Rajasthan Cabinet Reshuffle: ಪುನರ್ರಚನೆಯಾದ ಗೆಹಲೋಟ್ ಮಂತ್ರಿ ಮಂಡಲ, 11 ಸಂಪುಟ ಮತ್ತು 4 ರಾಜ್ಯ ಸಚಿವರಿಂದ ಪ್ರಮಾಣವಚನ ಸ್ವೀಕಾರ

Rajsthan Cabinet Reshuffle: ಇಂದು ಅಂದರೆ ನವೆಂಬರ್ 21 ರಂದು ರಾಜಸ್ಥಾನದಲ್ಲಿ ಸಚಿವ ಸಂಪುಟ ಪುನರ್ರಚನೆಯಾಗಿದೆ. ಒಟ್ಟು 15 ಶಾಸಕರು ರಾಜಸ್ಥಾನ ಸರ್ಕಾರದಲ್ಲಿ (Rajasthan Cabinet) ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಪೈಕಿ 11 ಮಂದಿ ಕ್ಯಾಬಿನೆಟ್ ಸಚಿವರಾಗಿದ್ದರೆ, 4 ಮಂದಿ ರಾಜ್ಯ ಸಚಿವರಾಗಿದ್ದಾರೆ. ಇವರಲ್ಲಿ ಮೂವರು ಮಹಿಳಾ ಶಾಸಕೀಯರು ಕೂಡ ಸ್ಥಾನ ಪಡೆದಿದ್ದಾರೆ. 

Written by - Nitin Tabib | Last Updated : Nov 21, 2021, 08:24 PM IST
  • ರಾಜಸ್ಥಾನದಲ್ಲಿ ಸಚಿವ ಸಂಪುಟ ಪುನರ್ರಚನೆಯಾಗಿದೆ.
  • ಒಟ್ಟು 15 ಶಾಸಕರು ರಾಜಸ್ಥಾನ ಸರ್ಕಾರದಲ್ಲಿ (Rajasthan Cabinet) ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
  • ಈ ಪೈಕಿ 11 ಮಂದಿ ಕ್ಯಾಬಿನೆಟ್ ಸಚಿವರಾಗಿದ್ದರೆ, 4 ಮಂದಿ ರಾಜ್ಯ ಸಚಿವರಾಗಿದ್ದಾರೆ.
Rajasthan Cabinet Reshuffle: ಪುನರ್ರಚನೆಯಾದ ಗೆಹಲೋಟ್ ಮಂತ್ರಿ ಮಂಡಲ, 11 ಸಂಪುಟ ಮತ್ತು 4 ರಾಜ್ಯ ಸಚಿವರಿಂದ ಪ್ರಮಾಣವಚನ ಸ್ವೀಕಾರ  title=
Rajasthan Cabinet Reshuffle (Photo Courtesy - Twitter)

Rajsthan Cabinet Reshuffle: ಇಂದು ಅಂದರೆ ನವೆಂಬರ್ 21 ರಂದು ರಾಜಸ್ಥಾನದಲ್ಲಿ ಸಚಿವ ಸಂಪುಟ ಪುನರ್ರಚನೆ ನಡೆದಿದೆ. ಒಟ್ಟು 15 ಶಾಸಕ-ಶಾಸಕಿಯರು ರಾಜಸ್ಥಾನ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಸರ್ಕಾರದ (Gehlot Government) ಎಲ್ಲಾ ಸಚಿವರು ಶನಿವಾರ ಸಂಜೆ ಪಕ್ಷದ ಹೈಕಮಾಂಡ್‌ಗೆ ರಾಜೀನಾಮೆ ಸಲ್ಲಿಸಿದ್ದರು. ನಂತರ 15 ಶಾಸಕ-ಶಾಸಕಿಯರು ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಪೈಕಿ 11 ಮಂದಿ ಕ್ಯಾಬಿನೆಟ್ ಸಚಿವರಾಗಿದ್ದರೆ, 4 ಮಂದಿ ರಾಜ್ಯ ಸಚಿವರಾಗಿದ್ದಾರೆ. ಈ 15 ಶಾಸಕ-ಶಾಸಕೀಯರಲ್ಲಿ ಮೂವರು ಮಹಿಳೆಯರಿಗೂ (Women In Rajasthan Cabinet) ಕೂಡ ಸ್ಥಾನ ಲಭಿಸಿದೆ. ಇದೇ ವೇಳೆ ಈ ಹೊಸ ಗೆಹ್ಲೋಟ್ ಕ್ಯಾಬಿನೆಟ್‌ನಲ್ಲಿ (Gehlot Cabinet) ಸಚಿನ್ ಪೈಲಟ್ ಬನದ ನಾಲ್ವರು ಶಾಸಕರನ್ನು ಸಹ ಸೇರಿಸಲಾಗಿದೆ.

