ನವದೆಹಲಿ: ಇದೇ ಅಕ್ಟೋಬರ್ 31ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸರ್ದಾರ್ ಪಟೇಲ್ ರ ಜನ್ಮದಿನದ ನಿಮಿತ್ತ ವಿಶ್ವದಲ್ಲೇ ಅತಿ ಎತ್ತರದ 182 ಮೀಟರ್ 'ಏಕತೆಯ ಪ್ರತಿಮೆ'ಯನ್ನು ಲೋಕಾರ್ಪಣೆಗೊಳಿಸಿದ್ದರು.
At 597 feet, India’s Statue of Unity is now the tallest statue in the world and clearly seen from space! Oblique SkySat image captured today, November 15, 2018. pic.twitter.com/FkpVoHJKjw
— Planet (@planetlabs) November 15, 2018
ಈಗ ಅಚ್ಚರಿಯೆಂದರೆ ಈಗ ಈ ಪ್ರತಿಮೆ ಬಾಹ್ಯಾಕಾಶದಿಂದಲೂ ನಿಮಗೆ ದರ್ಶನವಾಗುತ್ತದೆ ಅಂತೆ! ಅದು ನಿಮಗೆ ಈ ಸಂಗತಿ ಆಶ್ಚರ್ಯತರಿಸಿದರು ಕೂಡ ಸತ್ಯ. ಪ್ಲಾನೆಟ್ ಎನ್ನುವ ಜಗತ್ತಿನ ವಾಣಿಜ್ಯಾತ್ಮಕ ಉಪಗ್ರಹಗಳ ನೆಟ್ ವರ್ಕ್ ನ ಡಾಟ್ ಅಂಶಗಳನ್ನು ಹಂಚಿಕೊಳ್ಳುವ ಈ ಸಂಸ್ಥೆ ಈಗ ತನ್ನ ಟ್ವಿಟ್ಟರ್ ನಲ್ಲಿ ಬಾಹ್ಯಾಕಾಶದಿಂದ ಸೆರೆ ಹಿಡಿದಿರುವ ಮೂರ್ತಿಯನ್ನು ಹಂಚಿಕೊಂಡಿದೆ. ಗುಜರಾತ್ನ ನರ್ಮದಾ ಜಿಲ್ಲೆಯ ಕೆವಾಡಿಯ ಬಳಿ ನಿರ್ಮಿಸಿರುವ ಈ ಸರ್ದಾರ್ ಪಟೇಲ್ ಅವರ ಪ್ರತಿಮೆ ಚಿತ್ರವನ್ನು ಸ್ಕೈಸ್ಯಾಟ್ ನವೆಂಬರ್ 15ರಂದು ಸೆರೆ ಹಿಡಿದಿದೆ.
ಬುಡುಕಟ್ಟು ಜನರನ್ನು ಒಕ್ಕಲೆಬ್ಬಿಸಿ ಈ ಪ್ರತಿಮೆಯನ್ನು ನಿರ್ಮಿಸಲಾಗಿದೆ ಎಂದು ಮೋದಿ ಸರ್ಕಾರದ ವಿರುದ್ದ ಸಾಕಷ್ಟು ಪ್ರತಿಭಟನೆ ವ್ಯಕ್ತವಾಗಿತ್ತು. ಪ್ರತಿಪಕ್ಷಗಳು ಕೂಡ ಸಾರ್ವಜನಿಕರ ತೆರಿಗೆಯನ್ನು ಮೂರ್ತಿ ನಿರ್ಮಿಸುವುದರ ಮೂಲಕ ಪೋಲು ಮಾಡಲಾಗಿದೆ ಎಂದು ಟೀಕಿಸಿದ್ದವು.