ಚಿಲ್ಹಟಿ-ಹಲ್ಡಿಬಾರಿ ಮಾರ್ಗದಲ್ಲಿ 55 ವರ್ಷಗಳ ನಂತರ ಚಲಿಸಿದ ರೈಲು

ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ನಡುವೆ ವಾಸ್ತವ ದ್ವಿಪಕ್ಷೀಯ ಮಾತುಕತೆ ನಡೆದಿದ್ದು, ನಂತರ ಉಭಯ ನಾಯಕರು 55 ವರ್ಷಗಳ ನಂತರ ಚಿಲ್ಹಟಿ-ಹಲ್ಡಿಬಾರಿ ರೈಲು ಸಂಪರ್ಕವನ್ನು ಉದ್ಘಾಟಿಸಿದರು.  

Last Updated : Dec 17, 2020, 01:50 PM IST
  • ಭಾರತ ಮತ್ತು ಪಾಕಿಸ್ತಾನ ನಡುವಿನ 1965 ರ ಯುದ್ಧದ ಸಮಯದಲ್ಲಿ ಈ ರೈಲು ಸಂಪರ್ಕವನ್ನು ಮುಚ್ಚಲಾಯಿತು
  • ಇದರೊಂದಿಗೆ ಬಾಂಗ್ಲಾದೇಶದಿಂದ ಅಸ್ಸಾಂ ಮತ್ತು ಬಂಗಾಳದ ನಡುವಿನ ಸಂಪರ್ಕವು ಸುಧಾರಿಸುತ್ತದೆ
ಚಿಲ್ಹಟಿ-ಹಲ್ಡಿಬಾರಿ ಮಾರ್ಗದಲ್ಲಿ 55 ವರ್ಷಗಳ ನಂತರ ಚಲಿಸಿದ ರೈಲು title=
Image courtesy: ANI

PM Modi-Sheikh Hasina Virtual Meeting: ಭಾರತ ಮತ್ತು ಬಾಂಗ್ಲಾದೇಶದ ನಡುವೆ ಇಂದು ಡಿಜಿಟಲ್ ದ್ವಿಪಕ್ಷೀಯ ಶೃಂಗಸಭೆ ಆಯೋಜಿಸಲಾಗಿದ್ದು, ಇದರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಭಾಗವಹಿಸಿದ್ದರು. ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಬಾಂಗ್ಲಾದೇಶ (Bangladesh) ನಮ್ಮ 'ನೆರೆಹೊರೆಯ ಪ್ರಥಮ' ನೀತಿಯ ಪ್ರಮುಖ ಆಧಾರಸ್ತಂಭ ಎಂದು ಹೇಳಿದರು. ಶೇಖ್ ಹಸೀನಾ ಭಾರತದ ಸಹಕಾರವನ್ನು ಶ್ಲಾಘಿಸಿದ್ದಾರೆ. ಇದರೊಂದಿಗೆ ಉಭಯ ದೇಶಗಳ ನಡುವೆ 55 ವರ್ಷಗಳ ನಂತರ ಚಿಲ್ಹಟಿ-ಹಲ್ಡಿಬಾರಿ ರೈಲು ಸಂಪರ್ಕಕ್ಕೆ ಚಾಲನೆ ನೀಡಲಾಯಿತು.  ಇದಲ್ಲದೆ ಉಭಯ ದೇಶಗಳು ಹಲವಾರು ಒಪ್ಪಂದಗಳಿಗೆ ಸಹಿ ಹಾಕಿವೆ.

ಕಳೆದ 55 ವರ್ಷಗಳಿಂದ ಮುಚ್ಚಿದ್ದ ಚಿಲ್ಹತಿ-ಹಲ್ಡಿಬಾರಿ ರೈಲು ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ-ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಉದ್ಘಾಟಿಸಿದರು. ಭಾರತ ಮತ್ತು ಪಾಕಿಸ್ತಾನ ನಡುವಿನ 1965 ರ ಯುದ್ಧದ ಸಮಯದಲ್ಲಿ ಈ ರೈಲು ಸಂಪರ್ಕವನ್ನು ಮುಚ್ಚಲಾಯಿತು ಮತ್ತು ಅದನ್ನು ಈಗ 55 ವರ್ಷಗಳ ನಂತರ ಮತ್ತೆ ಪ್ರಾರಂಭಿಸಲಾಗಿದೆ. ಇದರೊಂದಿಗೆ ಬಾಂಗ್ಲಾದೇಶದಿಂದ ಅಸ್ಸಾಂ ಮತ್ತು ಬಂಗಾಳದ ನಡುವಿನ ಸಂಪರ್ಕವು ಸುಧಾರಿಸುತ್ತದೆ. ಆರಂಭದಲ್ಲಿ, ಸರಕುಗಳನ್ನು ಸಾಗಿಸಲು ಇದನ್ನು ಬಳಸಲಾಗುತ್ತದೆ, ನಂತರ ಈ ಮಾರ್ಗದಲ್ಲಿ ಪ್ರಯಾಣಿಕರ ಸೇವೆಯನ್ನು ಪ್ರಾರಂಭಿಸುವ ಯೋಜನೆ ಇದೆ.

