New Parliament Building : ನೂತನ ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದ ಆರ್ ಜೆಡಿ! ಟ್ವೀಟ್‌ ಸಮರ ಶುರು

New Parliament Boycott: ಹೊಸ ಸಂಸತ್‌ ಭವನದ ಉದ್ಘಾಟನೆಯ ನಂತರವೂ ರಾಜಕೀಯ ಗದ್ದಲ ಮುಂದುವರೆದಿದೆ. ಈ ವಿವಾದದ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಆರ್ ಜೆಡಿ ಮಾಡಿದೆ. ಹೊಸ ಸಂಸತ್ ಭವನದ ಕುರಿತು ಆರ್‌ಜೆಡಿಯ ಟ್ವೀಟ್‌ ಸಮರ ಆರಂಭವಾಗಿದೆ.  

Written by - Chetana Devarmani | Last Updated : May 28, 2023, 12:20 PM IST
  • ಹೊಸ ಸಂಸತ್‌ ಭವನದ ಉದ್ಘಾಟನೆ
  • ನೂತನ ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದ ಆರ್ ಜೆಡಿ!
  • ಲಾಲು ಪ್ರಸಾದ್‌ ಯಾದವ್ ಅವರ ಪಕ್ಷ ರಾಷ್ಟ್ರೀಯ ಜನತಾ ದಳ
New Parliament Building : ನೂತನ ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದ ಆರ್ ಜೆಡಿ! ಟ್ವೀಟ್‌ ಸಮರ ಶುರು  title=
New Parliament Building

New Parliament Inauguration: ನೂತನ ಸಂಸತ್ ಭವನ ಉದ್ಘಾಟನೆಯಾದ ನಂತರವೂ ರಾಜಕೀಯ ಗದ್ದಲ ನಿಲ್ಲುವ ಹೆಸರು ತೆಗೆದುಕೊಳ್ಳುತ್ತಿಲ್ಲ. ಏತನ್ಮಧ್ಯೆ, ಲಾಲು ಪ್ರಸಾದ್‌ ಯಾದವ್ ಅವರ ಪಕ್ಷ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಹೊಸ ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದೆ. ಮತ್ತೊಂದೆಡೆ, ನಿತೀಶ್ ಕುಮಾರ್ ಅವರ ಪಕ್ಷ ಜೆಡಿಯು (ಜೆಡಿಯು) ಕೂಡ ಹೊಸ ಸಂಸತ್ತಿನ ಉದ್ಘಾಟನೆಗೆ ವಿರೋಧ ವ್ಯಕ್ತಪಡಿಸಿದೆ. ಜೆಡಿಯು ಸರ್ವಾಧಿಕಾರ ಧೋರಣೆ ಎಂದು ಕರೆದಿದೆ. ಹೊಸ ಸಂಸತ್ ಭವನದ ಉದ್ಘಾಟನಾ ಸಮಾರಂಭವನ್ನು ಸುಮಾರು 20 ವಿರೋಧ ಪಕ್ಷಗಳು ಬಹಿಷ್ಕರಿಸಿವೆ. ಹೊಸ ಸಂಸತ್ತಿನ ಉದ್ಘಾಟನಾ ಸಮಾರಂಭದಲ್ಲಿ ಕಾಂಗ್ರೆಸ್, ಟಿಎಂಸಿ, ಆಮ್ ಆದ್ಮಿ ಪಾರ್ಟಿ, ಆರ್‌ಜೆಡಿ, ಎಸ್‌ಪಿ ಮತ್ತು ಜೆಡಿಯು ಸೇರಿದಂತೆ ಎಲ್ಲಾ ಪಕ್ಷಗಳು ಭಾಗವಹಿಸಿಲ್ಲ.‌

ಇದನ್ನೂ ಓದಿ:ಪ್ರಧಾನಿ ಮೋದಿ ನೇತೃತ್ವದ ನೀತಿ ಆಯೋಗದ ಸಭೆ ಬಹಿಷ್ಕರಿಸಿದ ಎಂಟು ರಾಜ್ಯದ ಮುಖ್ಯಮಂತ್ರಿಗಳು..!

