close

News WrapGet Handpicked Stories from our editors directly to your mailbox

ಪ್ಲಾಸಿಕ್ ಬಾಟಲ್ ಬಳಕೆ ಬಗ್ಗೆ ಸಲ್ಮಾನ್ ಖಾನ್ ನೀಡಿದ ಸಂದೇಶ ಏನ್ ಗೊತ್ತಾ?!

ಲಿವುಡ್ ಸ್ಟಾರ್ ಸಲ್ಮಾನ್ ಖಾನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವೀಡಿಯೋವೊಂದನ್ನು ಶೇರ್ ಮಾಡುವ ಮೂಲಕ ಪ್ಲಾಸ್ಟಿಕ್ ಬಳಕೆ ಬಗ್ಗೆ ಸೂಕ್ಷ್ಮ ಸಂದೇಶವನ್ನು ನೀಡಿದ್ದಾರೆ. 

Updated: Jun 30, 2019 , 01:58 PM IST
ಪ್ಲಾಸಿಕ್ ಬಾಟಲ್ ಬಳಕೆ ಬಗ್ಗೆ ಸಲ್ಮಾನ್ ಖಾನ್ ನೀಡಿದ ಸಂದೇಶ ಏನ್ ಗೊತ್ತಾ?!

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಏಕ-ಬಳಕೆಯ ಪ್ಲಾಸ್ಟಿಕ್ ಬಾಟಲಿಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಬೆನ್ನಲ್ಲೇ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವೀಡಿಯೋವೊಂದನ್ನು ಶೇರ್ ಮಾಡುವ ಮೂಲಕ ಸೂಕ್ಷ್ಮ ಸಂದೇಶವನ್ನು ನೀಡಿದ್ದಾರೆ. 

ಸಲ್ಮಾನ್ ಖಾನ್ ಶೇರ್ ಮಾಡಿರುವ ವೀಡಿಯೋದಲ್ಲಿ ಪ್ಲಾಸ್ಟಿಕ್ ಬಾಟಲಿಯಲ್ಲಿ ಎಷ್ಟು ಬಾರಿ ನೀರು ಕೊಟ್ಟರೂ ಕುಡಿಯದ ಕೋತಿಯೊಂದು ಲೋಟದಲ್ಲಿ ನೀರು ಕೊಟ್ಟ ಕೂಡಲೇ ಗಟಗಟನೆ ಕುಡಿಯುತ್ತಿರುವ ದೃಶ್ಯವಿದೆ. ಈ ಕೋತಿಯನ್ನು ಭಜರಂಗಿ ಭಾಯ್ ಜಾನ್ ಎಂದಿರುವ ಸಲ್ಮಾನ್ ಖಾನ್, "ನಮ್ಮ ಭಜರಂಗಿ ಭಾಯ್ ಜಾನ್ ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕುಡಿಯುವುದಿಲ್ಲ" ಎಂದು ವೀಡಿಯೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ. 

ಮೇಲ್ನೋಟಕ್ಕೆ ಹಾಸ್ಯಮಯವಾಗಿ ಕಂಡರೂ ಸಾಕಷ್ಟು ಒಳಾರ್ಥವನ್ನು ಹೊಂದಿರುವ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗ್ತಿದೆ.