Rakesh Tikait: 'ಮತ್ತೆ ದೆಹಲಿಗೆ ಲಕ್ಷಾಂತರ ಟ್ರ್ಯಾಕ್ಟರ್ ಪ್ರವೇಶ, ಸಂಸತ್ತಿನಲ್ಲೇ ಮಂಡಿ ತೆರೆಯುತ್ತೇವೆ'

ಬಿಜೆಪಿ ಸರ್ಕಾರ ಕಾರ್ಪೊರೇಟರ್ ಗಳ ಹಿತಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

Last Updated : Mar 14, 2021, 02:15 PM IST
  • ರಾಜಧಾನಿ ದೆಹಲಿಗೆ ಲಕ್ಷಾಂತರ ಟ್ರ್ಯಾಕ್ಟರ್ ಗಳು ಮತ್ತೆ ಪ್ರವೇಶಿಸಲಿವೆ. ಸಂಸತ್ನಲ್ಲಿ ಹೊಸ ಮಂಡಿ ತೆರೆಯಲಾಗುವುದು
  • ಬಿಜೆಪಿ ಸರ್ಕಾರ ಕಾರ್ಪೊರೇಟರ್ ಗಳ ಹಿತಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
  • ಸಂಸತ್ ಮಂಡಿ ಸ್ಥಾಪನೆಗೆ ಅತ್ಯುತ್ತಮ ಸ್ಥಳ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಅದರೊಳಗೆ ವ್ಯಾಪಾರಿ ಕುಳಿತಿದ್ದಾನೆ.
Rakesh Tikait: 'ಮತ್ತೆ ದೆಹಲಿಗೆ ಲಕ್ಷಾಂತರ ಟ್ರ್ಯಾಕ್ಟರ್ ಪ್ರವೇಶ, ಸಂಸತ್ತಿನಲ್ಲೇ ಮಂಡಿ ತೆರೆಯುತ್ತೇವೆ' title=

ನವದೆಹಲಿ: ರಾಜಧಾನಿ ದೆಹಲಿಗೆ ಲಕ್ಷಾಂತರ ಟ್ರ್ಯಾಕ್ಟರ್ ಗಳು ಮತ್ತೆ ಪ್ರವೇಶಿಸಲಿವೆ. ಸಂಸತ್ನಲ್ಲಿ ಹೊಸ ಮಂಡಿ ತೆರೆಯಲಾಗುವುದು ಎಂದು ಭಾರತೀಯ ಕಿಸಾನ್ ನಾಯಕ ರಾಕೇಶ್ ಟಿಕಾಯತ್ ಘೋಷಿಸಿದ್ದಾರೆ.

ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಕೇಶ್ ಟಿಕಾಯತ್(Rakesh Tikait), ಪಶ್ಚಿಮ ಬಂಗಾಳ ಚುನಾವಣೆಯ ಯುದ್ಧ ಭೂಮಿಯಾಗಿದೆ. ಬಿಜೆಪಿ ಸರ್ಕಾರ ಕಾರ್ಪೊರೇಟರ್ ಗಳ ಹಿತಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

online shopping: ಆನ್ ಲೈನ್ ಶಾಪಿಂಗ್ ನಲ್ಲಿ ನಕಲಿ ಸರಕು ಬಂದ್ರೆ ಕಂಪನಿಯೇ ಜವಾಬ್ದಾರಿ! ಸರ್ಕಾರದಿಂದ ಹೊಸ ನಿಯಮ!

