Free Ration : ಪಡಿತರದಾರರಿಗೆ ಬಿಗ್ ನ್ಯೂಸ್ : ಉಚಿತ ಪಡಿತರ 6 ತಿಂಗಳು ವಿಸ್ತರಣೆ, ಆಹಾರ ಧಾನ್ಯ ಪಡೆಯಲು ಈ ಕೆಲಸ ಮಾಡಿ

ದೆಹಲಿಯಲ್ಲಿಯೂ ‘ಒನ್ ನೇಷನ್ ಒನ್ ಪಡಿತರ ಚೀಟಿ ಯೋಜನೆ’ ಜಾರಿಯಾದ ನಂತರ ಬೇರೆ ರಾಜ್ಯಗಳ ಜನರಿಗೂ ಉಚಿತ ಪಡಿತರ ನೀಡಲಾಗುತ್ತಿದೆ.  ದೆಹಲಿ ಸರ್ಕಾರವು 6 ತಿಂಗಳವರೆಗೆ ಉಚಿತ ಪಡಿತರ ಯೋಜನೆಯನ್ನು ಹೆಚ್ಚಿಸುವುದಾಗಿ ಘೋಷಿಸಿದೆ.

Written by - Channabasava A Kashinakunti | Last Updated : Nov 7, 2021, 01:53 PM IST
  • ಉಚಿತ ಪಡಿತರ ಯೋಜನೆಯನ್ನು 6 ತಿಂಗಳು ವಿಸ್ತರಿಸಲಾಗಿದೆ
  • ದೆಹಲಿಯಲ್ಲಿ ಸುಮಾರು 72.78 ಲಕ್ಷ ಫಲಾನುಭವಿಗಳು
  • ಒಂದು ರಾಷ್ಟ್ರ ಒಂದು ಪಡಿತರ ಚೀಟಿ
Free Ration : ಪಡಿತರದಾರರಿಗೆ ಬಿಗ್ ನ್ಯೂಸ್ : ಉಚಿತ ಪಡಿತರ 6 ತಿಂಗಳು ವಿಸ್ತರಣೆ, ಆಹಾರ ಧಾನ್ಯ ಪಡೆಯಲು ಈ ಕೆಲಸ ಮಾಡಿ title=

ನವದೆಹಲಿ : ಪಡಿತರ ಚೀಟಿಯ ಫಲಾನುಭವಿಗಳಿಗೆ ಸಂತಸದ ಸುದ್ದಿಯೊಂದು ಬಂದಿದೆ. ಪಡಿತರ ಚೀಟಿ ಇಲ್ಲದಿದ್ದರೂ ಕೇಂದ್ರ ಸರಕಾರ ಉಚಿತ ಪಡಿತರ ನೀಡುತ್ತಿದೆ. ದೇಶದ ಹಲವು ರಾಜ್ಯಗಳಲ್ಲಿ ಉಚಿತ ಆಹಾರ ಧಾನ್ಯಗಳನ್ನು ನೀಡಲಾಗುತ್ತಿದೆ. ದೆಹಲಿಯಲ್ಲಿಯೂ ‘ಒನ್ ನೇಷನ್ ಒನ್ ಪಡಿತರ ಚೀಟಿ ಯೋಜನೆ’ ಜಾರಿಯಾದ ನಂತರ ಬೇರೆ ರಾಜ್ಯಗಳ ಜನರಿಗೂ ಉಚಿತ ಪಡಿತರ ನೀಡಲಾಗುತ್ತಿದೆ.  ದೆಹಲಿ ಸರ್ಕಾರವು 6 ತಿಂಗಳವರೆಗೆ ಉಚಿತ ಪಡಿತರ ಯೋಜನೆಯನ್ನು ಹೆಚ್ಚಿಸುವುದಾಗಿ ಘೋಷಿಸಿದೆ.

ದೆಹಲಿ ಸರ್ಕಾರ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ

ಆಮ್ ಆದ್ಮಿ ಪಕ್ಷ (AAP) ಸರ್ಕಾರವು ಮುಂದಿನ ಆರು ತಿಂಗಳವರೆಗೆ ತನ್ನ ಉಚಿತ ಪಡಿತರ ಯೋಜನೆ(Free Ration Scheme)ಯನ್ನು ಹೆಚ್ಚಿಸಲು ಹೊರಟಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ ಪಡಿತರ ಚೀಟಿ) ಅಡಿಯಲ್ಲಿ ಉಚಿತ ಪಡಿತರ ವಿತರಣೆಯನ್ನು ನವೆಂಬರ್ 30 ರ ನಂತರ ವಿಸ್ತರಿಸಲು ಕೇಂದ್ರ ನಿರಾಕರಿಸಿದ ನಂತರ ಕೇಜ್ರಿವಾಲ್ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮೂಲಕ ಈ ಮಾಹಿತಿ ನೀಡಿದ್ದಾರೆ.

