ನವದೆಹಲಿ: ರಾಜಸ್ಥಾನದ ಸಿರೊಹಿ ನಗರದಲ್ಲಿ 'ಪಕೋಡ'ವನ್ನು ಸೇವಿಸಿದ ನಂತರ ಆಹಾರ ವಿಷದಿಂದಾಗಿ ಮಕ್ಕಳು ಸೇರಿದಂತೆ ಸುಮಾರು 40 ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಘಟನೆಯು ಶುಕ್ರವಾರ ನಡೆದಿದ್ದು, ಆಹಾರದ ಸೇವಿದ ತಕ್ಷಣ ಅಸ್ತವ್ಯಸ್ತಗೊಂಡವರನ್ನು ತಕ್ಷಣ ಹತ್ತಿರದ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸಧ್ಯ ಅವರೆಲ್ಲರೂ ಕೂಡ ಸುಸ್ಥಿತಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ.
#Rajasthan: More than 40 people fall sick due to food poisoning in Sirohi. Dr. ML Hindola, Incharge of District Hospital, 'We have more than 40 patients here. We are taking care & providing appropriate medications to them. They are showing improvements'. pic.twitter.com/ETC13Na8JQ
— ANI (@ANI) May 20, 2018
ಈ ಕುರಿತಾಗಿ ಪ್ರತಿಕ್ರಿಯಿಸಿರುವ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಎಂ ಎಲ್ ಹಿಂದೋಲಾ "ಇಲ್ಲಿ ಮಕ್ಕಳನ್ನು ಒಳಗೊಂಡಂತೆ 40 ಕ್ಕಿಂತ ಹೆಚ್ಚಿನ ರೋಗಿಗಳಿದ್ದಾರೆ, ಅವರಿಗೆ ನಾವು ಸೂಕ್ತ ಔಷಧಿಗಳನ್ನು ನೀಡಿದ್ದೇವೆ ಈಗಾಗಲೇ ಅವರು ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡಿದ್ದಾರೆ" ಎಂದು ತಿಳಿಸಿದರು