Shirdi Sai Baba ದರುಶನಕ್ಕೆ ಹೋಗಬೇಕೆ? ಹಾಗಾದರೆ ಈ Decent Dress Code ನಿಮಗೆ ತಿಳಿದಿರಲಿ

ಪ್ರಾಚೀನ ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಭೇಟಿ ನೀಡಲು ಡ್ರೆಸ್ ಕೋಡ್ ಅನ್ನು ಜಾರಿಗೆ ತರಲಾಗಿದೆ. ಬಿಗಿಯಾದ ಬಟ್ಟೆಗಳನ್ನು ಧರಿಸಬೇಡಿ ಎಂದು ಸಾಯಿಬಾಬಾ ಮಂಡಳಿ ಭಕ್ತರಿಗೆ ಮನವಿ ಮಾಡಿದೆ.

Last Updated : Dec 4, 2020, 09:19 PM IST
  • ಪ್ರಾಚೀನ ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಭೇಟಿ ನೀಡಲು ಡ್ರೆಸ್ ಕೋಡ್ ಅನ್ನು ಜಾರಿಗೆ ತರಲಾಗಿದೆ.
  • ಬಿಗಿಯಾದ ಬಟ್ಟೆಗಳನ್ನು ಧರಿಸಬೇಡಿ ಎಂದು ಸಾಯಿಬಾಬಾ ಮಂಡಳಿ ಭಕ್ತರಿಗೆ ಮನವಿ ಮಾಡಿದೆ.
  • ಇದು SST ಅಧಿಕಾರಿಗಳಿಂದ ಜನರ ಪ್ರಜಾಪ್ರಭುತ್ವದ ಹಕ್ಕು ಉಲ್ಲಂಘನೆ ಎಂದ ಪ್ರಾಚಿ ದೇಸಾಯಿ.
Shirdi Sai Baba ದರುಶನಕ್ಕೆ ಹೋಗಬೇಕೆ?  ಹಾಗಾದರೆ ಈ Decent Dress Code ನಿಮಗೆ ತಿಳಿದಿರಲಿ title=

ಮುಂಬೈ: ಶಿರಡಿಯ ಶ್ರೀ ಸಾಯಿಬಾಬಾ ದೇವಾಲಯಕ್ಕೆ ಭೇಟಿ ನೀಡಲು ಬರುವ ಎಲ್ಲ ಭಕ್ತಾದಿಗಳಿಗೆ ಶ್ರೀ ಸಾಯಿಬಾಬಾ ಟ್ರಸ್ಟ್  (Shri Sai Baba Trust) ಸಭ್ಯ ಉಡುಗೆ ಕೋಡ್ (Decent Dress Code) ಜಾರಿಗೆ ತಂದಿದೆ. ನೂತನ ಡ್ರೆಸ್ ಕೋಡ್ ಪ್ರಕಾರ, ಭಕ್ತರು ತಮ್ಮ ಪಾದಗಳನ್ನು ಕನಿಷ್ಠ ಮೊಣಕಾಲುವರೆಗೆ  ಮತ್ತು ತೋಳುಗಳನ್ನು ಮೊಣಕೈವರೆಗೆ  ಮುಚ್ಚಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಾಯಿಬಾಬಾ ಮಂದಿರ ಟ್ರಸ್ಟ್ ಕೂಡ ಒಂದು ಫಲಕವೊಂದನ್ನು ತೂಗುಹಾಕಿದ್ದು, ಸರಿಯಾದ ಡ್ರೆಸ್ ಕೋಡ್ ಅನುಸರಿಸುವಂತೆ ಕೋರಲಾಗಿದೆ.

ಇದನ್ನು ಓದಿ- ಶಿರಡಿ ಸಾಯಿಬಾಬಾ ಭಕ್ತರಿಗೆ ಗುಡ್ ನ್ಯೂಸ್

ಮನಸ್ಸು ವಿಚಲಿತಗೊಳಿಸುವ ಬಟ್ಟೆಯಿಂದ ದೇವಸ್ಥಾನದ ಘನತೆಗೆ ಪೆಟ್ಟು
ಈ ಕುರಿತು ಹೇಳಿಕೆ ನೀಡಿರುವ ಸಾಯಿ ಟ್ರಸ್ಟ್ ವಕ್ತಾರರು, ಕಳೆದ ಕಳವು ವರ್ಷಗಳಿಂದ ಹಲವು ಭಕ್ತರು ಅದರಲ್ಲೂ ವಿಶೇಷವಾಗಿ ಮಹಿಳೆಯರು ಶಾರ್ಟ್ಸ್ ಹಾಗೂ ಸ್ಲೀವ್ಲೆಸ್ ಟಾಪ್ ಧರಿಸಿ ಭೇಟಿ ನೀಡುತ್ತಾರೆ. ಇದರಿಂದ ದೇವಸ್ಥಾನದ ಘನತೆಗೆ ಕುಂದುಂಟಾಗುತ್ತದೆ. ಇದರಿಂದ ಹಲವು ಭಕ್ತರು ಇದನ್ನು ಅಸಭ್ಯ ಎಂದು ಭಾವಿಸಿ ದೂರು ನೀಡುತ್ತಾರೆ. ಹೀಗಾಗಿ ಆಡಲಿದ ಮಂಡಳಿ ಭಕ್ತಾದಿಗಳಿಗೆ ಬಿಗಿ ಉಡುಪು ಧರಿಸದಂತೆ ಮನವಿ ಮಾಡಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ- ಶಿರಡಿ ಸಾಯಿಬಾಬಾ ಮಂದಿರ ಟ್ರಸ್ಟ್‌ಗೆ ಪ್ರತಿದಿನ 1.5 ಕೋಟಿ ರೂ. ನಷ್ಟ...!

