ಮುಂಬೈ ಷೇರುಪೇಟೆಯಲ್ಲಿ ತುಸು ಚೇತರಿಕೆ

ವಾರಾಂತ್ಯದಲ್ಲಿ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್​ 300ಕ್ಕೂ ಹೆಚ್ಚು ಅಂಕಗಳ ಏರಿಕೆಯಾಗಿದೆ‌. 

Updated: Sep 7, 2019 , 09:57 AM IST
ಮುಂಬೈ ಷೇರುಪೇಟೆಯಲ್ಲಿ ತುಸು ಚೇತರಿಕೆ

ಮುಂಬೈ: ದಾಖಲೆ ಮಟ್ಟದ ಆರ್ಥಿಕ ಹಿಂಜರಿತದಿಂದ ನಿರಂತರವಾಗಿ ಕುಸಿಯುತ್ತಿದ್ದ ಮುಂಬೈ ಷೇರುಪೇಟೆಯ ವಹಿವಾಟಿನಲ್ಲಿ ಶುಕ್ರವಾರ ತುಸು ಸಮಾಧಾನಕರ ವಾತಾವರಣ ಕಂಡುಬಂದಿದೆ. 

ವಾರಾಂತ್ಯದಲ್ಲಿ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್​ 300ಕ್ಕೂ ಹೆಚ್ಚು ಅಂಕಗಳ ಏರಿಕೆಯಾಗಿದೆ‌. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿಯಲ್ಲಿ 98 ಅಂಕಗಳ ಏರಿಕೆ ಕಂಡುಬಂದಿದೆ‌.

ಕೇಂದ್ರ ವಿತ್ತ ಸಚಿವಾಲಯ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್​ನಿಂದ ಆರ್ಥಿಕ ಚೇತರಿಕೆ ಕುರಿತು ಪ್ರೋತ್ಸಾಹದಾಯಕ ಸುದ್ದಿಗಳು ಬರುತ್ತಿರುವುದು ಹಾಗೂ ವಾಣಿಜ್ಯ ಸಮರವನ್ನು ಕೊನೆಗಾಣಿಸುವ ಕುರಿತು ಅಮೆರಿಕ ಮತ್ತು ಚೀನಾ ಮಾತುಕತೆ ಮರು ಆರಂಭವಾಗಿರುವುದು ಷೇರುಪೇಟೆಯ ಚೇತರಿಕೆಗೆ ಕಾರಣವಾಯಿತು ಎಂದು ಮಾರುಕಟ್ಟೆ ಪರಿಣಿತರು ತಿಳಿಸಿದ್ದಾರೆ. 

ಸೆನ್ಸೆಕ್ಸ್​ ಒಟ್ಟು 337.35 ಅಂಕಗಳ ಏರಿಕೆಯೊಂದಿಗೆ 36,981 ಅಂಕಗಳಲ್ಲಿ ವಹಿವಾಟು ನಿಲ್ಲಿಸಿದರೆ, ನಿಫ್ಟಿ ಒಟ್ಟಾರೆ 98.30 ಅಂಕಗಳ ಹೆಚ್ಚಳದೊಂದಿಗೆ 10,946.20 ಅಂಕಗಳಲ್ಲಿ ವಹಿವಾಟು ನಿಲ್ಲಿಸಿತು.