VIDEO: ಕಿಸೆಯಲ್ಲಿದ್ದ ಸ್ಮಾರ್ಟ್ ಫೋನ್ ಇದ್ದಕ್ಕಿದ್ದಂತೆ ಬ್ಲಾಸ್ಟ್ ಆದಾಗ..!

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋ.

Last Updated : Mar 6, 2019, 01:30 PM IST
VIDEO: ಕಿಸೆಯಲ್ಲಿದ್ದ ಸ್ಮಾರ್ಟ್ ಫೋನ್ ಇದ್ದಕ್ಕಿದ್ದಂತೆ ಬ್ಲಾಸ್ಟ್ ಆದಾಗ..! title=
Pic: Video grab

ಸಾಮಾಜಿಕ ಜಾಲತಾಣದಲ್ಲಿ ಹಲವು ವೈರಲ್ ಫೋಟೋ, ವಿಡಿಯೋಗಳನ್ನು ನಾವು ದಿನನಿತ್ಯ ನೋಡುತ್ತಿರುತ್ತೇವೆ. ಕೆಲವು ನಮ್ಮನ್ನು ನಗುವಿನ ಹೊನಲಲ್ಲಿ ಮುಳುಗಿಸಿದರೆ, ಕೆಲವೊಂದು ನಮ್ಮ ಎದೆ ಝಲ್ ಎನ್ನುವಂತೆ ಮಾಡುತ್ತವೆ. ಅಂತಹದ್ದೇ ಒಂದು ಘಟನೆಯ ಸಂಪೂರ್ಣ ಚಿತ್ರಣ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವ್ಯಕ್ತಿಯೊಬ್ಬ ತನ್ನ ಜೇಬಿನಲ್ಲಿ ಸ್ಮಾರ್ಟ್ ಫೋನ್ ಇಟ್ಟುಕೊಂಡು ಮಾತನಾಡುತ್ತಾ ಕುಳಿತಿದ್ದ ವೇಳೆ ಇದ್ದಕ್ಕಿದ್ದಂತೆ ಆತನ ಸ್ಮಾರ್ಟ್ ಫೋನ್ ಬ್ಲಾಸ್ಟ್ ಆಗಿದೆ. 

ಅಮೀರ್ ಖಾನ್ ಎಂಬ ಟ್ವಿಟ್ಟರ್ ಬಳಕೆದಾರರು ಈ ವಿಡಿಯೋ ಹಂಚಿಕೊಂಡಿದ್ದು, ಅದರಲ್ಲಿ 'ಮುಂಬೈಯ ಸಕಿ ನಕಾದಲ್ಲಿ ಮೊಟೊರೊಲಾ ಫೋನ್ ಇದ್ದಕ್ಕಿದ್ದಂತೆ ಸ್ಫೋಟಿಸಿತು' ಎಂದು ಬರೆದಿದ್ದಾರೆ.

ಈ ದೃಶ್ಯಾವಳಿಯಲ್ಲಿ ಇಬ್ಬರು ನೌಕರರು ಕಾರ್ಖಾನೆಯಲ್ಲಿ ಕುಳಿತಿರುವುದನ್ನು ನೋಡಬಹುದು. ಆಗ ಇದ್ದಕ್ಕಿದ್ದಂತೆ ವ್ಯಕ್ತಿಯ ಕಿಸೆಯಿಂದ ಹೊಗೆ ಬರುತ್ತದೆ. ಆತ ಗಾಬರಿಯಿಂದ ಎದ್ದೊಡನೆ ಪಾಕೆಟ್ ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತದೆ. ಬಳಿಕ ವ್ಯಕ್ತಿಯು ತಕ್ಷಣ ತನ್ನ ಫೋನ್ ಅನ್ನು ಎಸೆಯುತ್ತಾರೆ.

ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಆ ದೃಶ್ಯವನ್ನು ನೀವೂ ಒಮ್ಮೆ ನೋಡಿ...

Trending News