ಕಾಂಗ್ರೇಸ್ನಲ್ಲಿ ಡಿಸೆಂಬರ್ 11 ರಿಂದ ಆರಂಭಗೊಳ್ಳಲಿದೆ 'ರಾಹುಲ್ ಯುಗ'

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಡಿ. 11 ರಂದು ಎಐಸಿಸಿ ಅಧ್ಯಕ್ಷ ಸ್ಥಾನ ದೊರೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಕಾಂಗ್ರೇಸ್ ಪ್ರಧಾನ ಕಚೇರಿಯಲ್ಲಿ ಇಂದು ನಡೆದ ಕಾರ್ಯಕಾರಿಣಿ ಸಮಿತಿಯಲ್ಲಿ (ಸಿಡಬ್ಲ್ಯೂಸಿ) ಈ ನಿರ್ಧಾರ ಕೈಗೊಳ್ಳಲಾಗಿದೆ.

Last Updated : Nov 20, 2017, 01:14 PM IST
ಕಾಂಗ್ರೇಸ್ನಲ್ಲಿ ಡಿಸೆಂಬರ್ 11 ರಿಂದ ಆರಂಭಗೊಳ್ಳಲಿದೆ 'ರಾಹುಲ್ ಯುಗ' title=
Pic: ANI

ನವ ದೆಹಲಿ: ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿಗೆ ಪಟ್ಟ ಕಟ್ಟುವ ಕಾಲ ಸನಿಹ ಬಂದಿದೆ. ಕಾಂಗ್ರೇಸ್ನಲ್ಲಿ ಡಿಸೆಂಬರ್ 11 ರಿಂದ 'ರಾಹುಲ್ ಯುಗ' ಆರಂಭಕ್ಕಾಗಿ ಸಕಲ ಸಿದ್ಧತೆ ನಡೆದಿದೆ. ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಡಿ. 11 ರಂದು ಎಐಸಿಸಿ ಅಧ್ಯಕ್ಷ ಸ್ಥಾನ ದೊರೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಕಾಂಗ್ರೇಸ್ ಪ್ರಧಾನ ಕಚೇರಿಯಲ್ಲಿ ಇಂದು ನಡೆದ ಕಾರ್ಯಕಾರಿಣಿ ಸಮಿತಿಯಲ್ಲಿ (ಸಿಡಬ್ಲ್ಯೂಸಿ) ಈ ನಿರ್ಧಾರ ಕೈಗೊಳ್ಳಲಾಗಿದೆ.

ನವೆಂಬರ್ 21 ರಂದು ನಡೆಯಲಿರುವ ಚುನಾವಣೆಗೆ ನಾಮನಿರ್ದೇಶನಗಳನ್ನು ಸಲ್ಲಿಸುವ ದಿನಾಂಕವನ್ನು ಪಕ್ಷವು ನಿಗದಿಪಡಿಸಿದೆ. ನವೆಂಬರ್ 24 ರಂದು, ನಾಮನಿರ್ದೇಶನವನ್ನು ಹಿಂತೆಗೆದುಕೊಳ್ಳುವ ಕೊನೆಯ ದಿನಾಂಕವಾಗಿದೆ. ಅಧ್ಯಕ್ಷರ ಹುದ್ದೆಗೆ ಮತದಾನ ಡಿಸೆಂಬರ್ 8 ರಂದು ನಡೆಯಲಿದೆ ಮತ್ತು ಫಲಿತಾಂಶಗಳು ಡಿಸೆಂಬರ್ 11 ರಂದು ಘೋಷಣೆಯಾಗಲಿದೆ ಎಂದು ತಿಳಿದುಬಂದಿದೆ.

ಆಲ್ ಇಂಡಿಯಾ ಕಾಂಗ್ರೆಸ್ ಸಮಿತಿಯ ಸದಸ್ಯರು ಪಿಸಿಸಿ ಸಮಿತಿಯ ಅಧ್ಯಕ್ಷರನ್ನು ಮತದಾನ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಗುವುದು. ಸದಸ್ಯರು ಪಕ್ಷದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಗೆ ಮತ ಹಾಕುವ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ. ಆದರೆ ಈ ಬಾರಿ ಕಾಂಗ್ರೆಸ್ನಲ್ಲಿ ಹೊಸ ಅಧ್ಯಕ್ಷರ ಚುನಾವಣೆಯಲ್ಲಿ ರಾಹುಲ್ ಗಾಂಧಿಯವರ ಮುಂದೆ ಬೇರೆ ಅಭ್ಯರ್ಥಿಗಳು ನಿಲ್ಲುವ ಸಾಧ್ಯತೆ ಕಡಿಮೆ ಇರುವುದರಿಂದ ಈ ಚುನಾವಣೆ ಕೇವಲ ಔಪಚಾರಿಕ ಚುನಾವಣೆಯಾಗಿದೆ.

ಗಮನಾರ್ಹವಾಗಿ, ಕಾಂಗ್ರೆಸ್ನ ವಿವಿಧ ಸಂಘಟನೆಗಳು ಇತ್ತೀಚಿನ ಚುನಾವಣೆಗಳ ನಂತರ, ರಾಜ್ಯ ಸಮಿತಿಗಳು ಈಗಾಗಲೇ ರಾಹುಲ್ ಗಾಂಧಿಯನ್ನು ಅಧ್ಯಕ್ಷರನ್ನಾಗಿ ಮಾಡುವ ಪ್ರಸ್ತಾಪವನ್ನು ಜಾರಿಗೆ ತಂದಿದೆ. ಪ್ರಸ್ತುತ 1998 ರಿಂದ ಸೋನಿಯಾ ಗಾಂಧಿ ಎಐಸಿಸಿಯ ಅಧ್ಯಕ್ಷರಾಗಿದ್ದಾರೆ. ಗುಜರಾತ್ ಚುನಾವಣೆಯ ಮೊದಲು ರಾಹುಲ್ ಗಾಂಧಿಯವರ ಪಟ್ಟಾಭಿಷೇಕದಂತೆಯೇ, ಗುಜರಾತ್ ಚುನಾವಣೆ ಸಹ ಕಾಂಗ್ರೆಸ್ಗೆ ಬಹಳ ಮುಖ್ಯವಾಗುತ್ತದೆ.

Trending News