟನೆಗಳು ಇತರ ಸ್ಥಳಗಳಲ್ಲಿ  ನಡೆಯಬಾರದು ಎಂದು ನಾವು ಕಳವಳಗೊಂಡಿದ್ದೇವೆ" ಎಂದು ಅವರು ಹೇಳಿದರು.

ಇದನ್ನೂ ಓದಿ: 7th Pay Commission : ಕೇಂದ್ರ ಪಿಂಚಣಿ, ನೌಕರರಿಗೆ ಸಿಹಿ ಸುದ್ದಿ : DA ಬಗ್ಗೆ ಮಹತ್ವದ ಮಾಹಿತಿ

'ಇತರ ರಾಜ್ಯಗಳಲ್ಲಿ ಗಲಭೆಗಳು ನಡೆದಾಗ, ಸರ್ಕಾರಗಳು ಮನೆಗಳನ್ನು ನೆಲಸಮಗೊಳಿಸಿದವು. ಯಾವುದೇ ತನಿಖೆಯಿಲ್ಲದೆ ಇಂತಹ ಕ್ರಮ ಕೈಗೊಳ್ಳಲು ಪ್ರಧಾನಿ ಅಥವಾ ಸಿಎಂಗೆ ಯಾವುದೇ ಹಕ್ಕಿಲ್ಲ. ಹಾಗೆ ಮಾಡಲು ಕಾನೂನಿಗೆ ಮಾತ್ರ ವಿಶೇಷ ಅಧಿಕಾರವಿದೆ ಮತ್ತು ಅದು ತನ್ನದೇ ಆದ ಕ್ರಮವನ್ನು ತೆಗೆದುಕೊಳ್ಳಬೇಕು, ”ಎಂದು ಸಿಎಂ ಗೆಹ್ಲೋಟ್ ಹೇಳಿದರು.

ಇದನ್ನೂ ಓದಿ: IAS Pradeep Gawande: ಮದುವೆಗೂ ಮುನ್ನವೇ ಟೀನಾ ದಾಬಿಯಿಂದ ಪ್ರದೀಪ್ ಗಾವಂಡೆ ದೂರ!

ಇದಕ್ಕೂ ಮುನ್ನ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಮತ್ತು ಸಂಸದ ತೇಜಸ್ವಿ ಸೂರ್ಯ, ಪಕ್ಷದ ರಾಜಸ್ಥಾನ ಮುಖ್ಯಸ್ಥ ಸತೀಶ್ ಪೂನಿಯಾ ಮತ್ತು ಇತರರನ್ನು ಬುಧವಾರ (ಏಪ್ರಿಲ್ 13) ಹಿಂಸಾಚಾರ ಪೀಡಿತ ಕರೌಲಿಗೆ ಭೇಟಿ ನೀಡುವುದನ್ನು ತಡೆಯಲಾಯಿತು. ಅವರನ್ನು ದೌಸಾ-ಕರೌಲಿ ಗಡಿಯಲ್ಲಿ ತಡೆಹಿಡಿಯಲಾಯಿತು ಆದರೆ ಹಿಂದೂ ಹೊಸ ವರ್ಷವನ್ನು ಆಚರಿಸಲು ನಡೆಸುತ್ತಿದ್ದ ಬೈಕ್ ರ್ಯಾಲಿಯಲ್ಲಿ ಕಲ್ಲು ತೂರಾಟ ನಡೆಸಿದ ನಂತರ ಭುಗಿಲೆದ್ದ ಏಪ್ರಿಲ್ 2 ಹಿಂಸಾಚಾರದ ಸಂತ್ರಸ್ತರನ್ನು ಭೇಟಿ ಮಾಡಲು ಅವರಿಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದರು.ಹಿಂಸಾಚಾರದಲ್ಲಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

"ಕರೌಲಿ ಗಲಭೆಗಳು ರಾಜಸ್ಥಾನದಲ್ಲಿ ಸ್ಪಷ್ಟವಾದ ಕಾನೂನುಬಾಹಿರತೆಯನ್ನು ಸೂಚಿಸುತ್ತವೆ. ರಾಮ ನವಮಿ ಶೋಭಾ ಯಾತ್ರೆಗೆ ಅಡ್ಡಿಪಡಿಸುವ ಉದ್ದೇಶಪೂರ್ವಕ ಪ್ರಯತ್ನ ಮತ್ತು ಆಕ್ರಮಣಕಾರರ ವಿರುದ್ಧ ಕ್ರಮ ಕೈಗೊಳ್ಳಲು ಕಾಂಗ್ರೆಸ್ ಸರ್ಕಾರಕ್ಕೆ ಇಷ್ಟವಿಲ್ಲದಿರುವುದು ಶೋಚನೀಯ" ಎಂದು ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : Arecanut Price Today: ರಾಜ್ಯದಲ್ಲಿ ಭರ್ಜರಿ ಏರಿಕೆ ಕಂಡ ಅಡಿಕೆ ಧಾರಣೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News