ಹತ್ರಾಸ್ ಸಂತ್ರಸ್ತೆ ಸಾಮೂಹಿಕ ಅತ್ಯಾಚಾರದಿಂದ ಹತ್ಯೆಯಾಗಿದ್ದಾರೆ-ಸಿಬಿಐ

ಸೆಪ್ಟೆಂಬರ್‌ನಲ್ಲಿ ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಯುವ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಚಿತ್ರಹಿಂಸೆ ಆರೋಪದ ನಾಲ್ವರು ಆರೋಪಿಗಳ ಮೇಲೆ ಇಂದು ಸಿಬಿಐ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಆರೋಪ ಹೊರಿಸಿದೆ, ಈ ಘಟನೆಯು ಈ ಹಿಂದೆ ರಾಷ್ಟ್ರದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

Last Updated : Dec 18, 2020, 03:57 PM IST
ಹತ್ರಾಸ್ ಸಂತ್ರಸ್ತೆ ಸಾಮೂಹಿಕ ಅತ್ಯಾಚಾರದಿಂದ ಹತ್ಯೆಯಾಗಿದ್ದಾರೆ-ಸಿಬಿಐ  title=
ಸಾಂದರ್ಭಿಕ ಚಿತ್ರ

ನವದೆಹಲಿ: ಸೆಪ್ಟೆಂಬರ್‌ನಲ್ಲಿ ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಯುವ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಚಿತ್ರಹಿಂಸೆ ಆರೋಪದ ನಾಲ್ವರು ಆರೋಪಿಗಳ ಮೇಲೆ ಇಂದು ಸಿಬಿಐ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಆರೋಪ ಹೊರಿಸಿದೆ, ಈ ಘಟನೆಯು ಈ ಹಿಂದೆ ರಾಷ್ಟ್ರದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಹತ್ರಾಸ್ ಸಾಮೂಹಿಕ ಅತ್ಯಾಚಾರದ ಆರೋಪಿಗಳ ಪರವಾಗಿ ಮೇಲ್ಜಾತಿ ನಾಯಕರ ಸಭೆ

ಸಿಬಿಐ ಎಸ್‌ಸಿ / ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಆರೋಪಿಗಳ ವಿರುದ್ಧವೂ ಆರೋಪಗಳನ್ನು ಮಾಡಿದೆ. ದೆಹಲಿಯಿಂದ 200 ಕಿ.ಮೀ ದೂರದಲ್ಲಿರುವ ಹತ್ರಾಸ್‌ನಲ್ಲಿ ನ್ಯಾಯಾಲಯಕ್ಕೆ ತನಿಖಾ ಸಂಸ್ಥೆ ತನ್ನ ಚಾರ್ಜ್‌ಶೀಟ್ ಸಲ್ಲಿಸಿದೆ.

Hathras gang rape: ಹತ್ರಾಸ್ ಹತ್ಯಾಚಾರ ಪ್ರಕರಣ ಸಿಬಿಐ ತೆಕ್ಕೆಗೆ

20 ವರ್ಷದ ದಲಿತ ಮಹಿಳೆ ಸೆಪ್ಟೆಂಬರ್ 14 ರಂದು ಹತ್ರಾಸ್‌ನಲ್ಲಿ ಮೇಲ್ಜಾತಿ ಸಮುದಾಯದ ನಾಲ್ವರು ಯುವಕರಿಂದ ಅತ್ಯಾಚಾರಕ್ಕೆ ಒಳಗಾಗಿ ದೆಹಲಿಯ ಆಸ್ಪತ್ರೆಯಲ್ಲಿ ಆಕೆ ಸಾವನ್ನಪ್ಪಿದ್ದಳು.ಸೆಪ್ಟೆಂಬರ್ 30 ರಂದು ಸಂತ್ರಸ್ತೆಯನ್ನು ಅಂತ್ಯಕ್ರಿಯೆ ಮಾಡಲಾಯಿತು.

ಈ ಪ್ರಕರಣವನ್ನು ಉತ್ತರ ಪ್ರದೇಶ ಪೊಲೀಸರು ಸಂತ್ರಸ್ತೆ ಕುಟುಂಬದ ಅನುಮೋದನೆಯಿಲ್ಲದೆ ರಾತ್ರೋ ರಾತ್ರಿ ದಹನ ಮಾಡಿದ್ದು ದೇಶಾದ್ಯಂತ ತೀವ್ರ ಪ್ರತಿಭಟನೆಗೆ ಕಾರಣವಾಯಿತು.ಆದಾಗ್ಯೂ, ಕುಟುಂಬದ ಇಚ್ಛೆಯಂತೆ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.ಸಿಬಿಐ ನಡೆಸಿದ ತನಿಖೆಯನ್ನು ಅಲಹಾಬಾದ್ ಹೈಕೋರ್ಟ್ ಮೇಲ್ವಿಚಾರಣೆ ಮಾಡುತ್ತದೆ ಎಂದು ಅಕ್ಟೋಬರ್ ನಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು.

ಹತ್ರಾಸ್ ಘಟನೆ ಖಂಡಿಸಿ ಇಂದು ದೇಶಾದ್ಯಂತ ಶಾಂತಯುತ ಪ್ರತಿಭಟನೆ ನಡೆಸಲಿರುವ ಕಾಂಗ್ರೆಸ್

ಈ ವಾರದ ಆರಂಭದಲ್ಲಿ, ಸಿಬಿಐ ತನ್ನ ತನಿಖೆಯನ್ನು ಮುಕ್ತಾಯಗೊಳಿಸಲು ಹೆಚ್ಚಿನ ಸಮಯವನ್ನು ಕೋರಿತು, ಅದರ ನಂತರ ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ನ್ಯಾಯಪೀಠವು ಜನವರಿ 27 ರಂದು ಪ್ರಕರಣದ ಮುಂದಿನ ವಿಚಾರಣೆಯ ದಿನಾಂಕವೆಂದು ನಿಗದಿಪಡಿಸಿದೆ.

Trending News