ರೈತರು ತಮ್ಮ ಬೆಳೆಗಳನ್ನು ಎಪಿಎಂಸಿ ಹೊರಗೆ ಮಾರಾಟ ಮಾಡಬಹುದು, ಮಂಡಿಯ ಹೊರಗೆ ಮಾರಾಟ ಮಾಡಬಹುದು ಎಂದು ಪ್ರಧಾನಿ ಮೋದಿ(PM Modi) ಹೇಳಿದ್ದಾರೆ. ಸಂಸತ್ ಮಂಡಿ ಸ್ಥಾಪನೆಗೆ ಅತ್ಯುತ್ತಮ ಸ್ಥಳ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಅದರೊಳಗೆ ವ್ಯಾಪಾರಿ ಕುಳಿತಿದ್ದಾನೆ. ಹೊರಗೆ ರೈತ ಇದ್ದಾನೆ. ಹಾಗಾಗಿ ಸಂಸತ್ನಲ್ಲಿಯೇ ಹೊಸ ಮಂಡಿ ಸ್ಥಾಪಿಸುತ್ತೇವೆ ಎಂದು ರಾಕೇಶ್ ಟಿಕಾಯತ್ ತಿಳಿಸಿದ್ದಾರೆ.

Corona vaccine ಎರಡೂ ಡೋಸ್ ಪಡೆದ ನಂತರವೂ ಕರೋನಾ ಪಾಸಿಟಿವ್ ಆದ ವೈದ್ಯೆ

ಸಂಯುಕ್ತ ಕಿಸಾನ್ ಮೋರ್ಚಾ ತೀರ್ಮಾನ ಕೈಗೊಂಡ ದಿನದಂದು ಸಂಸತ್ನಲ್ಲಿ ಹೊಸ ಮಂಡಿ ಸ್ಥಾಪನೆ ಮಾಡಲಾಗುವುದು. 3.5 ಲಕ್ಷ ಟ್ರ್ಯಾಕ್ಟರ್(Tractor Rally) ಗಳು ಮತ್ತು 25 ಲಕ್ಷ ರೈತರು ಒಂದೇ ದಿನ ದೆಹಲಿಗೆ ಪ್ರವೇಶಿಸಲಿದ್ದಾರೆ. ನಮ್ಮ ಮುಂದಿನ ಗುರಿ ಸಂಸತ್ನಲ್ಲಿ ಬೆಳೆಗಳನ್ನು ಮಾರಾಟ ಮಾಡುವುದಾಗಿದೆ ಎಂದು ಅವರು ಹೇಳಿದ್ದಾರೆ.

ಅಂಬಾನಿ ನಿವಾಸ ಎದುರು ಸ್ಫೋಟಕ ಪತ್ತೆ ಪ್ರಕರಣಕ್ಕೆ ಸ್ಫೋಟಕ ತಿರುವು, ಪೊಲೀಸ್ ಅಧಿಕಾರಿ ಸಚಿನ್ ವಾಝೆ ಅರೆಸ್ಟ್.!

ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ಕೃಷಿ ಕಾನೂನುಗಳ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ ಕೊಲ್ಕೊತ್ತಾದಲ್ಲಿ ರೈತ ಪಂಚಾಯತ್(Rait Panchayat) ನಡೆಸಿದೆ. ಈ ಕಾರಣಕ್ಕೆ ಇಲ್ಲಿಗೆ ಆಗಮಿಸಿದ ರಾಕೇಶ್ ಟಿಕಾಯತ್ ನಂದಿಗ್ರಾಮಕ್ಕೆ ಭೇಟಿ ನೀಡಿದ್ದರು.

ನಾನ್ ವೆಜ್ ಪಿಜ್ಜಾ ಸ್ವೀಕರಿಸಿದ್ದಕ್ಕೆ ₹1 ಕೋಟಿ ರೂ ಪರಿಹಾರ ಕೇಳಿದ ಮಹಿಳೆ...!

ನಂದಿಗ್ರಾಮದಲ್ಲಿ ಟಿಎಂಸಿ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamta Banerjee) ಮತ್ತು ಬಿಜೆಪಿಯಿಂದ ಸುವೆಂದು ಅಧಿಕಾರಿ ಸ್ಪರ್ಧಿಸಿದ್ದಾರೆ. ನಂದಿಗ್ರಾಮ ದೇಶದ ಗಮನಸೆಳೆದ ಕ್ಷೇತ್ರವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News