ನವದೆಹಲಿ: ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ತಾನು ಜನಿಯುಧಾರಿ ಬ್ರಾಹ್ಮಣ ಎಂದು ಹೇಳಿದ್ದಕ್ಕೆ ಆಗಾಗ ಕುಲಗೊತ್ರವನ್ನು ಪ್ರಶ್ನಿಸಿ ಅವರನ್ನು ಗೊಂದಲಕ್ಕೆ ಒಳಪಡಿಸಿದ್ದ ಬಿಜೆಪಿ ಪ್ರಶ್ನೆಗೆ ಕೊನೆಗೂ ಈಗ ಅವರು ಉತ್ತರಿಸಿದ್ದಾರೆ.
ಸೋಮವಾರದಂದು ರಾಹುಲ್ ಗಾಂಧಿ ರಾಜಸ್ತಾನದ ಪುಷ್ಕರದ ಬ್ರಹ್ಮ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.ಆ ವೇಳೆ ಅವರು ತಮ್ಮ ಗೋತ್ರವನ್ನು ಬಹಿರಂಗಪಡಿಸಿದ್ದಾರೆ. ಪೂಜೆ ಸಲ್ಲಿಸುವ ವೇಳೆ ಅವರಿಗೆ ಗೋತ್ರದ ಬಗ್ಗೆ ದೇವಸ್ತಾನದ ಪೂಜಾರಿ ಕೇಳಿದಾಗ ತಮ್ಮದು ದತ್ತಾತ್ರೇಯ ಗೋತ್ರ, ಕುಲ ಕೌಲ್ ಬ್ರಾಹ್ಮಣ ಎಂದು ಅವರು ಉತ್ತರಿಸಿದ್ದಾರೆ.
ಪೂಜೆಯ ಸಮಯದಲ್ಲಿ, ರಾಹುಲ್ ಗಾಂಧಿಯವರು ತಮ್ಮ ಪೂರ್ವಜರಿಗೆ ಸಂಬಂಧಿಸಿದಂತೆ ಎಲ್ಲ ಮಾಹಿತಿಗಳನ್ನು ಉಲ್ಲೇಖಿಸಿದರು.ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಲೇಶ್ವರ ದೇವಸ್ಥಾನಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದಾಗ ಅಕ್ಟೋಬರ್ನಲ್ಲಿ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರಿಗೆ ಕುಲಗೋತ್ರವನ್ನು ಬಹಿರಂಗಪಡಿಸಲು ಸವಾಲು ಹಾಕಿದ್ದರು.ಇಂದೋರ್ ರ್ಯಾಲಿಯಲ್ಲಿ ಸಂಬೀತ್ ಪಾತ್ರ ಭಾಗವಹಿಸಿ ರಾಹುಲ್ ಗಾಂಧಿಯವರ ಜನಿಯೋ ಧಾರಿ ಬಗ್ಗೆ ಮತ್ತು ಗೋತ್ರದ ಬಗ್ಗೆ ಪ್ರಶ್ನಿಸಿದ್ದರು.
ರಾಹುಲ್ ಗಾಂಧಿ ಪುಷ್ಕರ್ಗೆ ಭೇಟಿ ನೀಡುವ ಮೊದಲು ಸೋಮವಾರದಂದು ಬೆಳಿಗ್ಗೆ ಅಜ್ಮೀರ್ನಲ್ಲಿ ಸೂಫಿ ಸಂತ ಖ್ವಾಜಾ ಮೊಯಿನ್ ಮುದ್ದೀನ್ ಚಿಸ್ತಿ ದರ್ಗಾದಲ್ಲಿ 'ಝಿಯಾರತ್' ಪ್ರದರ್ಶಿಸಿದರು.