ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಕಾಶ್ಮೀರ ಕಣಿವೆಯಲ್ಲಿನ ಮೋಸ್ಟ ವಾಂಟೆಡ್ 10 ಭಯೋತ್ಪಾದಕರ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ.
ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರನ್ನು ಸೆದೆಬಡಿಯಲು ಭದ್ರತಾ ಸಂಸ್ಥೆಗಳು ಈ ಕರಾ ಕೈಗೊಂಡಿದ್ದು, 2010 ರಿಂದ ಭಯೋತ್ಪಾದಕ ಗುಂಪಿನೊಂದಿಗೆ ಸಂಬಂಧ ಹೊಂದಿದ್ದ ಕಣಿವೆಯ ಹಿಜ್ಬುಲ್ ಮುಜಾಹಿದೀನ್ ಮುಖ್ಯಸ್ಥ ರಿಯಾಝ್ ಅಹ್ಮದ್ ನಾಯ್ಕು ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.
ಜತೆಗೆ, ಶ್ರೀನಗರದಲ್ಲಿರುವ ಮೊಹಮ್ಮದ್ ಅಶ್ರಕ್ ಖಾನ್, ಬಾರಾಮುಲಾದ ಮೆಹ್ರಾಜ್-ಉದ್-ದಿನ್, ಶ್ರೀನಗರದ ಡಾ ಸೈಫುಲ್ಲಾ, ಕುಪ್ವಾರಾದ ಅಜಜ್ ಅಹ್ಮದ್ ಮಲಿಕ್ ಮತ್ತು ಪುಲ್ವಾಮಾದಲ್ಲಿ ಅದೇ ಭಯೋತ್ಪಾದನಾ ಸಂಘಟನೆಯ ಅರ್ಷೈದ್-ಉಲ್-ಹಕ್ ಹೆಸರು ಈ ಪಟ್ಟಿಯಲ್ಲಿದೆ.
ಶೋಪಿಯಾನ್'ನಲ್ಲಿರುವ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಯ ವಾಸಿಮ್ ಅಹ್ಮದ್ ಅಲಿಯಾಸ್ ಒಸಾಮಾ, ಜೈಶ್-ಎ-ಮೊಹಮ್ಮದ್ ಸಂಘಟನೆಯ ಹಫೀಜ್ ಉಮರ್ ಮತ್ತು ಝಹೀದ್ ಶೇಖ್ ಮತ್ತು ಆಲ್ ಬದ್ರ್ ಸಂಘಟನೆಯ ಜಾವೇದ್ ಅಹ್ಮದ್ ಮತ್ತೂ ಹೆಸರೂ ಸಹ ಈ ಪಟ್ಟಿಯಲ್ಲಿದೆ.
ರಾಜ್ಯದಲ್ಲಿ ಈ ವರ್ಷ ಭಯೋತ್ಪಾದಕರ ವಿರುದ್ಧ ನಡೆದ ಕಾರ್ಯಚರಣೆಯಲ್ಲಿ 86 ಭಯೋತ್ಪಾದಕರು ಹತ್ಯೆಯಾಗಿದ್ದಾರೆ ಎಂದು ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ (ಗೋ ಸಿ ಇನ್ ಸಿ) ರಣಬೀರ್ ಸಿಂಗ್ ಇತ್ತೀಚೆಗೆ ಹೇಳಿದ್ದಾರೆ. "ಈ ವರ್ಷದಲ್ಲಿ ನಾವು 86 ಭಯೋತ್ಪಾದಕರನ್ನು ಹತ್ಯೆ ಮಾಡಿದ್ದೇವೆ. 20ಕ್ಕೂ ಅಧಿಕ ಭಯೋತ್ಪಾದಕರನ್ನು ಬಂಧಿಸಲಾಗಿದ್ದು, ಭಯೋತ್ಪಾದಕರ ನಿಗ್ರಹಕ್ಕಾಗಿ ನಮ್ಮ ಕಾರ್ಯಾಚರಣೆ ಮುಂದುವರೆದಿದೆ. ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪರಿಸ್ಥಿತಿ ತಹಬದಿಗೆ ಬಂದಿದೆ" ಎಂದು ಹೇಳಿದ್ದಾರೆ.
ಆದಾಗ್ಯೂ, ಪಾಕಿಸ್ತಾನ ತನ್ನ ಗಡಿ ನಿಯಂತ್ರಣಾ ಕಾಯ್ದೆ (LoC)ಯೊಂದಿಗೆ ತನ್ನ ವಿರೋಧಿ ಚಟುವಟಿಕೆಗಳನ್ನು ಮುಂದುವರೆಸಿದೆ. ಭಯೋತ್ಪಾದಕರು ಕಣಿವೆಯೊಳಗೆ ನುಸುಳಿ ಬರಲು ಪ್ರಯತ್ನಿಸುತ್ತಿದ್ದಾರೆ ಎಂದು ಲೆಫ್ಟಿನೆಂಟ್ ಜನರಲ್ ಸಿಂಗ್ ಹೇಳಿದ್ದಾರೆ.