ಭಯೋತ್ಪಾದನೆ ಮತ್ತು ಮಾತುಕತೆ ಎರಡು ಒಟ್ಟಿಗೆ ಸಾಗಲು ಸಾಧ್ಯವಿಲ್ಲ- ರಾಜನಾಥ್ ಸಿಂಗ್

ಕೇಂದ್ರ ಸರ್ಕಾರವು ಪಾಕಿಸ್ತಾನ ಸೇರಿ ಯಾರ ಜೊತೆಗಾದರೂ ಮಾತುಕತೆ ನಡೆಸಲು ಸಿದ್ದವಿದೆ ಆದರೆ ಭಯೋತ್ಪಾದನೆ ಮತ್ತು ಮಾತುಕತೆ ಎರಡು ಏಕಕಾಲದಲ್ಲಿ ನಡೆಯಲು ಸಾಧ್ಯವಿಲ್ಲ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದರು.

PTI | Updated: Oct 23, 2018 , 08:53 PM IST
ಭಯೋತ್ಪಾದನೆ ಮತ್ತು ಮಾತುಕತೆ ಎರಡು ಒಟ್ಟಿಗೆ ಸಾಗಲು ಸಾಧ್ಯವಿಲ್ಲ- ರಾಜನಾಥ್ ಸಿಂಗ್

ಶ್ರೀನಗರ್: ಕೇಂದ್ರ ಸರ್ಕಾರವು ಪಾಕಿಸ್ತಾನ ಸೇರಿ ಯಾರ ಜೊತೆಗಾದರೂ ಮಾತುಕತೆ ನಡೆಸಲು ಸಿದ್ದವಿದೆ ಆದರೆ ಭಯೋತ್ಪಾದನೆ ಮತ್ತು ಮಾತುಕತೆ ಎರಡು ಏಕಕಾಲದಲ್ಲಿ ನಡೆಯಲು ಸಾಧ್ಯವಿಲ್ಲ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದರು.

ಮಂಗಳವಾರದಂದು ಹಲವು ಪಕ್ಷಗಳ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಂಗ್ ಕಾಶ್ಮೀರದಲ್ಲಿ ಮುಂಬರುವ ಪಂಚಾಯತ್ ಚುನಾವಣೆಯಲ್ಲಿ ಎಲ್ಲರು ಭಾಗವಹಿಸಬೇಕೆಂದು ಅವರು ಕರೆ ನೀಡಿದರು.

ಬಹುತೇಕ ದೊಡ್ಡ ಸಮಸ್ಯೆಗಳನ್ನು ಪ್ರಜಾಸತ್ತಾತ್ಮಕ ರೀತಿಯಲ್ಲಿ ಪರಿಹರಿಸಬಹುದು,ಅದೇ ರೀತಿ ಕಾಶ್ಮೀರದಲ್ಲಿನ ಹಲವು ಸಮಸ್ಯೆಗಳನ್ನು ಪ್ರಜಾಪ್ರಭುತ್ವದ ಮೂಲಕ ಪರಿಹರಿಸಬಹುದು ಆದ್ದರಿಂದ ನಾನು ಎಲ್ಲರಿಗೂ ಪ್ರಜಾಪ್ರಭುತ್ವದ ಈ ಜಾತ್ರೆಯಲ್ಲಿ ಭಾಗವಹಿಸಿ ಎಂದು ಬೇಡಿಕೊಳ್ಳುತ್ತೇನೆ  ಎಂದು ಸಚಿವರು ವಿನಂತಿಸಿಕೊಂಡರು. 

ಯಾರು ಚುನಾವಣೆಯನ್ನು ತಿರಸ್ಕರಿಸುತ್ತಾರೋ ಅಂತವರು ಎಂದಿಗೂ ಕೂಡ ಜನರ ಹಿತಾಸಕ್ತಿಯನ್ನು ಕಾಪಾಡಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.ಇತ್ತೀಚಿಗೆ ನಗರ ಸಂಸ್ಥೆ ಚುನಾವಣೆಗಳನ್ನು ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷವು  ಬಹಿಷ್ಕರಿಸಿದ ಹಿನ್ನಲೆಯಲ್ಲಿ ಈಗ ಕೇಂದ್ರ ಸಚಿವರ ಭೇಟಿ ಮಹತ್ವದ ಪಡೆದಿದೆ.

ಇದೇ ಪ್ರತ್ಯೇಕತಾವಾದಿಗಳೊಂದಿಗೆ ಮಾತುಕತೆ ನಡೆಸಲು ಸರ್ಕಾರ ಸಿದ್ದವಿದೆಯೇ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಚಿವರು,ಮಾತುಕತೆಗೆ ಯಾರೇ ಬಂದರು ಸರ್ಕಾರ ಸಿದ್ದವಿದೆ ಎಂದು ಸ್ಪಷ್ಟಪಡಿಸಿದರು.