 
ಹೇಮಾರಾಮ್ ಚೌಧರಿ ಅವರು ಗುಡಮಲಾನಿ ಕ್ಷೇತ್ರದ ಶಾಸಕರಾಗಿದ್ದಾರೆ
ಮೊದಲಿಗೆ ಹೇಮಾರಾಮ್ ಚೌಧರಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹೇಮಾರಾಮ್ ಚೌಧರಿ ಅವರು ಗುಡಮಲಾನಿ ಕ್ಷೇತ್ರದ ಶಾಸಕರಾಗಿದ್ದಾರೆ. 6 ಬಾರಿ ಶಾಸಕರಾಗಿರುವ ಅವರಿಗೆ ಪ್ರತಿಪಕ್ಷ ನಾಯಕನ ಅನುಭವ ಕೂಡ ಇದೆ. ಹೇಮರಾಮ್ ಜಾಟ್ ಸಮುದಾಯದಿಂದ ಬಂದವರು. ಅವರನ್ನು ಸಚಿನ್ ಪೈಲಟ್‌ಗೆ ಆಪ್ತ ಎಂದು ಪರಿಗಣಿಸಲಾಗುತ್ತದೆ. 

 

ಮಹೇಂದ್ರಜಿತ್ ಸಿಂಗ್ ಮಾಳವೀಯ ಅವರು ಸಚಿವರಾಗಿದ್ದರು
ಮಹೇಂದ್ರಜಿತ್ ಸಿಂಗ್ ಮಾಳವೀಯ ಅವರು ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮಹೇಂದ್ರಜಿತ್ ಬಗಿದೌರಾ ಕ್ಷೇತ್ರದ ಶಾಸಕರಾಗಿದ್ದಾರೆ. ಈ ಹಿಂದೆಯೂ ಅವರು ಸಚಿವರಾಗಿದ್ದರು. ಮಹೇಂದ್ರಜಿತ್ ಪರಿಶಿಷ್ಟ ಪಂಗಡದಿಂದ ಬಂದವರು. ಮಹೇಂದ್ರಜಿತ್ ರಾಜಸ್ಥಾನ ಕಾಂಗ್ರೆಸ್‌ನ ಉಪಾಧ್ಯಕ್ಷರೂ ಆಗಿದ್ದಾರೆ.

ರಾಮಲಾಲ್ ಜಾಟ್ ಕ್ಯಾಬಿನೆಟ್ ಸಚಿವರಾಗಿದ್ದಾರೆ
ಅಶೋಕ್ ಗೆಹ್ಲೋಟ್ ಸಂಪುಟದಲ್ಲಿ ರಾಮಲಾಲ್ ಜಾಟ್ ಅವರನ್ನು ಸಂಪುಟ ಸಚಿವರನ್ನಾಗಿ ಮಾಡಲಾಗಿದೆ. ರಾಮಲಾಲ್ ಜಾಟ್ ಸಮಾರಂಭದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಮಲಾಲ್ ಜಾಟ್ ಈ ಹಿಂದೆಯೂ ಸಚಿವರಾಗಿದ್ದರು. ರಾಮಲಾಲ್ ಜಾಟ್ ಅವರು ಮಂಡಲ್ ಕ್ಷೇತ್ರದ ಶಾಸಕರಾಗಿದ್ದಾರೆ. ನಾಲ್ಕನೇ ಬಾರಿ ಶಾಸಕರಾಗಿದ್ದಾರೆ. ರಾಮಲಾಲ್ ಜಾಟ್ ಜಾಟ್ ಸಮುದಾಯದಿಂದ ಬಂದವರು.

