ನವದೆಹಲಿ:ಇನ್ಮುಂದೆ ಯಾರೇ ಆಗಲಿ ನಿಮ್ಮ ATM ಕಾರ್ಡ್ ಅನ್ನು ಕಳುವು ಮಾಡಿದರೆ ನೀವು ಚಿಂತೆ ಮಾಡುವ ಅಗತ್ಯವಿಲ್ಲ. ಏಕೆಂದರೆ ಕಳುವಾದ ನಿಮ್ಮ ATM ಕಾರ್ಡ್ ನಿಂದ ಹಣ ವಿಥ್ ಡ್ರಾ ಮಾಡುವುದು ಸುಲಭದ ಮಾತಲ್ಲ ಹಾಗೂ ನಿಮ್ಮ ATM ಕಾರ್ಡ್ ನಿಂದ ನೀವು ಮಾತ್ರ ಹಣ ವಿಥ್ ಡ್ರಾ ಮಾಡಬಹುದಾಗಿದೆ. ಯಾವುದೇ ವ್ಯಕ್ತಿ ನಿಮ್ಮ ಕಾರ್ಡ್ ಹಾಗೂ ಪಾಸ್ವರ್ಡ್ ಬಳಸಿ ನಿಮ್ಮ ಖಾತೆಯಿಂದ ಹಣಪಡೆಯಲು ಸಾಧ್ಯವಿಲ್ಲ. ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಹೊಸ ಸುರಕ್ಷಾ ಸೇವೆಯೊಂದನ್ನು ಬಿಡುಗಡೆ ಮಾಡಿದೆ. ಇದರ ಅಡಿ ಯಾವುದೇ ಓರ್ವ ವ್ಯಕ್ತಿ ನಿಮ್ಮ ATM ಕಾರ್ಡ್ ಅನ್ನು ಬಳಸಿ ನಿಮ್ಮ ಖಾತೆಯಿಂದ ಹಣ ತೆಗೆಯಲು ಸಾಧ್ಯವಿಲ್ಲ.
ಡಬಲ್ ಅಥಾಂಟಿಕೆಶನ್ ಸೇವೆ
ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ATM ಗಳಿಂದ ಹಣ ಮರುಪಡೆಯಲೂ ಕೂಡ ಡಬಲ್ ಅಥಾಂಟಿಕೆಶನ್ ಸೇವೆ ಪ್ರಾರಂಭಿಸಿದೆ. ಹೀಗಾಗಿ ATM ನಿಂದ ಕೇವಲ ಪಿನ್ ಬಳಸಿ ನೀವು ಹಣ ಪಡೆಯಲು ಸಾಧ್ಯವಿಲ್ಲ. ಏಕೆಂದರೆ ಇನ್ಮುಂದೆ ನಿಮ್ಮ ವ್ಯವಹಾರ ಪೂರ್ಣಗೊಳಿಸಲು ನೀವು OTP ಸಂಖ್ಯೆ ನಮೂದಿಸುವುದು ಕೂಡ ಅನಿವಾರ್ಯವಾಗಿದೆ. ಇದರಿಂದ ಹಣ ATM ನಿಂದ ಹಣ ಪಡೆಯುವಾಗ ಪಿನ್ ಜೊತೆಗೆ ನಿಮ್ಮ ಅಧಿಕೃತ ಮೊಬೈಲ್ ಸಂಖ್ಯೆಗೆ ಬರುವ OTP ನಂಬರ್ ಕೂಡ ನೀಡುವುದು ಅನಿವಾರ್ಯವಾಗಿದೆ. OTP ಸಂಖ್ಯೆ ನಮೂದಿಸಿದ ಬಳಿಕ ಮಾತ್ರ ನೀವು ಕೂಡ ನಿಮ್ಮ ಹಣ ಪಡೆಯಬಹುದು.
ಇದು ಹೇಗೆ ಕಾರ್ಯನಿರ್ವಹಿಸಲಿದೆ?
- ಮೊದಲು ATM ನಲ್ಲಿ ನಿಮ್ಮ ಕಾರ್ಡ್ ಹಾಕಿ, ನಿಮ್ಮ ಕಾರ್ಡ್ ನ PIN ನಮೂದಿಸಿದ ಬಳಿಕ, ನಿಮ್ಮ ಅಧಿಕೃತ ಮೊಬೈಲ್ ಸಂಖ್ಯೆಗೆ OTP ಬರಲಿದೆ.
- ಈ OTP ವಿವರ ನೀವು ವಿಥ್ ಡ್ರಾ ಮಾಡಬಯಸುವ ಹಣದ ವಿವರದ ಜೊತೆಗೆ ಹೊಂದಿಕೊಂಡಂತೆ ಇರಲಿದೆ.
- ಈ OTP ವಿವರವನ್ನು ನೀವು ATMನಲ್ಲಿ ನಮೂದಿಸಬೇಕು.
- ಈ OTP ಮೊಬೈಲ್ ಗೆ ಬಂದ OTPಗೆ ಮ್ಯಾಚ್ ಆದ ಸಂದರ್ಭದಲ್ಲಿ ಮಾತ್ರ ಮಶೀನ್ ನಿಂದ ಹಣ ಬರಲಿದೆ.
ಕಳೆದ ಹಲವು ತಿಂಗಳಿಂದ ATM ವಂಚನೆ ಪ್ರಕರಣಗಳಲ್ಲಿ ನಿರಂತರ ಏರಿಕೆಯಾಗಿದೆ. ಹಲವು ಪ್ರಕರಣಗಳಲ್ಲಿ ನಿಮ್ಮ ATM ಪಿನ್ ಬಳಸಿ ವಂಚಕರು ನಿಮ್ಮ ಖಾತೆಯಲ್ಲಿನ ಹಣ ಲಪಟಾಯಿಸಿ ಪರಾರಿಯಾಗುತ್ತಾರೆ. ATMಗಳಲ್ಲಿ ವಂಚಕರು ವೆಬ್ ಕ್ಯಾಮ್ ಬಳಸುವ ಮೂಲಕ ಪಿನ್ ಮಾಹಿತಿ ಪಡೆಯುತ್ತಾರೆ ಹಾಗೂ ಗ್ರಾಹಕರು ಅಲ್ಲಿಂದ ತೆರಳಿದ ಬಳಿಕ ಪಿನ್ ಬಳಸಿ ATM ನಿಂದ ಹಣ ವಿಥ್ ಡ್ರಾ ಮಾಡುತ್ತಾರೆ.