close

News WrapGet Handpicked Stories from our editors directly to your mailbox

ಜಮ್ಮು ಮತ್ತು ಕಾಶ್ಮಿರದತ್ತ ಪ್ರಯಾಣ ಬೆಳೆಸಿದ ರಾಹುಲ್ ಗಾಂಧಿ

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ಇತರ ವಿರೋಧ ಪಕ್ಷಗಳ 11 ನಾಯಕರು ಇಂದು ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದ್ದಾರೆ.

Updated: Aug 24, 2019 , 12:08 PM IST
ಜಮ್ಮು ಮತ್ತು ಕಾಶ್ಮಿರದತ್ತ ಪ್ರಯಾಣ ಬೆಳೆಸಿದ ರಾಹುಲ್ ಗಾಂಧಿ

ನವದೆಹಲಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ಇತರ ವಿರೋಧ ಪಕ್ಷಗಳ 11 ನಾಯಕರು ಇಂದು ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಈಗ ರಾಜಕೀಯ ನಾಯಕರು ಕಾಶ್ಮೀರಕ್ಕೆ ಭೇಟಿ ನೀಡಬಾರದು ಎಂದು ಜಮ್ಮು ಮತ್ತು ಕಾಶ್ಮೀರದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮನವಿ ಮಾಡಿಕೊಂಡಿದೆ. ಈ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದ ಜನರನ್ನು ಗಡಿ ಭಯೋತ್ಪಾದನೆ ಮತ್ತು ದಾಳಿಯಿಂದ ರಕ್ಷಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಆದ್ದರಿಂದ ರಾಜಕೀಯ ನಾಯಕರು ಈಗ ಶ್ರೀನಗರಕ್ಕೆ ಭೇಟಿ ನೀಡಬಾರದು, ಇದರಿಂದಾಗಿ ಜನಸಾಮಾನ್ಯರಿಗೆ ಅನಾನುಕೂಲವಾಗಲಿದೆ ಎಂದು ಟ್ವೀಟ್ ಮಾಡಿದೆ.

"ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಉಗ್ರರು ಮತ್ತು ಪ್ರತ್ಯೇಕತಾವಾದಿಗಳ ದಾಳಿಯಿಂದ ಜಮ್ಮು ಮತ್ತು ಕಾಶ್ಮೀರದ ಜನರನ್ನು ರಕ್ಷಿಸಲು ಸರ್ಕಾರ ಪ್ರಯತ್ನಿಸುತ್ತಿರುವ ಸಮಯದಲ್ಲಿ ಮತ್ತು ಕ್ರಮೇಣ ದುಷ್ಕರ್ಮಿಗಳು ಮತ್ತು ಕಿಡಿಗೇಡಿತನವನ್ನು ನಿಯಂತ್ರಿಸುವ ಮೂಲಕ ಸಾರ್ವಜನಿಕ ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಪ್ರಯತ್ನಿಸುತ್ತಿದೆ. ಸಾಮಾನ್ಯ ಜೀವನದ ಕ್ರಮೇಣ ಪುನಃಸ್ಥಾಪನೆಗೆ ಭಂಗ ತರುವ ಪ್ರಯತ್ನಗಳನ್ನು ಹಿರಿಯ ರಾಜಕೀಯ ಮುಖಂಡರು ಮಾಡಬಾರದು" ಎಂದು ವಿನಂತಿಸಿಕೊಂಡಿದೆ.

ಶ್ರೀನಗರದಲ್ಲಿ ಭೇಟಿ ನೀಡುತ್ತಿರುವ ಪ್ರತಿಪಕ್ಷಗಳ ಸರ್ವಪಕ್ಷಗಳ ನಿಯೋಗದಲ್ಲಿ ಕಾಂಗ್ರೆಸ್, ಸಿಪಿಐ (ಎಂ), ಸಿಪಿಐ, ರಾಷ್ಟ್ರೀಯ ಜನತಾ ದಳ, ಎನ್ಸಿಪಿ, ತೃಣಮೂಲ ಕಾಂಗ್ರೆಸ್ ಮತ್ತು ಡಿಎಂಕೆ ಸೇರಿವೆ ಎಂದು ಮೂಲಗಳು ತಿಳಿಸಿವೆ.

ಗುಲಾಮ್ ನಬಿ ಆಜಾದ್ ,ಆನಂದ್ ಶರ್ಮಾ ರಾಹುಲ್ ಗಾಂಧಿ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಹಾರಲಿದ್ದಾರೆ. ಆಜಾದ್ ಅವರನ್ನು ಈ ಹಿಂದೆ ಜಮ್ಮು ವಿಮಾನ ನಿಲ್ದಾಣದಲ್ಲಿ ಎರಡು ಬಾರಿ ನಿಲ್ಲಿಸಲಾಯಿತು,  ಅವರನ್ನು ಬಲವಂತವಾಗಿ ದೆಹಲಿಗೆ ಎರಡೂ ಬಾರಿ ವಾಪಸ್ ಕಳುಹಿಸಲಾಯಿತು. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸವಾದಿ) ನಾಯಕ ಸೀತಾರಾಮ್ ಯೆಚೂರಿ, ಸಿಪಿಐನ ಡಿ ರಾಜಾ, ಡಿಎಂಕಿಯ ತಿರುಚಿ ಶಿವ, ರಾಷ್ಟ್ರೀಯ ಜನತಾದಳದ ಮನೋಜ್ ಜಾ ಮತ್ತು ತೃಣಮೂಲ ಕಾಂಗ್ರೆಸ್ ನ ದಿನೇಶ್ ತ್ರಿವೇದಿ ಕೂಡ ನಿಯೋಗದ ಭಾಗವಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.