ಮಹೇಶ್ ಜೋಶಿ ಹವಾಮಹಲ್ ಕ್ಷೇತ್ರದ ಶಾಸಕರಾಗಿದ್ದಾರೆ
ಮಹೇಶ್ ಜೋಶಿ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮಹೇಶ್ ಜೋಶಿ ಹವಾಮಹಲ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಮಹೇಶ್ ಜೋಶಿ ಮೂರು ಬಾರಿ ಶಾಸಕರಾಗಿದ್ದಾರೆ. ಅವರು ಬ್ರಾಹ್ಮಣ ಸಮಾಜದಿಂದ ಬಂದವರು. ಮಹೇಶ್ ಜೋಶಿ ಕಾಂಗ್ರೆಸ್ ಮುಖ್ಯ ಸಚೇತಕರೂ ಹೌದು. ಅವರು ರಾಜಸ್ಥಾನ ಕಾಂಗ್ರೆಸ್ ಸೇವಾದಳದ ಅಧ್ಯಕ್ಷರಾಗಿದ್ದರು.

ವಿಶ್ವೇಂದ್ರ ಸಿಂಗ್ ಕಾಂಗ್ರೆಸ್‌ಗಿಂತ ಮೊದಲು ಬಿಜೆಪಿಯಲ್ಲಿದ್ದರು
ವಿಶ್ವೇಂದ್ರ ಸಿಂಗ್ ಅವರನ್ನು ಗೆಹ್ಲೋಟ್ ಸರ್ಕಾರದಲ್ಲಿ ಸಂಪುಟ ಸಚಿವರನ್ನಾಗಿ ಮಾಡಲಾಗಿದೆ. ವಿಶ್ವೇಂದ್ರ ಸಿಂಗ್ ಅವರು ದೀಗ್-ಕುಮ್ಹೆರ್ ಕ್ಷೇತ್ರದಿಂದ ಶಾಸಕರಾಗಿದ್ದಾರೆ. ಕಾಂಗ್ರೆಸ್‌ಗಿಂತ ಮೊದಲು ವಿಶ್ವೇಂದ್ರ ಸಿಂಗ್ ಬಿಜೆಪಿಯಲ್ಲಿದ್ದರು. ಇದಲ್ಲದೆ, ವಿಶ್ವೇಂದ್ರ ಸಿಂಗ್ ಭರತ್‌ಪುರ ಲೋಕಸಭಾ ಕ್ಷೇತ್ರದ ಮಾಜಿ ಸಂಸದರೂ ಆಗಿದ್ದಾರೆ. ಕಳೆದ ಎರಡು ಬಾರಿ ದೀಗ್-ಕುಮ್ಹೇರ್ ಕ್ಷೇತ್ರದಿಂದ ಶಾಸಕರಾಗಿ ಅವರು ಆಯ್ಕೆಗೊಂಡಿದ್ದಾರೆ.

ರಮೇಶ್ ಚಂದ್ ಮೀನಾ ಅವರನ್ನು ಪೈಲಟ್‌ನ ಆಪ್ತ ನಾಯಕ
ರಮೇಶ್ ಚಂದ್ ಮೀನಾ ಅವರನ್ನು ಸಂಪುಟ ಸಚಿವರನ್ನಾಗಿ ಮಾಡಲಾಗಿದೆ. ಅವರು ಸಪೋತ್ರ ಕ್ಷೇತ್ರದ ಶಾಸಕರಾಗಿದ್ದಾರೆ. ಅವರು ಮೀನಾ ಸಮಾಜದಿಂದ ಬಂದವರು. ಅವರು ಒಟ್ಟು ಎರಡು ಬಾರಿ ಶಾಸಕರಾಗಿದ್ದಾರೆ. ಅವರು ಕರೌಲಿ ಜಿಲ್ಲೆಯಿಂದ ಬಂದವರು. ರಮೇಶ್ ಚಂದ್ ಮೀನಾ ಸಚಿನ್ ಪೈಲಟ್ ಅವರ ಆಪ್ತ ಮನುಷ್ಯ ಎಂದು ನಂಬಲಾಗಿದೆ. 2008ರಲ್ಲಿ ಬಿಎಸ್ಪಿಯಿಂದ ಗೆದ್ದು, ನಂತರ ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ ಆಹಾರ ಮತ್ತು ಸರಬರಾಜು ಇಲಾಖೆಯಲ್ಲಿ ಸಚಿವರಾಗಿದ್ದರು. ಪೈಲಟ್ ಬನದ ದಂಗೆಯ ನಂತರ, ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲಾಗಿತ್ತು. 

