ನವದೆಹಲಿ: ದೇಶದ ವಿದೇಶಿ ವಿನಿಮಯ ಸಂಗ್ರಹವು 3.43 ಬಿಲಿಯನ್ ಡಾಲರ್‌ಗಳಷ್ಟು ಏರಿಕೆಯಾಗಿದ್ದು, ಮೇ 29 ಕ್ಕೆ ಕೊನೆಗೊಂಡ ವಾರದಲ್ಲಿ ಹೊಸ ಸಾರ್ವಕಾಲಿಕ ಗರಿಷ್ಠ 493.48 ಬಿಲಿಯನ್ ಡಾಲರ್‌ಗೆ ತಲುಪಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India) ಶುಕ್ರವಾರ ತಿಳಿಸಿದೆ.
COVID-19 ಸಾಂಕ್ರಾಮಿಕ ರೋಗದ ಆರ್ಥಿಕ ಪ್ರಭಾವವನ್ನು ದೇಶವು ಎದುರಿಸುತ್ತಿರುವುದರಿಂದ ಪ್ರಮುಖ ಶಕ್ತಿ ಎಂದು ಪರಿಗಣಿಸಲ್ಪಟ್ಟಿರುವ ವಿನಿಮಯ ಸಂಗ್ರಹವು ಹಿಂದಿನ ವಾರದಲ್ಲಿ 3 ಬಿಲಿಯನ್ ಏರಿಕೆಯಾಗಿ ಸಾರ್ವಕಾಲಿಕ ಗರಿಷ್ಠ 490.044 ಬಿಲಿಯನ್ ಡಾಲರ್ ಗೆ ತಲುಪಿದೆ.
ಮೇ 29 ಕ್ಕೆ ಕೊನೆಗೊಂಡ ವಾರದಲ್ಲಿ, ಒಟ್ಟಾರೆ ನಿಕ್ಷೇಪಗಳ ಪ್ರಮುಖ ಅಂಶವಾದ ವಿದೇಶಿ ಕರೆನ್ಸಿ ಆಸ್ತಿಗಳು 3.50 ಬಿಲಿಯನ್‌ನಿಂದ 455.21 ಬಿಲಿಯನ್ ಡಾಲರ್‌ಗೆ ಏರಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಂಕಿ ಅಂಶಗಳು ತಿಳಿಸಿವೆ.
ರಿಸರ್ವ್ ಬ್ಯಾಂಕ್ ನ ಅಂಕಿಅಂಶಗಳ ಪ್ರಕಾರ, ಚಿನ್ನದ ನಿಕ್ಷೇಪಗಳ ಒಟ್ಟು ಮೌಲ್ಯವು 32.68 ಬಿಲಿಯನ್ ಆಗಿದ್ದು, ಹಿಂದಿನ ವಾರಕ್ಕೆ ಹೋಲಿಸಿದರೆ 97 ಮಿಲಿಯನ್ ಡಾಲರ್ ಕಡಿಮೆಯಾಗಿದೆ.