ಹೊಸ ಸಂಸತ್ತಿನ ಬಗ್ಗೆ ವಿವಾದಾತ್ಮಕ ಟ್ವೀಟ್!

ಹೊಸ ಸಂಸತ್ ಭವನದ ಉದ್ಘಾಟನೆಯ ನಂತರ, RJD ಯ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಹೊಸ ಸಂಸತ್ತಿನ ಫೋಟೋ ಮತ್ತು ಶವಪೆಟ್ಟಿಗೆಯನ್ನು ಒಟ್ಟಿಗೆ ಹಂಚಿಕೊಂಡು, 'ಯೇ ಕ್ಯಾ ಹೈ?' ಎಂಬ ಶೀರ್ಷಿಕೆಯೊಂದಿಗೆ ಟ್ವೀಟ್ ಮಾಡಿದೆ.

 

 

ಉದ್ಘಾಟನೆ ವೇಳೆ ಪ್ರತಿಪಕ್ಷಗಳ ಗದ್ದಲ : 

ಗಮನಾರ್ಹವೆಂದರೆ ಹೊಸ ಸಂಸತ್ ಭವನದ ಉದ್ಘಾಟನೆಗೆ ಇಡೀ ದೇಶದಲ್ಲಿ ಸಂಭ್ರಮಾಚರಣೆ ನಡೆಯುತ್ತಿದ್ದು, ಹಲವು ವಿರೋಧ ಪಕ್ಷಗಳು ಹೊಸ ಸಂಸತ್ ಭವನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿವೆ. ಇಂದು ನಡೆಯಲಿರುವ ಉದ್ಘಾಟನಾ ಸಮಾರಂಭಕ್ಕೆ ಕಾಂಗ್ರೆಸ್ ಸೇರಿದಂತೆ 20 ವಿರೋಧ ಪಕ್ಷಗಳು ಗೈರಾಗಿದ್ದಾರೆ. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಇತಿಹಾಸವನ್ನೇ ಬದಲಿಸುವ ಬಿಜೆಪಿ ಸರ್ಕಾರ ಮುಂದೊಂದು ದಿನ ಬದಲಾಗಲಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಬೆಂಬಲಕ್ಕೆ ನಿಂತ ರಜನಿಕಾಂತ್

ಹೊಸ ಸಂಸತ್ತಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಾರುಖ್ ಖಾನ್ :

ಮತ್ತೊಂದೆಡೆ, ಚಲನಚಿತ್ರ ನಟ ಶಾರುಖ್ ಖಾನ್ ಹೊಸ ಸಂಸತ್ ಭವನದ ಸೌಂದರ್ಯವನ್ನು ಟ್ವೀಟ್ ಮಾಡುವ ಮೂಲಕ ಹೊಗಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಹೊಸ ಸಂಸತ್ ಭವನವು ಪ್ರಜಾಪ್ರಭುತ್ವದ ಶಕ್ತಿ ಮತ್ತು ಸಂಪ್ರದಾಯವನ್ನು ಆಧುನಿಕತೆಯೊಂದಿಗೆ ಸಂಯೋಜಿಸುವ ಪ್ರಗತಿಯ ಸಂಕೇತವಾಗಿದೆ ಎಂದು ಬರೆದಿದ್ದಾರೆ. ಇದಲ್ಲದೇ ಎಲ್ಲಾ ಪಕ್ಷಗಳು ಭಿನ್ನಾಭಿಪ್ರಾಯ ಮರೆತು ನೂತನ ಸಂಸತ್ ಭವನದ ಉದ್ಘಾಟನೆಯನ್ನು ರಾಷ್ಟ್ರೀಯ ಏಕತೆಯ ಸಂದರ್ಭವನ್ನಾಗಿ ಮಾಡುವಂತೆ ನಟ ಕಮಲ್ ಹಾಸನ್ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಇಂದು ನೂತನ ಸಂಸತ್ ಭವನ ಉದ್ಘಾಟನೆ: ಹಳೆ ಪಾರ್ಲಿಮೆಂಟ್’ಗಿಂತ ಇದು ಹೇಗೆ ಭಿನ್ನ ಗೊತ್ತಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News