ಮಮತಾ ಭೂಪೇಶ್ ಬೈರ್ವಾಗೆ ಬಡ್ತಿ ನೀಡುವ ಮೂಲಕ ಕ್ಯಾಬಿನೆಟ್ ಸಚಿವೆ ಸ್ಥಾನ
ಮಮತಾ ಭೂಪೇಶ್ ಬೈರ್ವಾ ಅವರನ್ನು ಸಂಪುಟ ಸಚಿವೆಯನ್ನಾಗಿ ಮಾಡಲಾಗಿದೆ. ಈ ಮೊದಲು ರಾಜ್ಯ ಸಚಿವೆಯಾಗಿದ್ದ  ಮಮತಾ ಭೂಪೇಶ್ ಅವರಿಗೆ ಬಡ್ತಿ ನೀಡಿ ಸಂಪುಟ ಸಚಿವರನ್ನಾಗಿ ಮಾಡಲಾಗಿದೆ. ಅವರು ಸಿಕ್ರೈ ಕ್ಷೇತ್ರದ ಶಾಸಕರಾಗಿದ್ದಾರೆ. ಮಮತಾ ಭೂಪೇಶ್ ಬೈರ್ವಾ ಪರಿಶಿಷ್ಟ ಸಮಾಜದಿಂದ ಬಂದವರು. ಈ ಹಿಂದೆಯೂ ಗೆಹ್ಲೋಟ್ ಸರ್ಕಾರದಲ್ಲಿ ಅವರು ಸಚಿವೆಯಾಗಿದ್ದರು ಅವರು ಜುಂಜುನು ಜಿಲ್ಲೆಯಿಂದ ಬಂದಿದ್ದಾರೆ. 

ಭಜನ್‌ಲಾಲ್ ಜಾತವ್ ಅವರಿಗೆ ಸಂಪುಟ ಸಚಿವರಾಗಿ ಬಡ್ತಿ ನೀಡಲಾಗಿದೆ
ಭಜನ್‌ಲಾಲ್ ಜಾತವ್ ವೈರ್ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿದ್ದಾರೆ. ಅವರು ಪರಿಶಿಷ್ಟ ಜಾತಿಯಿಂದ ಬಂದವರು. ಈ ಹಿಂದೆ ಕೃಷಿ ಖಾತೆ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ಭಜನ್ ಲಾಲ್ ಜಾತವ್ ಅವರಿಗೆ ಮತ್ತೆ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ. ಇದೀಗ ರಾಜ್ಯ ಸಚಿವರಿಂದ ಸಂಪುಟ ಸಚಿವರಾಗಿ ಬಡ್ತಿ ಪಡೆದಿದ್ದಾರೆ. ಅವರು ಭರತ್‌ಪುರ ಜಿಲ್ಲೆಯಿಂದ ಬಂದವರು.

ಟಿಕಾರಾಂ ಜೂಲಿ ಅವರು ಅಲ್ವಾರ್ ಗ್ರಾಮಾಂತರ ಕ್ಷೇತ್ರದ ಶಾಸಕರಾಗಿದ್ದಾರೆ
ರಾಜಸ್ಥಾನದ ಅಲ್ವಾರ್ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಆಯ್ಕೆಗೊಂಡ ಟಿಕಾರಾಂ ಜೂಲಿ ಅವರು ರಾಜ್ಯ ಸಚಿವರಾಗಿ ಸಂಪುಟದಲ್ಲಿ ಸ್ಥಾನ ಪಡೆಯುತ್ತಿದ್ದರು. ಆದರೆ, ಈ ಬಾರಿ  ಸಚಿವ ಸಂಪುಟ ವಿಸ್ತರಣೆಯಲ್ಲಿ ಬಡ್ತಿ ಪಡೆದಿದ್ದಾರೆ. ಜೂಲಿ ಈ ಹಿಂದೆ ಕಾರ್ಮಿಕ ಇಲಾಖೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು. ಅವರು ಅಲ್ವಾರ್ ಗ್ರಾಮಾಂತರ ಕ್ಷೇತ್ರದ ಶಾಸಕರಾಗಿದ್ದಾರೆ.

