ನವ ದೆಹಲಿ: ಇಂದು ಗುಜರಾತ್ ನ ನಾಲ್ಕು ವಿಧಾನಸಭಾ ಕ್ಷೇತ್ರಗಳ ಆರು ಮತದಾನ ಕೇಂದ್ರಗಳಲ್ಲಿ ಮರು-ಮತದಾನ ನಡೆಯಲಿದೆ. ವಾಡಗಾಂ, ವಿರಗಮ್, ಡಸ್ಕರೋಯಿ ಮತ್ತು ಸಾವಲಿ ವಿಧಾನಸಭಾ ಕ್ಷೇತ್ರಗಳಲ್ಲಿ ಮರು-ಮತದಾನ ನಡೆಲಿದೆ. ಇವಿಎಂ ನಲ್ಲಿನ ದೋಷಗಳ ಕಾರಣದಿಂದಾಗಿ ಈ ಕ್ಷೇತ್ರಗಳಲ್ಲಿ ಮರು-ಮತದಾನ ನಡೆಸಲು ಚುನಾವಣಾ ಆಯೋಗ ತೀರ್ಮಾನಿಸಿದೆ ಎಂದು ಹೇಳಲಾಗುತ್ತಿದೆ.
Visuals from Savli as re-polling begins in 6 polling stations in Vadgam, Viramgam, Daskroi and Savli #GujaratElection2017 pic.twitter.com/5NkHtCQD7x
— ANI (@ANI) December 17, 2017
ವಾಡಗಾಂ ನಿಂದ ದಲಿತ ನಾಯಕ ಜಿಗ್ನೇಶ್ ಮೇವಾನಿ ಸ್ಪರ್ಧಿಸುತ್ತಿದ್ದರೆ, ವಿರಾಮ್ಗಾಂ ವಿಧಾನಸಭಾ ಕ್ಷೇತ್ರವನ್ನು ಪಟಿದಾರ್ ನಾಯಕ ಹಾರ್ದಿಕ್ ಪಟೇಲ್ ಅವರ ಸ್ಥಾನ ಎಂದು ಪರಿಗಣಿಸಲಾಗಿದೆ.
ಚುನಾವಣಾ ಆಯೋಗ ಬಿಡುಗಡೆ ಮಾಡಿದ ಅಂತಿಮ ಅಂಕಿ ಅಂಶಗಳ ಪ್ರಕಾರ, ಎರಡು ಹಂತಗಳಲ್ಲಿ ನಡೆದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಶೇಕಡಾ 68.41ರಷ್ಟು ಮತದಾನ ದಾಖಲಾಗಿದೆ.