ದೆಹಲಿ ಸಿಎಂ ಟ್ವೀಟ್ ಹೀಗಿದೆ

ಕೇಜ್ರಿವಾಲ್(Arvind Kejriwal) ಅವರು ಇಂದು ಟ್ವೀಟ್ ಮಾಡಿ, 'ಹಣದುಬ್ಬರವು ತುಂಬಾ ಹೆಚ್ಚಾಗಿದೆ. ಜನಸಾಮಾನ್ಯರೂ ಎರಡು ಹೊತ್ತಿನ ರೊಟ್ಟಿ ಇಲ್ಲದೇ ಪರದಾಡುವಂತಾಗಿದೆ. ಕರೋನಾದಿಂದ ಹಲವಾರು ಜನರು ನಿರುದ್ಯೋಗಿಗಳಾಗಿದ್ದಾರೆ, ಪ್ರಧಾನಮಂತ್ರಿಗಳೇ, ಬಡವರಿಗೆ ಉಚಿತ ಪಡಿತರ ನೀಡುವ ಈ ಯೋಜನೆಯನ್ನು ಇನ್ನೂ ಆರು ತಿಂಗಳು ವಿಸ್ತರಿಸಬೇಕು. ದೆಹಲಿ ಸರ್ಕಾರ ತನ್ನ ಉಚಿತ ಪಡಿತರ ಯೋಜನೆಯನ್ನು ಆರು ತಿಂಗಳವರೆಗೆ ವಿಸ್ತರಿಸುತ್ತಿದೆ.

ಹಣದುಬ್ಬರ ತುಂಬಾ ಹೆಚ್ಚಾಗಿದೆ. ಜನಸಾಮಾನ್ಯರೂ ಎರಡು ಹೊತ್ತಿನ ರೊಟ್ಟಿ ಇಲ್ಲದೇ ಪರದಾಡುವಂತಾಗಿದೆ. ಕರೋನಾದಿಂದ ಹಲವಾರು ನಿರುದ್ಯೋಗಿಗಳು

ಪ್ರಧಾನಮಂತ್ರಿಗಳೇ, ದಯವಿಟ್ಟು ಬಡವರಿಗೆ ಉಚಿತ ಪಡಿತರ ನೀಡುವ ಈ ಯೋಜನೆಯನ್ನು ಇನ್ನೂ ಆರು ತಿಂಗಳವರೆಗೆ ವಿಸ್ತರಿಸಿ.

ದೆಹಲಿ ಸರ್ಕಾರ ತನ್ನ ಉಚಿತ ಪಡಿತರ ಯೋಜನೆಯನ್ನು ಆರು ತಿಂಗಳವರೆಗೆ ವಿಸ್ತರಣೆ 

ದೆಹಲಿ ಸರ್ಕಾರದಿಂದ 'ಒಂದು ರಾಷ್ಟ್ರ ಒಂದು ಪಡಿತರ ಚೀಟಿ(Ration Card)' ಯೋಜನೆಯಡಿ ಆಹಾರ ಧಾನ್ಯಗಳ ವಿತರಣೆಯನ್ನು ಈಗ ಎಲ್ಲಾ ಇ-ಪಿಒಎಸ್ ಮೂಲಕ ಜಾರಿಗೊಳಿಸಲಾಗುತ್ತಿದೆ. ಈಗ ಇದರ ಅಡಿಯಲ್ಲಿ ಫಲಾನುಭವಿಗಳು ಕಾರ್ಡ್ ಇಲ್ಲದಿದ್ದರೂ ಉಚಿತ ಪಡಿತರವನ್ನು ಪಡೆಯಲು ಸಾಧ್ಯವಾಗುತ್ತದೆ. ಆದರೆ ಇದಕ್ಕಾಗಿ ನಿಮ್ಮ ಕಾರ್ಡ್ ಅನ್ನು ಆಧಾರ್ ಅಥವಾ ಬ್ಯಾಂಕ್‌ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಇದಲ್ಲದೆ, ದೆಹಲಿ ಸರ್ಕಾರವು ಈ ಸೌಲಭ್ಯವನ್ನು ನೀಡಿದ್ದು, ನಿಮ್ಮ ಆರೋಗ್ಯ ಸರಿಯಿಲ್ಲದಿದ್ದರೆ ಅಥವಾ ಕೆಲವು ಕಾರಣಗಳಿಂದ ನೀವು ಪಡಿತರ ಅಂಗಡಿಗೆ ಹೋಗಲು ಸಾಧ್ಯವಾಗದಿದ್ದರೆ, ನಿಮ್ಮ ಸ್ಥಳದಲ್ಲಿ ಅಂದರೆ ನಿಮ್ಮ ಕಾರ್ಡ್‌ನಲ್ಲಿ ಬೇರೆ ಯಾವುದೇ ಪಡಿತರವನ್ನು ಪಡೆಯಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News