ರಾಮರಾಜ್ಯದಲ್ಲಿ ತೆರಿಗೆ ಸಂಗ್ರಹ ವಿಧಾನ ಹೇಗಿತ್ತು? ತುಳಸೀದಾಸರ ವಿವರಣೆ ಇಲ್ಲಿದೆ

PM Modi Andhra Visit: ಇಂದು ಆದಾಯ ತೆರಿಗೆ‌ ಪಾವತಿಸುವುದನ್ನು ಸರಳಗೊಳಿಸಲಾಗಿದೆ. ಎಲ್ಲ ಸುಧಾರಣೆಗಳಿಂದಾಗಿ ದೇಶದಲ್ಲಿ ತೆರಿಗೆ‌ ಸಂಗ್ರಹವಾಗುತ್ತಿದೆ. 

Written by - Chetana Devarmani | Last Updated : Jan 16, 2024, 08:30 PM IST
  • ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ
  • ರಾಮರಾಜ್ಯದಲ್ಲಿ ತೆರಿಗೆ ಸಂಗ್ರಹ
  • ಅಯೋಧ್ಯೆಗೆ ಆಗಮಿಸಿದ ಪ್ರಧಾನಿ ಮೋದಿ
ರಾಮರಾಜ್ಯದಲ್ಲಿ ತೆರಿಗೆ ಸಂಗ್ರಹ ವಿಧಾನ ಹೇಗಿತ್ತು? ತುಳಸೀದಾಸರ ವಿವರಣೆ ಇಲ್ಲಿದೆ  title=

PM Modi Andhra Visit: ಇಡೀ ದೇಶವೇ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ದಿನಕ್ಕಾಗಿ ಕಾದು ಕುಳಿತಿದೆ. ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ರಾಮನಗರಿಯಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ. ಮಂಗಳವಾರ ಅಯೋಧ್ಯೆಗೆ ಆಗಮಿಸಿದ ಪ್ರಧಾನಿ ಮೋದಿ, ರಾಮನನ್ನು ಉತ್ತಮ ಆಡಳಿತದ ಪ್ರತೀಕ ಎಂದು ಬಣ್ಣಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಇತ್ತೀಚಿನ ದಿನಗಳಲ್ಲಿ ಇಡೀ ದೇಶವೇ ರಾಮನ ಜಪ ಮಾಡುತ್ತಿದೆ. ಭಗವಾನ್ ರಾಮನ ಜೀವನದ ಸ್ಫೂರ್ತಿ ಮತ್ತು ನಂಬಿಕೆ ಭಕ್ತಿಯ ವ್ಯಾಪ್ತಿಯನ್ನು ಮೀರಿದೆ. ಭಗವಾನ್ ರಾಮನು ಸಾಮಾಜಿಕ ಜೀವನದಲ್ಲಿ ಉತ್ತಮ ಆಡಳಿತದ ಸಂಕೇತ ಎಂದರು.

ಇದನ್ನೂ ಓದಿ: Ayodhya : ಅಯೋಧ್ಯೆಯಲ್ಲಿ ರಾಮ ಮಂದಿರದ ಬಳಿ ಕಾಂಗ್ರೆಸ್ ಮುಖಂಡರ ಮೇಲೆ ಹಲ್ಲೆ.!

ರಾಮರಾಜ್ಯವು ಉತ್ತಮ ಆಡಳಿತದ ಈ 4 ಸ್ತಂಭಗಳ ಮೇಲೆ ನಿಂತಿದೆ. ಅಲ್ಲಿ ಪ್ರತಿಯೊಬ್ಬರೂ ಗೌರವದಿಂದ ಮತ್ತು ಭಯವಿಲ್ಲದೆ ಬದುಕುತ್ತಿದ್ದರು. ಅಲ್ಲಿ ಪ್ರತಿಯೊಬ್ಬ ನಾಗರಿಕನನ್ನು ಸಮಾನವಾಗಿ ನೋಡಲಾಗುತ್ತದೆ. ಅಲ್ಲಿ ದುರ್ಬಲರನ್ನು ರಕ್ಷಿಸಲಾಗುತ್ತದೆ. ಧರ್ಮ ಎಂದರೆ ಕರ್ತವ್ಯ ಎಂದು ಮೋದಿ ಹೇಳಿದರು. 

ರಾಮರಾಜ್ಯದಲ್ಲಿ ತೆರಿಗೆ ವಿಧಾನ: 

ರಾಮರಾಜ್ಯದಲ್ಲಿ ಹೇಗೆ ತೆರಿಗೆ ಸಂಗ್ರಹಿಸಲಾಗುತ್ತಿತ್ತು ಎಂಬ ವಿಚಾರವನ್ನು ಪ್ರಧಾನಿ ಮೋದಿ ಪ್ರಸ್ತಾಪಿಸಿದರು. ಈ ಬಗ್ಗೆ ತುಳಸಿದಾಸರು ಭೂಮಿಯಿಂದ ಸೂರ್ಯನು ನೀರನ್ನು ತೆಗೆದುಕೊಳ್ಳುವಂತೆ ಎಂದು ಹೇಳಿದ್ದಾರೆ. ಅದೇ ನೀರು ಮೋಡಗಳನ್ನು ರೂಪಿಸಿ ಮತ್ತೆ ಮಳೆಯ ರೂಪದಲ್ಲಿ ಭೂಮಿಗೆ ಬರುತ್ತದೆ. ಹೀಗೆ ರಾಮರಾಜ್ಯದ ತೆರಿಗೆ ಸಂಗ್ರಹ ಕೆಲಸ ನಡೆಯುತ್ತಿತ್ತು ಎಂದು ಮೋದಿ ಹೇಳಿದರು. 

ನಮ್ಮ ತೆರಿಗೆ ವ್ಯವಸ್ಥೆಯೂ ಇದೇ ರೀತಿ ಇರಬೇಕು. ಸಾರ್ವಜನಿಕರಿಂದ 
ಸಂಗ್ರಹಿಸುವ ಪ್ರತಿ ಪೈಸೆ ತೆರಿಗೆಯನ್ನು ಸಾರ್ವಜನಿಕ ಕಲ್ಯಾಣಕ್ಕೆ ಬಳಸಬೇಕು. ನಾವು ಕಳೆದ 10 ವರ್ಷಗಳಲ್ಲಿ ತೆರಿಗೆ ವ್ಯವಸ್ಥೆಯಲ್ಲಿ ಪ್ರಮುಖ ಸುಧಾರಣೆಗಳನ್ನು ಮಾಡಿದ್ದೇವೆ ಎಂದರು. 

ಇದನ್ನೂ ಓದಿ: “ರಾಮ ಮಂದಿರ ನಿರ್ಮಾಣದಿಂದ ಶೇ.74ರಷ್ಟು ಮುಸಲ್ಮಾನರು ಸಂತಸಗೊಂಡಿದ್ದಾರೆ”: ಮುಸ್ಲಿಂ ರಾಷ್ಟ್ರೀಯ ಮಂಚ್ ಹೇಳಿಕೆ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News