Shocking: 20 ಅಡಿ ಅಂತಸ್ತಿನ ಕಟ್ಟಡದ ಮೇಲೆ ಸ್ಟಂಟ್ ಮಾಡಿದ ಯುವಕ, ತನಿಖೆ ಆರಂಭ

ಮುಂಬೈನ ದಾದರ್ ಪ್ರದೇಶದಲ್ಲಿರುವ ಎತ್ತರದ ಕಟ್ಟಡವೊಂದರ ಮೇಲಿಂದ ವಿದೇಶಿ ಯುವಕ ಮತ್ತೊಂದು ಕಟ್ಟಡಕ್ಕೆ ಜಿಗಿಯುವ ಸ್ಟಂಟ್ ಮಾಡಿದ್ದಾನೆ.

Last Updated : Nov 28, 2018, 01:38 PM IST
Shocking: 20 ಅಡಿ ಅಂತಸ್ತಿನ ಕಟ್ಟಡದ ಮೇಲೆ ಸ್ಟಂಟ್ ಮಾಡಿದ ಯುವಕ, ತನಿಖೆ ಆರಂಭ title=

ಮುಂಬೈ: ಬರೋಬ್ಬರಿ 20 ಅಂತಸ್ತಿನ ಕಟ್ಟಡದ ಮೇಲಿಂದ ಮತ್ತೊಂದು ಕಟ್ಟಡಕ್ಕೆ ಜಿಗಿಯುವ ಮೂಲಕ ಜೀವಕ್ಕೆ ಕುತ್ತು ತಂದುಕೊಳ್ಳುವ ಸಾಹಸವನ್ನು ವಿದೇಶೀ ಯುವಕರು ಮಾಡಿರುವ ವೀಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. 

ಮುಂಬೈನ ದಾದರ್ ಪ್ರದೇಶದಲ್ಲಿರುವ ಎತ್ತರದ ಕಟ್ಟಡವೊಂದರ ಮೇಲಿಂದ ವಿದೇಶಿ ಯುವಕ ಮತ್ತೊಂದು ಕಟ್ಟಡಕ್ಕೆ ಜಿಗಿಯುವ ಸ್ಟಂಟ್ ಮಾಡಿದ್ದಾನೆ. ಈಗ ಇದು ಸಿಕ್ಕಾಪಟ್ಟೆ ವೈರಲ್ ಯಾಗಿದ್ದು, ಪೊಲೀಸರು ಈ ಸಾಹಸ ನಿಜಕ್ಕೂ ಅಪಾಯಕಾರಿ ಪರಿಗಣಿಸಿದ್ದು, ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ವರದಿಗಳ ಪ್ರಕಾರ, ಸುಮಾರು 20 ಅಂತಸ್ತಿನ ಕಟ್ಟಡದ ಮೇಲೆ 'ಪರ್ಕೌರ್' ಸ್ಟಂಟ್ ಮಾಡಿದ್ದಾರೆ ಎನ್ನಲಾಗಿದ್ದು, ಆ ಯುವಕರು ಯಾರೆಂಬುದನ್ನು ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಈ ಘಟನೆ ದಾದರ್ ಮತ್ತು ಪ್ರಭಾದೇವಿ ರೈಲ್ವೆ ಸ್ಟೇಷನ್ ಬಳಿಯುರುವ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಕಟ್ಟಡ ಮೇಲೆ ನಡೆದಿರಬಹುದು ಎಂಬ ಮಾಹಿತಿಯನ್ನು ಮುಂಬೈ ಪೊಲೀಸ್ ಕಲೆ ಹಾಕಿದೆ. ಅಷ್ಟೇ ಅಲ್ಲದೆ, ಯಾರೂ ಕೂಡ ಇಂಥ ದುಸ್ಸಾಹಸಕ್ಕೆ ಕೈ ಹಾಕಬಾರದು, ಒಂದು ವೇಳೆ ಮಾಡಿದ್ದೇ ಆದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

Trending News