ವಯಾನಾಡ್​ನಲ್ಲಿಂದು ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ, ಪ್ರಿಯಾಂಕ ಸಾಥ್

ರಾಹುಲ್ ಗಾಂಧಿ ಗುರುವಾರ ಬೆಳಿಗ್ಗೆ 11:30ಕ್ಕೆ ವಯಾನಾಡ್​ನಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.

Last Updated : Apr 4, 2019, 07:43 AM IST
ವಯಾನಾಡ್​ನಲ್ಲಿಂದು ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ, ಪ್ರಿಯಾಂಕ ಸಾಥ್ title=
File Image

ಕೋಜಿಕೋಡ್: ಉತ್ತರಪ್ರದೇಶದ ಅಮೇಥಿ ಕ್ಷೇತ್ರವನ್ನು ಗಾಂಧಿ ಕುಟುಂಬದ ಭದ್ರಕೋಟೆ ಎಂದೇ ಪರಿಗಣಿಸಲಾಗಿದ್ದು ಅದು ರಾಹುಲ್ ಗಾಂಧಿಯವರ ಸಂಸದೀಯ ಕ್ಷೇತ್ರವಾವೂ ಆಗಿದೆ. ಅಮೇಥಿಯಲ್ಲಿ ಸ್ಪರ್ಧಿಸುತ್ತಿರುವ ರಾಹುಲ್, ಎರಡನೇ ಕ್ಷೇತ್ರವಾಗಿ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. 

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಬೆಳಿಗ್ಗೆ 11:30ಕ್ಕೆ ಇಂದು ಕೇರಳದ ವಯಾನಾಡ್​ ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಹಿರಿಯ ಬಿಜೆಪಿ ನಾಯಕ ರಮೇಶ್ ಚೆನೈತ್ಲಾ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ನಾಯಕಮತ್ತು ಕೇರಳದ ಉಸ್ತುವಾರಿ ಮುಕುಲ್ ವಾಸ್ನಿಕ್, ರಾಹುಲ್ ಸಹೋದರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಸಹ ಉಪಸ್ಥಿತರಿರಲಿದ್ದಾರೆ.

ರಾತ್ರಿ 9.30 ರ ವೇಳೆಗೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಹುಲ್:
ಅಸ್ಸಾಂ ಮತ್ತು ನಾಗಾಲ್ಯಾಂಡ್ನಲ್ಲಿ ನಿಯೋಜಿಸಲಾಗಿದ್ದ ಸಾರ್ವಜನಿಕ ಸಭೆಗಳ ಬಳಿಕ ರಾಹುಲ್ ಗಾಂಧಿ ಅವರು ಸುಮಾರು ರಾತ್ರಿ 9.30 ಕ್ಕೆ ಕೈರ್ಪುರ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.

ಪಕ್ಷದ ಕಾರ್ಯಕರ್ತರಿಂದ ರಾಹುಲ್ ಗಾಂಧಿಗೆ ಸ್ವಾಗತ:
ರಾಹುಲ್ ಗಾಂಧಿ ಬುಧವಾರ ರಾತ್ರಿ ಕೋಜಿಕೋಡ್ ಗೆ ಆಗಮಿಸಿದ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಅದ್ಧೂರಿಯಾಗಿ ಅವರನ್ನು ಸ್ವಾಗತಿಸಿದರು. ರಾಹುಲ್ ಬಂದ ಕೆಲ ಹೊತ್ತಿನಲ್ಲೇ ಪ್ರಿಯಾಂಕ ಕೂಡಾ ಆಗಮಿಸಿದರು. 

ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಚೆನೈತ್ಲಾ, ಒಮ್ಮನ್ ಚಾಂಡಿ, ಮುಲ್ಲಪಲ್ಲಿ ರಾಮಚಂದ್ರನ್, ಐಯುಎಂಎಲ್ ನಾಯಕ ಪಿ. ಕುಣಲಿಕಟ್ಟು ಮತ್ತು ಇ. ಟಿ. ಮುಹಮ್ಮದ್ ಬಶೀರ್ ರಾಹುಲ್ ಅವರನ್ನು ಸ್ವಾಗತಿಸಿದರು. ರಾಹುಲ್ ವಯನಾಡ್​ನಿಂದ ಕಣಕ್ಕಿಳಿಯುತ್ತಿರುವುದು ನಮ್ಮ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಿದೆ ಎಂದು ಚೆನೈತ್ಲಾ ಅವರು ಹೇಳಿದರು.

ಬುಧವಾರ ರಾತ್ರಿ ಕೋಜಿಕೋಡ್ ನಲ್ಲಿರುವ ಅತಿಥಿ ಗೃಹದಲ್ಲಿ ವಿಶ್ರಾಂತಿ ಪಡೆದ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಗುರುವಾರ ಬೆಳಿಗ್ಗೆ ವಯನಾಡಿಗೆ ಪ್ರಯಾಣ ಬೆಳೆಸಲಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮೊದಲು ಬೆಳಿಗ್ಗೆ 9:30ಕ್ಕೆ ರಾಹುಲ್, ಪ್ರಿಯಾಂಕ ರೋಡ್ ಶೋ ನಡೆಸಲಿದ್ದಾರೆ ಎಂದು ಚೆನೈತ್ಲಾ ಮಾಹಿತಿ ನೀಡಿದ್ದಾರೆ.

Trending News