ಗೋವಿಂದ್ ರಾಮ್ ಮೇಘವಾಲ್ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ
ಮಾಸ್ಟರ್ ಭನ್ವರ್ ಲಾಲ್ ಮೇಘವಾಲ್ ನಿಧನದ ನಂತರ ಸಚಿವ ಸಂಪುಟದಲ್ಲಿ ದಲಿತ ಸಚಿವರೇ ಇಲ್ಲದಂತಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಗೋವಿಂದ್ ರಾಮ್ ಮೇಘವಾಲ್, ಮಹೇಂದ್ರಜಿತ್ ಸಿಂಗ್ ಮಾಳವೀಯ ಮತ್ತು ಮಮತಾ ಭೂಪೇಶ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಗೋವಿಂದ್ ರಾಮ್ ಮೇಘವಾಲ್ ಅವರು ಖಜುವಾಲಾ ಕ್ಷೇತ್ರದ ಶಾಸಕರಾಗಿದ್ದಾರೆ. ಅವರು ಈ ಹಿಂದೆ ಅವರು ಬಿಜೆಪಿಯ ಭಾಗವಾಗಿದ್ದರು. ಎರಡನೇ ಬಾರಿ ಶಾಸಕರಾಗಿ ಆಯ್ಕೆಗೊಂಡಿದ್ದಾರೆ.

ಶಕುಂತಲಾ ರಾವತ್ ಸಂಪುಟಕ್ಕೆ ಸೇರ್ಪಡೆ
ಅಲ್ವಾರ್‌ನ ಬನ್ಸೂರ್ ಕ್ಷೇತ್ರದಿಂದ ಬಂದಿರುವ ಶಕುಂತಲಾ ರಾವತ್ ಕೂಡ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಬನ್ಸೂರು ಕ್ಷೇತ್ರದಿಂದ ಎರಡು ಬಾರಿ ಗೆದ್ದಿರುವ ಶಕುಂತಲಾ ಅವರು ಪಕ್ಷದ ಟ್ರಸ್ಟಿಗಳಲ್ಲಿ ಒಬ್ಬರು. ಶಕುಂತಲಾ ರಾವತ್ ಅವರು ರಾಜಸ್ಥಾನ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಇದಲ್ಲದೆ, ಅವರು ರಾಜಸ್ಥಾನ ಪ್ರದೇಶ ಕಾಂಗ್ರೆಸ್‌ನ ಮಾಜಿ ಕಾರ್ಯದರ್ಶಿಯೂ ಆಗಿದ್ದಾರೆ.

ಬ್ರಿಜೇಂದ್ರ ಸಿಂಗ್ ಓಲಾ ಪ್ರಮಾಣ ವಚನ ಸ್ವೀಕರಿಸಿದರು
ಶಿಕ್ಷಣ ಸಚಿವ ಗೋವಿಂದ್ ಸಿಂಗ್ ದೋಟಸಾರಾ ಅವರ ರಾಜೀನಾಮೆಯ ನಂತರ, ಶೇಖಾವತಿ ವಿಭಾಗದಲ್ಲಿ ಪಕ್ಷದ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಬ್ರಿಜೇಂದ್ರ ಸಿಂಗ್ ಓಲಾ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಪೈಲಟ್ ಬೆಂಬಲಿಗರು ಆಗಿರುವ ಓಲಾ ಶೇಖಾವತಿಯ ಬಾಹುಬಲಿ ಜಾಟ್ ನಾಯಕರು. ಈ ಹಿಂದೆಯೂ ಸಚಿವರಾಗಿದ್ದರು. ಅವರು ಜುಂಜುನು ಕ್ಷೇತ್ರದ ಶಾಸಕರಾಗಿದ್ದಾರೆ. ಬ್ರಿಜೇಂದ್ರ ಓಲಾ ಜಾಟ್ ಸಮುದಾಯದಿಂದ ಬಂದವರು.

ಮುರಾರಿಲಾಲ್ ಮೀನಾ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದರು
ಸಚಿನ್ ಪೈಲಟ್ ಅವರನ್ನು ತಮ್ಮ ಮುಖಂಡ ಎಂದು ಹೇಳಿದ್ದ ಮುರಾರಿಲಾಲ್ ಮೀನಾ ಅವರಿಗೂ ಸಚಿವ ಸ್ಥಾನ ನೀಡಲಾಗಿದೆ. ಅವರನ್ನು ರಾಜ್ಯ ಸಚಿವರನ್ನಾಗಿ ಸೇರಿಸಲಾಗಿದೆ. ಮುರಾರಿಲಾಲ್ ಮೀನಾ ಅವರು ದೌಸಾ ಕ್ಷೇತ್ರದ ಶಾಸಕರಾಗಿದ್ದಾರೆ. ಅವರು ಮೀನಾ ಸಮಾಜದಿಂದ ಬಂದವರು. ಇದಕ್ಕೂ ಮುನ್ನ ಅವರು ರಾಜಸ್ಥಾನ ಸರ್ಕಾರದಲ್ಲಿ ಸಚಿವರಾಗಿದ್ದರು.

