ರೈತರ ಬೇಡಿಕೆಗಳು ಈಡೇರುವವರೆಗೆ ಪ್ರತಿಭಟನೆ ಮುಂದುವರೆಯುತ್ತದೆ-ರಾಕೇಶ್ ಟಿಕಾಯತ್

ಇಂದು ಕಿಸಾನ್ ಮಹಾಪಂಚಾಯತ್'ನಲ್ಲಿ ಮಾತನಾಡಿದ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಸರ್ಕಾರವು ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ರೈತರ ಪ್ರತಿಭಟನೆ ಮುಂದುವರಿಯುತ್ತದೆ ಎಂದು ಹೇಳಿದರು.

Written by - Zee Kannada News Desk | Last Updated : Sep 5, 2021, 10:40 PM IST
  • ಇಂದು ಕಿಸಾನ್ ಮಹಾಪಂಚಾಯತ್'ನಲ್ಲಿ ಮಾತನಾಡಿದ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಸರ್ಕಾರವು ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ರೈತರ ಪ್ರತಿಭಟನೆ ಮುಂದುವರಿಯುತ್ತದೆ ಎಂದು ಹೇಳಿದರು.
 ರೈತರ ಬೇಡಿಕೆಗಳು ಈಡೇರುವವರೆಗೆ ಪ್ರತಿಭಟನೆ ಮುಂದುವರೆಯುತ್ತದೆ-ರಾಕೇಶ್ ಟಿಕಾಯತ್  title=

ನವದೆಹಲಿ: ಇಂದು ಕಿಸಾನ್ ಮಹಾಪಂಚಾಯತ್'ನಲ್ಲಿ ಮಾತನಾಡಿದ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಸರ್ಕಾರವು ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ರೈತರ ಪ್ರತಿಭಟನೆ ಮುಂದುವರಿಯುತ್ತದೆ ಎಂದು ಹೇಳಿದರು.

'ಸರ್ಕಾರವು ನಮ್ಮನ್ನು ಮಾತುಕತೆಗೆ ಆಹ್ವಾನಿಸಿದಾಗ, ನಾವು ಹೋಗುತ್ತೇವೆ. ಸರ್ಕಾರವು ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ರೈತರ ಆಂದೋಲನ ಮುಂದುವರಿಯುತ್ತದೆ.ಸ್ವಾತಂತ್ರ್ಯಕ್ಕಾಗಿ ಹೋರಾಟವು 90 ವರ್ಷಗಳ ಕಾಲ ಮುಂದುವರಿಯಿತು, ಹಾಗಾಗಿ ಈ ಆಂದೋಲನವು ಎಷ್ಟು ಸಮಯದವರೆಗೆ ಹೋಗುತ್ತದೆ ಎನ್ನುವುದು ನನಗೆ ತಿಳಿದಿಲ್ಲ ಎಂದು ಟಿಕಾಯತ್ (Rakesh Tikait) ಹೇಳಿದರು.

ಇದನ್ನೂ ಓದಿ: Farmer Protest, : ಕೃಷಿ ಮಸೂದೆ ವಿರುದ್ಧ ಹೋರಾಟಕ್ಕೆ 6 ತಿಂಗಳು : ನಾಳೆ ರೈತರಿಂದ 'ಬ್ಲ್ಯಾಕ್ ಡೇ' ಆಚರಣೆ!

'ಕಿಸಾನ್ ಮಹಾಪಂಚಾಯತ್' ಇಂದು ಉತ್ತರಪ್ರದೇಶದ ಮುಜಾಫರ್ ನಗರದಲ್ಲಿ ನಡೆಯುತ್ತಿದ್ದು, ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಅಂಗೀಕರಿಸಲಾದ ಕೇಂದ್ರದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸಲು 15 ರಾಜ್ಯಗಳ ಸಾವಿರಾರು ರೈತರು ಆಗಮಿಸಿದ್ದಾರೆ.

'ಚುನಾವಣಾ ಪ್ರಣಾಳಿಕೆಯಲ್ಲಿ ವಂಚನೆಗಳನ್ನು ಬರೆದಿಲ್ಲ, ಇದರಲ್ಲಿ ರೈಲ್ವೆ ನಿಲ್ದಾಣಗಳು ಮತ್ತು ವಿಮಾನ ನಿಲ್ದಾಣಗಳು, ವಿಮಾ ಕಂಪನಿಗಳು, ರಸ್ತೆಗಳು, ಬಂದರುಗಳು, ನದಿ, ಗಳು ಮತ್ತು ವಿದ್ಯುತ್ ಖಾಸಗೀಕರಣದ ಮಾರಾಟ ಸೇರಿವೆ.ಈ ಭಾರತ ಸರ್ಕಾರವು ಮಾರಾಟಕ್ಕಿದೆ.ಡಾ. ಭೀಮರಾವ್ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನ ಅಪಾಯದಲ್ಲಿದೆ ಎಂದು ರೈತ ನಾಯಕ ಟಿಕಾಯತ್ ಹೇಳಿದರು.

ಇದನ್ನೂ ಓದಿ: Rakesh Tikait: 'ಮತ್ತೆ ದೆಹಲಿಗೆ ಲಕ್ಷಾಂತರ ಟ್ರ್ಯಾಕ್ಟರ್ ಪ್ರವೇಶ, ಸಂಸತ್ತಿನಲ್ಲೇ ಮಂಡಿ ತೆರೆಯುತ್ತೇವೆ'

ಈ ಚಳುವಳಿ ಗೆದ್ದಾಗ ಮಾತ್ರ ನಾವು ನಮ್ಮ ಮನೆಗಳಿಗೆ ಬರುತ್ತೇವೆ.ರೈತರ ಪ್ರತಿಭಟನೆಯ ಬೇಡಿಕೆಗಳನ್ನು ಸರ್ಕಾರ ಈಡೇರಿಸುವವರೆಗೂ ಆಂದೋಲನ ಮುಂದುವರಿಯುತ್ತದೆ.ನಮ್ಮ ಸ್ಮಶಾನವನ್ನು ನಿರ್ಮಿಸಿದರೂ ನಾವು ಪ್ರತಿಭಟನಾ ಸ್ಥಳವನ್ನು ಬಿಡುವುದಿಲ್ಲ ಎಂದು ನಾವು ಪ್ರತಿಜ್ಞೆ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ದೇಶದಾದ್ಯಂತ ಪ್ರತಿಭಟನೆ ನಡೆಸುತ್ತಿರುವ ರೈತರು ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ಆಂದೋಲನವನ್ನು ತೀವ್ರಗೊಳಿಸಲಿದ್ದಾರೆ ಎಂದು ಅವರು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News