ಬಾಂಗ್ಲಾದೇಶದ ಜೊತೆ ಸಂಬಂಧ ಗಟ್ಟಿಗೊಳಿಸುವುದು ನಮ್ಮ ಆದ್ಯತೆ- ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಮ್ಮ ಭಾಷಣದಲ್ಲಿ, ಉಭಯ ದೇಶಗಳು ಸುದೀರ್ಘವಾದ ಉತ್ತಮ ಸಂಪರ್ಕ ಹೊಂದಿವೆ. ವಿಜಯ್ ದಿನದ ನಂತರ ನಮ್ಮ ಸಭೆ ಬಹಳ ಮುಖ್ಯವಾಗಿದೆ. ಬಾಂಗ್ಲಾದೇಶದೊಂದಿಗೆ ಸಂಬಂಧವನ್ನು ಬಲಪಡಿಸುವುದು ಮತ್ತು ಗಾಢವಾಗಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಹೇಳಿದರು.  

ಮದುವೆ ಡ್ರೆಸ್ ನಲ್ಲಿಯೇ ಕ್ರಿಕೆಟ್ ಆಡಲು ಮೈದಾನಕ್ಕೆ ಇಳಿದ ಬಾಂಗ್ಲಾದೇಶದ ಮಹಿಳಾ ಕ್ರಿಕೆಟರ್...!

ಕರೋನಾ ಯುಗದಲ್ಲಿಯೂ ಭಾರತ-ಬಾಂಗ್ಲಾ ದೇಶದ ನಡುವೆ ಉತ್ತಮ ಸಹಕಾರವಿದೆ. ಲಸಿಕೆ ತಯಾರಿಕೆಯಲ್ಲೂ ಉಭಯ ದೇಶಗಳು ಒಟ್ಟಿಗೆ ಕೆಲಸ ಮಾಡುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ.  ನಮ್ಮ ಸ್ನೇಹವನ್ನು ತೋರಿಸುವ ಸಂಪರ್ಕಕ್ಕೆ ಉಭಯ ದೇಶಗಳು ಒತ್ತು ನೀಡುತ್ತಿವೆ. ಭಾರತ ಯಾವಾಗಲೂ ಬಾಂಗ್ಲಾದ ಸಹೋದರರನ್ನು ಗೌರವಿಸುತ್ತದೆ ಎಂದು ಪಿಎಂ ಮೋದಿ ತಿಳಿಸಿದರು.

ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರ ಜನ್ಮದಿನಕ್ಕೆ ವಿಶೇಷ ಗಿಫ್ಟ್ ನೀಡಿದ ಭಾರತ!

ಉಭಯ ದೇಶಗಳು ವಿಜಯ ದಿನವನ್ನು ಆಚರಿಸುತ್ತಿವೆ ಎಂದು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ. ಈ ಸಮಯದಲ್ಲಿ ಶೇಖ್ ಹಸೀನಾ ಅವರು ಯುದ್ಧದ ಸಮಯದಲ್ಲಿ ತಮ್ಮ ಕುಟುಂಬ ಎದುರಿಸಿದ ಕಷ್ಟದ ಸಮಯಗಳನ್ನು ಹಂಚಿಕೊಂಡರು ಮತ್ತು 1971 ರ ಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸಿದರು. COVID-19 ವಿರುದ್ಧ ಭಾರತ ಸರ್ಕಾರ ಹೋರಾಡಿದ ರೀತಿಗೆ ನಾನು ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಬೇಕು ಎಂದು ಶೇಖ್ ಹಸೀನಾ ಹೇಳಿದರು.
 

Trending News