ಇದನ್ನೂ ಓದಿ-ಸಾವಿರ ಅರ್ಥ ಹೇಳುವ ಮೋದಿ-ಯೋಗಿಯ ಎರಡು ಫೋಟೊ ಮತ್ತೊಂದು ಕವಿತೆ..!

ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ರಾಜೇಂದ್ರ ಸಿಂಗ್ ಗೂಢಾ ಕೂಡ ಸಚಿವರಾಗಿದ್ದರು
ಗೆಹ್ಲೋಟ್ ಅವರ ಆಪ್ತ ಎನಿಸಿಕೊಂಡಿರುವ ರಾಜೇಂದ್ರ ಗೂಢಾ ಅವರಿಗೂ ಸಚಿವ ಸ್ಥಾನ ನೀಡಲಾಗಿದೆ. ಬಿಎಸ್‌ಪಿಯಿಂದ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಗೂಢಾ ಅವರು ರಾಜಕೀಯ ಬಿಕ್ಕಟ್ಟಿನಲ್ಲಿ ಸರ್ಕಾರದಲ್ಲಿಯೇ ಇದ್ದರು, ಆದರೆ ಕಳೆದ ಕೆಲವು ತಿಂಗಳುಗಳಿಂದ ಸರ್ಕಾರ ಮತ್ತು ಪಕ್ಷದ ವಿರುದ್ಧ ಮುನಿಸಿಕೊಂಡಿದ್ದರು. ರಾಜೇಂದ್ರ ಗೂಢಾ ಅವರ ಸೋದರ ಮಾವ ಭನ್ವರ್ ಸಿಂಗ್ ಭಾಟಿ ಅವರು ಈಗಾಗಲೇ ಉನ್ನತ ಶಿಕ್ಷಣ ಸಚಿವರಾಗಿ ಸಂಪುಟದಲ್ಲಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ.

ಇದನ್ನೂ ಓದಿ-Farm Laws Withdrawn: MSP Guarantee ಸಿಗುವವರೆಗೆ ಹೋರಾಟ ಮುಂದುವರೆಯಲಿದೆ, ಸಿಂಘು ಬಾರ್ಡರ್ ನಿಂದ ರೈತರ ಘೋಷಣೆ

ಜಾಹಿದಾ ಖಾನ್ ಮುಸ್ಲಿಂ ಕೋಟಾದಲ್ಲಿ ಸಚಿವರಾದರು
ಭರತಪುರ್ ಕಾಮಾ ಪ್ರದೇಶದಿಂದ ಬಂದಿರುವ ಮುಸ್ಲಿಂ ಅಭ್ಯರ್ಥಿ ಜಾಹಿದಾ ಅವರನ್ನೂ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಜಾಹಿದಾ ಅವರನ್ನು ಪಕ್ಷಕ್ಕೆ ಪ್ರಮುಖ ಫ್ಯಾಕ್ಟರ್ ಎಂದು ನೋಡಲಾಗುತ್ತದೆ. ಇದೇ ವೇಳೆ ಬಹುಕಾಲದಿಂದ ಮುಸ್ಲಿಂ ಅಭ್ಯರ್ಥಿಗಳಿಗೆ ಸಚಿವ ಸ್ಥಾನ ನೀಡದಿರುವ ಚರ್ಚೆಗೂ ಕೂಡ ಇದೀಗ ಬ್ರೇಕ್ ಬಿದ್ದಂತಾಗಿದೆ. 

ಇದನ್ನೂ ಓದಿ-750 ಮೃತ ರೈತರ ಕುಟುಂಬಗಳಿಗೆ 3 ಲಕ್ಷ ರೂ.ಪರಿಹಾರ ಘೋಷಿಸಿದ ತೆಲಂಗಾಣ ಸಿಎಂ ಕೆಸಿಆರ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News