ಈ ರಾಜ್ಯದ ಬಿಪಿಎಲ್ ಕುಟುಂಬಗಳಿಗೆ ಸಿಗಲಿದೆ 2000 ರೂ. ವಿಶೇಷ ಆರ್ಥಿಕ ನೆರವು!

ಗ್ರಾಮೀಣ ಭಾಗದ 35 ಲಕ್ಷ ಬಿಪಿಎಲ್ ಕುಟುಂಬಗಳು ಮತ್ತು ನಗರ ಪ್ರದೇಶದ 25 ಲಕ್ಷ ಬಿಪಿಎಲ್ ಕುಟುಂಬಗಳು ಈ ಯೋಜನೆಯ ಪ್ರಯೋಜನ ಪಡೆಯಲಿವೆ. 

Last Updated : Feb 11, 2019, 09:57 PM IST
ಈ ರಾಜ್ಯದ ಬಿಪಿಎಲ್ ಕುಟುಂಬಗಳಿಗೆ ಸಿಗಲಿದೆ 2000 ರೂ. ವಿಶೇಷ ಆರ್ಥಿಕ ನೆರವು! title=

ಚೆನ್ನೈ: ಬಡತನ ರೇಖೆಗಿಂತ ಕೆಳಗಿರುವ(ಬಿಪಿಎಲ್) ಪ್ರತಿ ಕುಟುಂಬಕ್ಕೆ 2000 ರೂ. ವಿಶೇಷ ನೆರವು ನೀಡುವುದಾಗಿ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಘೋಷಿಸಿದ್ದಾರೆ. 

ಇತ್ತೀಚೆಗೆ ರಾಜ್ಯಕ್ಕೆ ಅಪ್ಪಳಿಸಿದ 'ಗಜ' ಚಂಡಮಾರುತ ಮತ್ತು ಬರಗಾಲವನ್ನು ದೃಷ್ಟಿಯಲ್ಲಿಟ್ಟುಕೊಂಡು ಗ್ರಾಮೀಣ ಭಾಗದ 35 ಲಕ್ಷ ಬಿಪಿಎಲ್ ಕುಟುಂಬಗಳು ಮತ್ತು ನಗರ ಪ್ರದೇಶದ 25 ಲಕ್ಷ ಬಿಪಿಎಲ್ ಕುಟುಂಬಗಳು ಈ ಯೋಜನೆಯ ಪ್ರಯೋಜನ ಪಡೆಯಲಿವೆ. ಈ ಯೋಜನೆಗೆ ಮುಂದಿನ ಹಣಕಾಸು ವರ್ಷದಲ್ಲಿ 1,200 ಕೋಟಿ ರೂ. ಮೀಸಲಿಡಲಾಗಿದೆ ಎಂದು ಸಿಎಂ ಪಳನಿಸ್ವಾಮಿ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

"ತಮಿಳುನಾಡು ರಾಜ್ಯದಲ್ಲಿ ಗದ್ದೆ ಕೆಲಸ ಮಾಡುವವರು, ಬಡವರು, ಕಾರ್ಮಿಕರು, ಮೀನುಗಾರಿಕೆ, ಮರಗೆಲಸ ಮತ್ತು ಕೂಲಿ ಕಾರ್ಮಿಕರು ಸೇರಿದಂತೆ ಬಡತನ ರೇಖೆಗಿಂತ ಕೆಳಗಿರುವ ಎಲ್ಲಾ ಕುಟುಂಬಗಳಿಗೆ 2000 ರೂ. ವಿಶೇಷ ಆರ್ಥಿಕ ನೆರವು ನೀಡಲಾಗುವುದು" ಎಂದು ಸಿಎಂ ವಿವರಿಸಿದರು.

Trending News