ಸಿಎಂಗೆ ಪತ್ರ ಬರೆದ ಭಕ್ತಾದಿಗಳು
ಈ ಕುರಿತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದಿರುವ ಪುಣೆ ಮೂಲದ ದೇಸಾಯಿ, ಇದು SST ಅಧಿಕಾರಿಗಳಿಂದ ಜನರ ಪ್ರಜಾಪ್ರಭುತ್ವದ ಹಕ್ಕು ಉಲ್ಲಂಘನೆಯಾಗಿದ್ದು ಮುಖ್ಯಮಂತ್ರಿಗಳು ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕೋರಿದ್ದಾರೆ.

ಇದನ್ನು ಓದಿ- ಶಿರಡಿ ಶ್ರೀಸಾಯಿಬಾಬಾ ದರ್ಶನಕ್ಕೆ ಹೋಗಬೇಕೆ? ಮೊದಲು ಈ ಸುದ್ದಿ ಓದಿ

ಸಾಯಿ ಬಾಬಾ ಬೋರ್ಡ್ ಗೆ ಅಲ್ಟಿಮೆಟಮ್ ನೀಡಿದ ಭಕ್ತಾದಿಗಳು
ಈ ಕುರಿತು ದೇವಸ್ಥಾನದ ಆಡಳಿತ ಮಂಡಳಿಗೆ ಅಗುವು ನೀಡಿರುವ ದೇಸಾಯಿ, ವಿವಾದಿತ ಡ್ರೆಸ್ ಕೋಡ್ ಅನ್ನು ಡಿಸೆಂಬರ್ 10ರೊಳಗೆ ತೆಗೆದುಹಾಕದೆ ಹೋದಲ್ಲಿ ದೇವಸ್ಥಾನವನ್ನು ತಲುಪಿ ವಿವಾದಿತ ಡ್ರೆಸ್ ಕೋಡ್ ಫಲಕ ತೆಗೆದುಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇದನ್ನು ಓದಿ-ಮಹಾರಾಷ್ಟ್ರ ಸರ್ಕಾರಕ್ಕೆ 500 ಕೋಟಿ ರೂ. ಸಾಲ ನೀಡಲಿರುವ ಶಿರಡಿ ದೇವಸ್ಥಾನ

ಸಂಪೂರ್ಣ ಪ್ರಕರಣ ಏನು?
ಈ ಕುರಿತು ಹೇಳಿಕೆ ನೀಡಿರುವ ಸಾಯಿ ಬಾಬಾ ಟ್ರಸ್ಟ್ ನ ಮುಖ್ಯ ವಕ್ತಾರರು ಇತೀಚೆಗಷ್ಟೇ ದೇವಸ್ತಾನದ ಗೆಟ್ ಹೊರಗಡೆ ಇದ್ದ ಹಾಳಾದ ಹಳೆ ಬೋರ್ಡ್ ಅನ್ನು ಬದಲಿಸಿ ಹೊಸ ಬೋರ್ಡ್ ಅನ್ನು ತೂಗುಹಾಕಲಾಗಿದೆ. ಆದರೆ, ಕೆಲ ಜನರು ಅದರಲ್ಲಿ ತಪ್ಪು ರೀತಿಯಲ್ಲಿ ಡ್ರೆಸ್ ಕೋಡ್ ಹಾಕಲಾಗಿದೆ ಎಂದು ಆರೋಪಿಸುತ್ತಿದ್ದಾರೆ. ಆದರೆ, ಅದು ಕಳೆದ 15 ವರ್ಷದಿಂದ ಅಸ್ತಿತ್ವದಲ್ಲಿದೆ. ಇದೊಂದು ಕೇವಲ ಪಬ್ಲಿಸಿಟಿ ಸ್ಟಂಟ್ ಆಗಿದೆ ಎಂದು ಅವರು ಆರೋಪಿಸಿದ್ದಾರೆ.

Trending News